- ಟೋಲ್ ಸುಂಕ (Toll fee) ಕರ್ನಾಟಕದಲ್ಲಿ ಏಪ್ರಿಲ್ನಿಂದ ಏರಿಕೆ
- ಮತ್ತಷ್ಟು ದುಬಾರಿಯಾಗಲಿದೆ ದರ (Price will be expensive)
- ಏಪ್ರಿಲ್ 1ರಿಂದ ಕರ್ನಾಟಕದಲ್ಲಿ (Karnataka) ಶೇ3 ರಿಂದ (Toll fees hike in Karnataka) 5 ರಷ್ಟು ಹೆಚ್ಚಳ
Bengaluru: ಏಪ್ರಿಲ್ 1 ರಿಂದ ಕರ್ನಾಟಕದಾದ್ಯಂತ ಟೋಲ್ ಸುಂಕ (Toll charges across Karnataka) ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮೂಲಗಳು ತಿಳಿಸಿವೆ. ಇದರೊಂದಿಗೆ ಕರ್ನಾಟಕದ (Karnataka) ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ (National Highway) ಪ್ರಾಧಿಕಾರ ಶಾಕ್ ನೀಡಿದಂತಾಗಲಿದೆ.
ಬೆಲೆ ಏರಿಕೆ, ಹಣದುಬ್ಬರಕ್ಕೆ (Inflation) ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್ಎಚ್ಎಐ (NHAI) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ (Karnataka) ವಿವಿಧ ರಾಷ್ಟ್ರೀಯ ಹೆದ್ದಾರಿ (National Highway) ಬಳಕೆ ಮಾಡುವ ವಾಹನ ಸವಾರರು ಏಪ್ರಿಲ್ 1ರಿಂದ ಹೆಚ್ಚಿನ ಟೋಲ್ ಶುಲ್ಕವನ್ನು (Toll fee) ಪಾವತಿ ಮಾಡಬೇಕಿದೆ.
323 ರಾಜ್ಯ ಹೆದ್ದಾರಿಗಳು (State Highways) ಸೇರಿದಂತೆ ದೇಶದಲ್ಲಿ 1,181 ಟೋಲ್ ಪ್ಲಾಜಾಗಳಿವೆ. ಕರ್ನಾಟಕದಲ್ಲಿ ಒಟ್ಟು 66 (Total 66 in Karnataka) ಟೋಲ್ ಬೂತ್ಗಳಿದ್ದು, ಕಳೆದ 5 ವರ್ಷದಲ್ಲಿ 13,702 ಕೋಟಿ ರೂ. ಟೋಲ್ ಶುಲ್ಕ ಸಂಗ್ರಹವಾಗಿದೆ.
ಶೀಘ್ರದಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ (Transportation and Highways) ಸಚಿವಾಲಯ ಹೊಸ ಟೋಲ್ ನೀತಿಯನ್ನು ಪ್ರಕಟಿಸಲಿದೆ. ಆದ್ದರಿಂದ ದೇಶಾದ್ಯಂತ ಎಲ್ಲಾ ಟೋಲ್ಗಳ ಶುಲ್ಕಗಳು (Toll charges) ಏಪ್ರಿಲ್ 1ರಿಂದ ಏರಿಕೆಯಾಗಲಿವೆ. ಹೊಸ ನೀತಿಯಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿಗಳು (Some discounts) ದೊರೆಯಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ (Central Road Transport and Highways) ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿ ಒಟ್ಟು 66 ಟೋಲ್ ಬೂತ್ಗಳಿವೆ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಎಲ್ಲಾ (Applicable) ಟೋಲ್ಗಳ ಶುಲ್ಕಗಳು ಶೇ 3 ರಿಂದ 5ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ಯಾವ ಟೋಲ್ನಲ್ಲಿ ಎಷ್ಟು ಶುಲ್ಕ ಏರಿಕೆ ಎಂದು ಅಧಿಸೂಚನೆ ಪ್ರಕಟವಾದ (Notification published) ಬಳಿಕ ತಿಳಿಯಲಿದೆ.

ಹೊಸ ಟೋಲ್ ನೀತಿಯ ಅನ್ವಯ ದೇಶಾದ್ಯಂತ ಟೋಲ್ ಶುಲ್ಕ ಹೆಚ್ಚಳ (Toll fee increase) ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ (Central Govt) ಹೇಳಿದೆ. ದೇಶದಲ್ಲಿ 1,181 ಟೋಲ್ ಪ್ಲಾಜಾಗಳಿದ್ದು, 2023-24ರಲ್ಲಿ 42,196 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಸಚಿವಾಲಯ ಮಾಹಿತಿ (Ministry Information) ನೀಡಿದೆ.
ವಾಹನಗಳಿಗೆ ಮಾಸಿಕ, ವರ್ಷದ ಪಾಸು ನೀಡುವುದು ಸೇರಿದಂತೆ ಹೊಸ ನೀತಿಯನ್ನು ಒಳಗೊಂಡ ಟೋಲ್ (Toll included) ನೀತಿಯನ್ನು ಪ್ರಕಟಿಸಲಾಗುತ್ತದೆ. ಇದರ ಅನ್ವಯ ದೇಶಾದ್ಯಂತ ಟೋಲ್ (Applicable tolls across the country) ಶುಲ್ಕಗಳು ಏರಿಕೆಯಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿಯೂ ಟೋಲ್ ಶುಲ್ಕ ಹೆಚ್ಚಳವಾಗಲಿದೆ.ಮೈಸೂರು-ಬೆಂಗಳೂರು, (Mysore-Bangalore,) ಬೆಂಗಳೂರು-ಹೈದರಾಬಾದ್, (Bangalore-Hyderabad,)
ಬೆಂಗಳೂರು-ತಿರುಪತಿ, ಬೆಂಗಳೂರು-ಪುಣೆ, ಬೆಂಗಳೂರು ಏರ್ಪೋರ್ಟ್ ರಸ್ತೆಯ (Airport Road) ಟೋಲ್ ಸೇರಿದಂತೆ ಕರ್ನಾಟಕದ ಎಲ್ಲಾ ಟೋಲ್ಗಳಲ್ಲಿ ಏಪ್ರಿಲ್ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.ರಾಜ್ಯದಲ್ಲಿ ಈಗಾಗಲೇ ಟೋಲ್ ಶುಲ್ಕಗಳು ಹೆಚ್ಚಿವೆ (Toll fees have increased.)
ಇದನ್ನೂ ಓದಿ: http://ಸ್ಯಾಂಕಿಟ್ಯಾಂಕಿ ಯಲ್ಲಿ ಕಾವೇರಿ ಆರತಿ: ಪ್ರತಿಜ್ಞಾವಿಧಿ ಹೇಳಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಇನ್ನೂ ಶೇ 3 ರಿಂದ 5ರಷ್ಟು ಏರಿಕೆ ಮಾಡಿದರೆ ವಾಹನ ಸವಾರರಿಗೆ ಟೋಲ್ ಶುಲ್ಕ ಹೊರೆಯಾಗಲಿದೆ (Toll fees hike in Karnataka) ಎಂದು ಕರ್ನಾಟಕ ರಾಜ್ಯ ಟ್ರಾವೆಲ್ (Karnataka State Travel) ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.