- ಭಾರತ್ ಬಂದ್‌ಗೆ 10 ಸೆಂಟ್ರಲ್ ಟ್ರೇಡ್ (tomorrow bharat bandh) ಯೂನಿಯನ್ಗಳು ಕರೆ
- ನಾಳೆ ಸಾರ್ವಜನಿಕ ಸಾರಿಗೆ ಬಸ್ ಸೇವೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ
- ರೈತರು ಮತ್ತು ಗ್ರಾಮೀಣ ಕಾರ್ಮಿಕರ ಬೆಂಬಲ
New Delhi: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು (tomorrow bharat bandh) ವಿರೋಧಿಸಿ, ನಾಳೆ ಜುಲೈ 9, 2025 ರಂದು ಭಾರತದಾದ್ಯಂತ ರಾಷ್ಟ್ರವ್ಯಾಪಿ ಮುಷ್ಕರ (Protest) ನಡೆಯಲಿದೆ.

25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ದೇಶದ ಪ್ರಮುಖ ಸೇವೆಗಳಲ್ಲಿ ವ್ಯಾಪಕ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಸಂಘಟನೆಗಳು ನಡೆಸುತ್ತಿರುವ ಪ್ರಮುಖ ಹೋರಾಟವಾಗಿದೆ.
ಈ ಮುಷ್ಕರಕ್ಕೆ ಹತ್ತು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳ (Central Labor Organization) ವೇದಿಕೆ ಮತ್ತು ಬಹುತೇಕ ಎಲ್ಲಾ ಸ್ವತಂತ್ರ ಅಖಿಲ ಭಾರತ ವಲಯ ಒಕ್ಕೂಟಗಳು/ಸಂಘಟನೆಗಳು (All India Zonal Unions/Organizations) ಒಟ್ಟಾಗಿ ಕರೆ ನೀಡಿವೆ.
ಇದರ ಜೊತೆಗೆ, ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಸಹ ಸಂಪೂರ್ಣ ಬೆಂಬಲ ಘೋಷಿಸಿವೆ.
ಈ ಮುಷ್ಕರವು ಸರ್ಕಾರಕ್ಕೆ ಬಲವಾದ ಸಂದೇಶ ರವಾನಿಸುವ ಉದ್ದೇಶವನ್ನು ಹೊಂದಿದೆ.
ಕಾರ್ಮಿಕ ಸಂಘಗಳು ಕಳೆದ ವರ್ಷ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಸಲ್ಲಿಸಿದ 17 ಅಂಶಗಳ ಬೇಡಿಕೆಗಳ ಸನ್ನದಿನ ಮೇಲೆ ಈ ಮುಷ್ಕರ ಆಧರಿಸಿದೆ. ಸರ್ಕಾರವು ಕಾರ್ಮಿಕರ ಕಳವಳಗಳನ್ನು
ನಿರ್ಲಕ್ಷಿಸಿದೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ನಡೆಸಲು ವಿಫಲವಾಗಿದೆ ಎಂದು ಒಕ್ಕೂಟಗಳು ಆರೋಪಿಸಿವೆ.
- ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ: ಈ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಒಕ್ಕೂಟಗಳು ಆರೋಪಿಸಿವೆ.
- ಕೆಲಸದ ಸಮಯ ಹೆಚ್ಚಳ: ಕಾರ್ಮಿಕರ ಕೆಲಸದ ಸಮಯವನ್ನು ಹೆಚ್ಚಿಸುವ ನೀತಿಗಳನ್ನು ವಿರೋಧಿಸಲಾಗುತ್ತಿದೆ.
- ಗುತ್ತಿಗೆ ಮತ್ತು ಹೊರಗುತ್ತಿಗೆ: ಸಾರ್ವಜನಿಕ ವಲಯದಲ್ಲಿ ಗುತ್ತಿಗೆ ಆಧಾರಿತ ನೇಮಕಾತಿಗಳು ಕಾರ್ಮಿಕರ ಭದ್ರತೆಗೆ ಧಕ್ಕೆ ತರುತ್ತಿವೆ.
- ಹೊಸ ನೇಮಕಾತಿಗಳ ಕೊರತೆ: ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಶಾಶ್ವತ ಉದ್ಯೋಗ ಸೃಷ್ಟಿಯ ಕೊರತೆ.
- ಕಾರ್ಪೊರೇಟ್ ಪರ ನೀತಿಗಳು: ಸರ್ಕಾರವು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ ಎಂಬ ಆರೋಪ.
- ಬಿಹಾರ ಮತದಾರರ ಪಟ್ಟಿ ವಿವಾದ: ಬಿಹಾರದಲ್ಲಿ ಚುನಾವಣಾ ಆಯೋಗವು (ECI) ಆದೇಶಿಸಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿರ್ಧಾರವೂ ಮುಷ್ಕರದ ಬೇಡಿಕೆಗಳ ಪಟ್ಟಿಯಲ್ಲಿದೆ. ಈ ಆದೇಶವು ಅನಿಯಂತ್ರಿತವಾಗಿ ಲಕ್ಷಾಂತರ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸುತ್ತದೆ ಎಂದು ಸಂಘಟನೆಗಳು ಗಂಭೀರ ಆತಂಕ ವ್ಯಕ್ತಪಡಿಸಿವೆ.
