ಇಂದು ಏಪ್ರಿಲ್ 01 ರಿಂದ ರಾಷ್ಟ್ರೀಯ ಹೆದ್ದಾರಿಯ(NHAI) ಟೋಲ್(Toll) ದರದಲ್ಲಿ ಶೇ. 10-15 ರಷ್ಟು ದರವನ್ನು ಏರಿಕೆ ಮಾಡಲಾಗುವುದು ಎಂಬ ಸುದ್ದಿ ವರದಿಯಾಗಿದೆ. ಹೌದು, ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವುದು ವಾಹನ ಸವಾರರಿಗೆ ಮತ್ತಷ್ಟು ಕಠಿಣವಾಗಬಹುದು. ನವದೆಹಲಿಯಲ್ಲಿ(New Delhi) ಗುರುವಾರ ರಾತ್ರಿ 12 ಗಂಟೆಯ ಬಳಿಕ ರಾಷ್ಟ್ರೀಯ ಹೆದ್ದಾರಿ ಟೋಲ್ ದರ ದುಪ್ಪಟ್ಟಾಗಲಿದೆ ಎಂದು ವರದಿ ನೀಡಲಾಗಿತು.

ಟೋಲ್ ದರದಲ್ಲಿ ತೆರಿಗೆ ವಿಭಾಗಕ್ಕೆ ಶೇ.10-15 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHIT) ಟೋಲ್ ಮೇಲೆ ಬೀಳುವ ತೆರಿಗೆಯನ್ನು ಹೆಚ್ಚಿಸಲಾಗಿದ್ದು, 15 ರಿಂದ 65 ರೂ.ವರೆಗೂ ಏರಿಕೆ ಮಾಡಲಾಗಿದೆ. ಇದನ್ನು ಕೇಳಿದ ವಾಹನ ಸವಾರರು ತಮ್ಮ ಜೇಬನ್ನು ಒಮ್ಮೆ ಅಲ್ಲ ಎರಡೆರೆಡು ಬಾರಿ ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಈ ಮೂಲಕ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಬೆಳೆಸುವವರಿಗೆ ಇದು ಸಂಕಷ್ಟವನ್ನು ತಂದೊಡ್ಡಿದೆ. ಸದ್ಯ ದೆಹಲಿಯ ಟೋಲ್ ಪ್ಲಾಜಾಗಳಿಗೆ ಆಯಾ ತೆರಿಗೆ ಬೆಲೆ ಪ್ರಕಟವಾಗಿದ್ದು, ಆಯಾ ರಾಜ್ಯಗಳಲ್ಲಿ ಕೆಲ ರಾಜ್ಯಗಳಿಗೆ ಏರಿಕೆಯ ಬೆಲೆ ಇನ್ನು ಪ್ರಕಟವಾಗಿಲ್ಲ!