ಭಾರತದ ಟಾಪ್ 10 ಅತ್ಯಂತ ಭ್ರಷ್ಟ ರಾಜ್ಯಗಳು ಯಾವುವು ; ಕರ್ನಾಟಕಕ್ಕೆ ಎಷ್ಟನೆ ಸ್ಥಾನ ಗೊತ್ತಾ?

ಭ್ರಷ್ಟಾಚಾರ ಅಂದ್ರೇನೇ ಬೆಚ್ಚಿ ಬೀಳೋ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ನಮ್ಮ ದೇಶವನ್ನ ದಿವಾಳಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಸರ್ಕಾರಿ ಕೆಲಸಗಳಾಗಬೇಕಾದ್ರೆ ಶೇ 50 ರಿಂದ 60 ಪರ್ಸಂಟೇಜ್‌ ಕೊಡಬೇಕು ಅಂದ್ರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇನ್ನು ಯಾವ ಮಟ್ಟದಲ್ಲಿ ತಾಂಡವವಾಡುತ್ತಿದೆ ಅನ್ನೋದನ್ನ ನೀವೇ ಲೆಕ್ಕ ಹಾಕಿ. ಭಾರತ ಭ್ರಷ್ಟಾಚಾರ ಸಮೀಕ್ಷೆ 2019ರ ವರದಿಯಲ್ಲಿ ಟಾಪ್‌ 10 ಭ್ರಷ್ಟ ರಾಜ್ಯಗಳ ಕುರಿತು ಶಾಕಿಂಗ್ ವಿಚಾರಗಳು ಬಯಲಾಗಿದೆ. ಹಾಗಾದ್ರೆ ಆ ವರದಿಯಲ್ಲಿ ಏನಿದೆ? ಟಾಪ್‌ 10 ಸ್ಥಾನ ಯಾರಿಗೆ ಸಿಕ್ಕಿದೆ ಅನ್ನೋದನ್ನು ನೋಡೋಣ.

ರಾಜ್ಯ: ಗುಜರಾತ್ ಲಂಚ ಕೊಟ್ಟವರ ಪ್ರಮಾಣ: 48% : ಹೌದು ಗುಜರಾತ್ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ 10ನೇ ಸ್ಥಾನ ಪಡೆದಿದೆ. ಇಲ್ಲಿ ಯಾವುದೇ ಕೆಲ್ಸ ಆಗ್ಬೇಕಾದರೆ ಲಂಚ ಪಾವತಿಸಲೇಬೇಕು ಮತ್ತು ಇದನ್ನು ಗುಜರಾತ್ ನ ಜನರೇ ಒಪ್ಪಿಕೊಂಡಿದ್ದಾರೆ. 26% ಜನ ಹಲವಾರು ಬಾರಿ ಲಂಚ ನೀಡಿ ಅವರ ಕೆಲಸ ಮಾಡಿಸಿಕೊಂಡಿದ್ದಾರೆ. ಹಾಗು 22% ನ ಜನ 1 ಬಾರಿ ಅಥವಾ 2 ಬಾರಿ ಲಂಚ ನೀಡಿ ಅವರ ಕೆಲಸ ಮಾಡಿಸಿಕೊಂಡಿದ್ದಾರೆ . ಅಷ್ಟೆ ಅಲ್ಲ 22% ಜನ ಯಾವುದೇ ಲಂಚ ನೀಡದೆಯೂ ಅವರ ಕೆಲಸ ಮಾಡಿಸಿಕೊಂಡಿದ್ದಾರೆ.