ಯಾವೆಲ್ಲಾ ಸೇವೆಗಳು ಅಸ್ತವ್ಯಸ್ತ?
ನಾಳೆಯ ಮುಷ್ಕರದಿಂದಾಗಿ ದೇಶದ ಪ್ರಮುಖ ಸೇವೆಗಳು ಮತ್ತು ವಲಯಗಳಲ್ಲಿ ವ್ಯಾಪಕ ಅಸ್ತವ್ಯಸ್ತತೆ ಉಂಟಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ:
- ಬ್ಯಾಂಕಿಂಗ್ ಮತ್ತು ವಿಮೆ (Banking and insurance) : ಬಹುತೇಕ ಎಲ್ಲಾ ಸಾರ್ವಜನಿಕ ಮತ್ತು ಕೆಲವು ಖಾಸಗಿ ಬ್ಯಾಂಕುಗಳು ಹಾಗೂ ವಿಮಾ ಕಂಪನಿಗಳ ಸೇವೆಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.
ಆನ್‌ಲೈನ್ ಸೇವೆಗಳು ಲಭ್ಯವಿದ್ದರೂ, ಭೌತಿಕ ಶಾಖೆಗಳಲ್ಲಿ ವ್ಯತ್ಯಯ ಸಾಮಾನ್ಯ. - ವಿದ್ಯುತ್ ವಲಯ (Power sector) : ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ 27 ಲಕ್ಷಕ್ಕೂ ಹೆಚ್ಚು ನೌಕರರು ಮುಷ್ಕರ ನಡೆಸಲಿದ್ದಾರೆ.
ಇದು ದೇಶಾದ್ಯಂತ ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಲಾಗಿದೆ. - ಸಾರಿಗೆ (Transportation) : ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಆಟೋರಿಕ್ಷಾಗಳ ಸೇವೆಗಳು ಲಭ್ಯವಿಲ್ಲದೆ ಜನರಿಗೆ ತೊಂದರೆಯಾಗಬಹುದು.
ರೈಲ್ವೆ ಸೇವೆಗಳ ಮೇಲೆ ನೇರ ಪರಿಣಾಮ ಅಷ್ಟಾಗಿ ಇರದಿದ್ದರೂ, ಸ್ಥಳೀಯ ಮಟ್ಟದಲ್ಲಿ ಅಡಚಣೆಯಾಗಬಹುದು. - ಕಾರ್ಖಾನೆಗಳು ಮತ್ತು ಉತ್ಪಾದನಾ ಘಟಕಗಳು (Factories and manufacturing plants): ಕಲ್ಲಿದ್ದಲು ಗಣಿಗಾರಿಕೆ, ಬಂದರುಗಳು, ಕೈಗಾರಿಕಾ ಕಾರ್ಖಾನೆಗಳು ಮತ್ತು ಇತರ
ಉತ್ಪಾದನಾ ಘಟಕಗಳಲ್ಲಿ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಇನ್ನು ಈ ಭಾರತ್ ಬಂದ್‌ನಿಂದಾಗಿ ಕೆಲವು ರಾಜ್ಯಗಳಲ್ಲಿ ಗರಿಷ್ಠ ಪರಿಣಾಮ ಬೀರುವ ನಿರೀಕ್ಷೆಯಿದೆ. ಪ್ರಮುಖವಾಗಿ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ,
ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಷ್ಕರದ ಬಿಸಿ ಹೆಚ್ಚಾಗಿರಬಹುದು. ಈ ರಾಜ್ಯಗಳಲ್ಲಿ ಕಾರ್ಮಿಕ ಮತ್ತು ರೈತ ಸಂಘಟನೆಗಳು ಬಲವಾಗಿದ್ದು, ಬಂದ್‌ಗೆ ಹೆಚ್ಚಿನ ಬೆಂಬಲ ಸಿಗುವ
ಸಾಧ್ಯತೆಯಿದೆ.ಕರ್ನಾಟಕದಲ್ಲಿಯೂ ಮುಷ್ಕರಕ್ಕೆ ಕೆಲ ಕಾರ್ಮಿಕ ಸಂಘಟನೆಗಳು, ಸಾರಿಗೆ ಒಕ್ಕೂಟಗಳು ಮತ್ತು ಬ್ಯಾಂಕಿಂಗ್ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ
ನಗರಗಳಲ್ಲಿ ಸಾರಿಗೆ ಸೇವೆಗಳಲ್ಲಿ ಭಾಗಶಃ ವ್ಯತ್ಯಯ ಉಂಟಾಗಬಹುದು. ಸರ್ಕಾರಿ ಬಸ್ಸುಗಳು ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದ್ದರೂ, ಖಾಸಗಿ ಬಸ್, ಆಟೋ ಮತ್ತು ಟ್ಯಾಕ್ಸಿ ಸೇವೆಗಳಲ್ಲಿ ಅಡಚಣೆಯಾಗಬಹುದು ಎನ್ನಲಾಗುತ್ತಿದೆ.
ಇದನ್ನು ಒದಿ : ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಇದೊಂದು ಅಧಿಸೂಚಿತ ಖಾಯಿಲೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್