ಟೂಲ್ ಕಿಟ್ ಪ್ರಕರಣ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ಮಂಜೂರು

ಹೊಸದಿಲ್ಲಿ, ಫೆ. 23: ರೈತರ ಪ್ರತಿಭಟನೆಗೆ ಸಂಬಂಧಿಸಿದ ಸೋಷಿಯಲ್ ಮೀಡಿಯಾದಲ್ಲಿ “ಟೂಲ್ ಕಿಟ್” ಹಂಚಿಕೊಳ್ಳುವಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ದಿಶಾ ರವಿ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ಬಳಿಕ ತೀರ್ಪು ಕಾಯ್ದಿರಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಂಗಳವಾರ ಜಾಮೀನು ಮಂಜೂರು ಮಾಡಿದರು. ಇದರಿಂದ ಬಂಧಿತರಾಗಿ ಒಂಬತ್ತು ದಿನಗಳ ಬಳಿಕ ದಿಶಾ ರವಿಗೆ ಕೊಂಚ ನಿರಾಳತೆ ದೊರಕಿದಂತಾಗಿದೆ.

ಒಂದು ಲಕ್ಷ ಮೊತ್ತದ ಎರಡು ಬಾಂಡ್‌ ಗಳ ಭದ್ರತೆಯನ್ನು ನೀಡಿ ಜಾಮೀನು ಪಡೆಯಲು ಸೂಚಿಸಿದ ನ್ಯಾಯಾಲಯ.
ಇತ್ತ ದಿಶಾ ರವಿ ಅವರ ಪೊಲೀಸ್‌ ವಶದ ಒಂದು ದಿನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸುವಂತೆ ದೆಹಲಿ ಪೊಲೀಸರು ಕೇಳಿದ್ದರು. ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಕೋರಿಕೆ ಅರ್ಜಿ ವಜಾಗೊಂಡಿದೆ.

ದಿಶಾ ರವಿ ಪರ ಹಾಜರಿದ್ದ ವಕೀಲ ಸಿದ್ಧಾರ್ಥ್ ಅಗರವಾಲ್, ಖಲಿಸ್ತಾನ ಚಳವಳಿಗೂ ದಿಶಾಗೂ ಸಂಬಂಧವಿಲ್ಲ. ಅವರ ಉದ್ದೇಶ ಪರಿಸರ ರಕ್ಷಣೆ ಮತ್ತು ಕೃಷಿಗೆ ಮಾತ್ರವೇ ಸೀಮಿತವಾಗಿದೆ. ಇನ್ನಿಬ್ಬರು ಆರೋಪಿಗಳಾದ ನಿಕಿತಾ ಜಾಕೋಬ್ ಹಾಗೂ ಶಂತನು ಮುಲುಕ್ ಅವರಿಗೆ ಕಾಲಾವಕಾಶ ನೀಡಲು ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ದಿಶಾ ರವಿಗೂ ಜಾಮೀನು ನೀಡುವಂತೆ ಕೋರಿದರು. ದಿಶಾ ರವಿಯನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ಬೆಂಗಳೂರಿನಿಂದ ಬಂಧಿಸಿ ದೆಹಲಿಗೆ ಕರೆತಂದಿತು.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.