ರಾಜ್ಯ- ಕೇರಳ ಲಂಚ ಕೊಟ್ಟವರ ಪ್ರಮಾಣ: 51 % : ಕೇರಳ ಭ್ರಷ್ಟಾಚಾರದ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದೆ. ಇಲ್ಲಿ ಕೇವಲ 10% ಜನ ಯಾವುದೇ ಕೆಲಸ ಮಾಡಿಸಿಕೊಳೊಕ್ಕೆ ಲಂಚ ನೀಡಲೇಬೇಕೆಂದು ಒಪ್ಪಿಕೊಂಡಿದ್ದಾರೆ. 51% ಜನ ಒಂದು ಬಾರಿ ಅಥವಾ 2 ಬಾರಿ ಲಂಚ ನೀಡಿದ್ದಾರೆಂದು 2019 ರಲ್ಲಿ ನಡೆದ ವರದಿಯಲ್ಲಿ ತಿಳಿಸಿದೆ. ಹಾಗೂ 49% ಜನ ಯಾವುದೇ ಲಂಚ ನೀಡದೆ ಅವರ ಕೆಲಸ ಮಾಡಿಸಿಕೊಂಡಿದ್ದಾರೆ.

ರಾಜ್ಯ- ತಮಿಳುನಾಡು ಲಂಚ ಕೊಟ್ಟವರ ಪ್ರಮಾಣ: 62% ತಮಿಳುನಾಡು ಭ್ರಷ್ಟಾಚಾರದ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಭಾರತಿಯ ಭ್ರಷ್ಟಾಚಾರ ಸಮಿತಿ ಪ್ರಕಾರ ತಮಿಳುನಾಡಿನಲ್ಲಿ 62% ಜನ ಕೆಲಸ ಆಗಲು ಲಂಚ ನೀಡುತ್ತೇವೆ ಅಂತ ಹೇಳಿದ್ದಾರೆ. 35% ಜನ ಹಲವಾರು ಬಾರಿ ಲಂಚ ಕೊಟ್ಟು ಅವ್ರ ಕೆಲ್ಸ ಮಾಡಿಸ್ಕೊಂಡಿದ್ರೆ, 27% ಜನ 1 ಬಾರಿ ಅಥವಾ 2 ಬಾರಿ ಲಂಚ ನೀಡಿ ಅವರ ಕೆಲಸ ಮಾಡಿಸಿಕೊಂಡಿದ್ದಾರೆ. ಕೇವಲ 8% ಜನ ಅಷ್ಟೇ ಯಾವುದೇ ಲಂಚ ನೀಡದೆ ಅವರ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಸಕ್ಸಸ್ ಆಗಿದ್ದಾರೆ.


ರಾಜ್ಯ- ಕರ್ನಾಟಕ ಲಂಚ ಕೊಟ್ಟವರ ಪ್ರಮಾಣ: 63% : ಹೌದು, ನಮ್ಮ ಕರ್ನಾಟಕ ಭ್ರಷ್ಟಾಚಾರದ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ . ಇಲ್ಲಿ ಸರ್ವೆ ನಡೆಸಿದಾಗ ತಿಳಿದು ಬಂದಿದ್ದೇನಂದ್ರೆ ಶೇ 63% ಜನ ಅವರ ಯಾವುದೇ ಅಫಿಶೀಯಲ್ ಕೆಲ್ಸ್ ಆಗ್ಬೇಕಾದ್ರೆ ಲಂಚ ನೀಡ್ತೀವಿ ಅಂತಾ ಒಪ್ಪಿಕೊಂಡಿದ್ದಾರೆ . ಅಷ್ಟೆ ಅಲ್ಲ 35% ಜನ ಯಾವುದೇ ಕೆಲ್ಸ್ ಆಗ್ಬೇಕಾದ್ರೆ ಪ್ರತಿ ಬಾರಿ ಲಂಚ ಕೊಟ್ಟು ಕೆಲ್ಸ ಮಾಡಿಸ್ಕೋತಾರೆ. 28% ಜನ ಒಂದ್ಸಲಿ ಅಥವಾ 234 ಆ ರೀತಿ ಲಂಚ ಕೊಟ್ಟು ಕೆಲ್ಸ ಮಾಡ್ಕೊತಾರೆ . ಕೇವಲ 9% ಜನ ಅಷ್ಟೇ ಯಾವುದೇ ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳಲು ಸಕ್ಸಸ್ ಆಗಿದ್ದಾರೆ . ಇದು ಇದೇ ರೀತಿ ಮುಂದುವರಿದರೆ ನಮ್ಮ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನಕ್ಕೆ ಬರೋದು ಡೌಟೇ ಇಲ್ಲ.

