ಟೋಕಿಯೋ ಸೆ 3 : ಟೋಕಿಯೊದಲ್ಲಿ ನಡೆಯತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಈ ಪದಕದೊಂದಿಗೆ ಒಟ್ಟು 12 ಪದಕಗಳನ್ನು ಗೆದ್ದಿರುವ ಭಾರತ ಪ್ರಸ್ತುತ ರ್ಯಾಂಕಿಂಗ್ ಪಟ್ಟಿಯಲ್ಲಿ 35ನೇ ಸ್ಥಾನವನ್ನು ಪಡೆದುಕೊಂಡಿದೆ.
ಇಂದು ನಡೆದ ಶೂಟಿಂಗ್ನಲ್ಲಿ ಭಾರತದ ಅವನಿ ಲೇಖರ ಮಹಿಳೆಯರ 50 ಮೀಟರ್ ರೈಫಲ್ 3ಪಿ ಎಸ್ಎಚ್1 ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ. ಇದಕ್ಕೂ ಮುನ್ನಾ ಚಿನ್ನದ ಪದಕವನ್ನು ಗೆದ್ದಿದ್ದ ಅವನಿ ಇಂದು ಕಂಚಿನ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಪ್ಯಾರಾಲಂಪಿಕ್ಸ್ನಲ್ಲಿ ಪದಕ ಪಡೆದವರ ವಿವಿರ :
1. ಭಾವಿನ ಪಟೇಲ್ – ಬೆಳ್ಳಿ ಪದಕ – ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್
2. ನಿಶಾದ್ ಕುಮಾರ್ – ಬೆಳ್ಳಿ ಪದಕ – ಪುರುಷರ ಹೈಜಂಪ್
3. ಅವನಿ ಲೇಖರ – ಚಿನ್ನದ ಪದಕ – ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್
4. ದೇವೇಂದ್ರ ಜಜಾರಿಯಾ – ಬೆಳ್ಳಿ ಪದಕ – ಪುರುಷರ ಜಾವೆಲಿನ್ ಥ್ರೋ
5. ಸುಂದರ್ ಸಿಂಗ್ ಗುರ್ಜಾರ್ – ಕಂಚಿನ ಪದಕ – ಪುರುಷರ ಜಾವೆಲಿನ್ ಥ್ರೋ
6. ಯೋಗೀಶ್ ಕಠುನಿಯಾ – ಬೆಳ್ಳಿ ಪದಕ – ಪುರುಷರ ಡಿಸ್ಕಸ್ ಥ್ರೋ
7. ಸುಮಿತ್ ಆಂಟಿಲ್ – ಚಿನ್ನದ ಪದಕ – ಪುರುಷರ ಜಾವೆಲಿನ್ ಥ್ರೋ
8. ಸಿಂಗರಾಜ್ ಅಧಾನ – ಕಂಚಿನ ಪದಕ – ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್
9. ಮರಿಯಪ್ಪನ್ ತಂಗವೇಲು – ಬೆಳ್ಳಿ ಪದಕ – ಪುರುಷರ ಹೈ ಜಂಪ್
10. ಶರದ್ ಕುಮಾರ್ – ಕಂಚಿನ ಪದಕ – ಪುರುಷರ ಹೈಜಂಪ್
11. ಪ್ರವೀಣ್ ಕುಮಾರ್ – ಬೆಳ್ಳಿ ಪದಕ – ಪುರುಷರ ಎತ್ತರ ಜಿಗಿತ
12. ಅವನಿ ಲೇಖರ – ಕಂಚಿನ ಪದಕ – ಮಹಿಳೆಯರ 50 ಮೀಟರ್ ರೈಫಲ್