Bengaluru: ಬೆಂಗಳೂರು ನಗರದ ದಕ್ಷಿಣ (South of Bangalore city) ಮತ್ತು ಪಶ್ಚಿಮ (West) ಭಾಗಗಳನ್ನು ಸಂಕ್ಷಿಪ್ತವಾಗಿ ಸಂಪರ್ಕಿಸುವ 10.8 ಕಿ.ಮೀ. ಉದ್ದದ ಪ್ರಮುಖ ದಶಪಥ ರಸ್ತೆ ಮೇಜರ್ ಅರ್ಟೀರಿಯಲ್ ರೋಡ್ (Major Arterial Road) (MAR) ಇನ್ನೆರಡು ತಿಂಗಳಲ್ಲಿ ಸಿದ್ಧವಾಗಲಿದೆ.ಈ ದಶಪಥ ರಸ್ತೆಯು (Dasapatha Road) ಚಲ್ಲಘಟ್ಟ ನಮ್ಮ ಮೆಟ್ರೋ ಡಿಪೋ ದಿಂದ (Challaghat Metro Depo) ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್ (Kadabagere Cross) ವರೆಗೆ ವಿಸ್ತರಿಸಿದೆ. ಇದು ನೈಸ್ ರಸ್ತೆಗೆ (Nice Road) ಸಮಾನಾಂತರವಾಗಿ ಸುಮಾರು 2 ಕಿ.ಮೀ. ದೂರದಲ್ಲಿದೆ. ಈ ರಸ್ತೆ ಬಿಡಿಎಯ ನಾಡಪ್ರಭು ಕೆಂಪೇಗೌಡ ಲೇಔಟ್ (Nadaprabhu Kempegowda Layout) ಸಂಪರ್ಕ ಕಲ್ಪಿಸುವುದರ ಜೊತೆಗೆ, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ (West Bengaluru) ನಡುವಿನ ಪ್ರಯಾಣದ ಸಮಯವನ್ನು 1.5 ಗಂಟೆಯಿಂದ 10 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.

ಆರಂಭದಲ್ಲಿ 465 ಕೋಟಿ ರೂ. ವೆಚ್ಚದಲ್ಲಿ ಯೋಜಿಸಲಾಗಿದ್ದ ಈ ರಸ್ತೆ ಯೋಜನೆ ಈಗ 585 ಕೋಟಿ ರೂ. ವೆಚ್ಚವಾಗಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುತ್ತಿದೆ. ಬಿಡಿಎ (BDA) ನಿರ್ಮಿಸುತ್ತಿರುವ ಈ ರಸ್ತೆಯು ಕಂಬಿಪುರ (Kambipur), ಕೆ. ಕೃಷ್ಣ ಸಾಗರ (K. Krishna Sagar), ಭೀಮನಕುಪ್ಪೆ (Bhimanakuppe), ಕೊಮ್ಮಘಟ್ಟ (Kommaghatta), ಕೆಂಚನಪುರ (Kenchanpur) ಮತ್ತು ಸುಳಿಕೆರೆ ಗ್ರಾಮಗಳ ಮೂಲಕ ಹಾದುಹೋಗುತ್ತದೆ. ಇನ್ನು ಈ ಯೋಜನೆಗಾಗಿ 321.1 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭದಲ್ಲಿ ಅಡೆತಡೆ ಉಂಟಾಗಿತ್ತು ಇದೀಗ ಬಿಡಿಎ ಅರಣ್ಯ ಇಲಾಖೆಯ (BDA Forest Department) ತಡೆ ಎದುರಿಸುತ್ತಿದ್ದು, ಸುಳಿಕೆರೆ ಮೀಸಲು ಅರಣ್ಯದ (Forest) ಒಂದು ಮೂಲೆಯಲ್ಲಿ 2 ಎಕರೆ ಭೂಮಿಯನ್ನು ಬಳಸಲು ಅರಣ್ಯ ಇಲಾಖೆ (Forest Department) ಇನ್ನೂ ಅನುಮತಿ ನೀಡಬೇಕಿದೆ.ರೈಲ್ವೆ ಅಂಡರ್‌ಪಾಸ್ (Railway Underpass) ಇನ್ನೂ ನಿರ್ಮಾಣ ಹಂತದಲ್ಲಿದೆ ಮತ್ತು ಮೈಸೂರು ರಸ್ತೆಯ (Mysore Road) ಬಳಿ ಸುಮಾರು 300 ಮೀಟರ್ ರಸ್ತೆ ಕಾಮಗಾರಿಯು (Road works) ಬಾಕಿ ಇದೆ.
ಮೇಜರ್ ಆರ್ಟೀರಿಯಲ್ ರಸ್ತೆಗೆ (Major Arterial Road) 2011ರಲ್ಲಿ ಮೊದಲಿಗೆ ಯೋಜನೆ ರೂಪಿಸಲಾಗಿತ್ತು. ನಂತರ ಹಲವಾರು ಕಾರಣಗಳಿಂದ ವಿಳಂಬವಾಯಿತು. 2017 ರಲ್ಲಿ ಟೆಂಡರ್ ನೀಡಲಾಗಿತ್ತು. 2018 ರಲ್ಲಿ ಕಾಮಗಾರಿಯೂ ಆರಂಭವಾಗಿತ್ತು. ಆರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು 2019ರ ಆಗಸ್ಟ್ (August) ತಿಂಗಳನ್ನು ನಿಗದಿಪಡಿಸಲಾಗಿತ್ತು. ಕೊನೆಗೂ ಇದೀಗ ಸಾಕಾರಗೊಳ್ಳುವ ನಿರೀಕ್ಷೆ ಇದೆ.