ರಾಜ್ಯ- ಪಂಜಾಬ್ ಲಂಚ ಕೊಟ್ಟವರ ಪ್ರಮಾಣ: 63% : ಪಂಜಾಬ್ ಐತಿಹಾಸಿಕ ಸ್ಥಳಗಳು , ಸಂಸ್ಕೃತಿ ಪ್ರಗತಿಗೆ ಹೆಸರುವಾಸಿ . ಅಷ್ಟೇ ಅಲ್ಲ ಭ್ರಷ್ಟಾಚಾರಕ್ಕೂ ಕೂಡ ಪಂಜಾಬ್ ಫೇಮಸ್‌ ಆಗ್ತಿದೆ. ಪಂಜಾಬ್‌ಗೆ ಭ್ರಷ್ಟಾಚಾರದಲ್ಲಿ ಆರನೇ ಸ್ಥಾನದಲ್ಲಿದೆ . ಇಲ್ಲಿನ ಶೇಕಡಾ 63ರಷ್ಟು ಜನರು ಅವರ ಯಾವುದೇ ಕೆಲಸ ಮಾಡಿಸ್ಕೋಬೇಕಾದರು ಲಂಚ ನೀಡಿ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ . ಪೋಲಿಸ್ ಕೆಲಸ , ಸೈಟ್ ರಿಜೀಸ್ಟ್ರೇಷನ್ ಯಾವುದೇ ಕೆಲಸಕ್ಕೂ ಸಹ ಇಲ್ಲಿ ಲಂಚ ನೀಡಲೇಬೇಕಾಗಿದೆ .

ರಾಜ್ಯ- ತೆಲಂಗಾಣ ಲಂಚ ಕೊಟ್ಟವರ ಪ್ರಮಾಣ: 67% : ಅತಿ ಹೆಚ್ಚು ಭ್ರಷ್ಟಾಚಾರ ರಾಜ್ಯಗಳಲ್ಲಿ ತೆಲಂಗಾಣ ಟಾಪ್ 5 ಪಟ್ಟಿಯಲ್ಲಿದೆ . ಇಲ್ಲಿ ಯಾವುದೇ ಕೆಲ್ಸ ಆಗ್ಬೇಕಾದ್ರೂ ಅಥವಾ ಅರ್ಧ ಆಗಿರೋ ಕೆಲ್ಸಾ ಪೂರ್ತಿಗೊಳಿಸಲು ಸಹ ಇಲ್ಲಿ ಹೆಚ್ಚು ಲಂಚ ನೀಡಬೇಕಾಗಿದೆ ಎಂದು ಭಾರತೀಯ ಭ್ರಷ್ಟಾಚಾರ ಸಮಿತಿ ವರದಿಯಿಂದ ತಿಳಿದುಬಂದಿದೆ.

ರಾಜ್ಯ- ಜಾರ್ಖಂಡ್ ಲಂಚ ಕೊಟ್ಟವರ ಪ್ರಮಾಣ: 74% : ಜಾರ್ಖಂಡ್ ಭ್ರಷ್ಟಾಚಾರದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ . ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವ ರಾಜ್ಯಗಳಲ್ಲಿ ಇದು 4ನೇ ಸ್ಥಾನ ಪಡೆದಿದೆ. ಇದರಲೇ ನಾವು ಯೋಚ್ನೆ ಮಾಡ್ಬೇಕು ಎಷ್ಟು ಮಟ್ಟಿಗೆ ಇಲ್ಲಿ ಎಲ್ಲಾ ಪರಿಸ್ಥತಿ ಯಾವ ಹಂತಕ್ಕೆ ತಲುಪಿದೆ ಅಂತ . ಯಾವುದೆ ಕೆಲ್ಸ ಸೈಟ್ ರಿಜಿಸ್ಟ್ರೇಷನ್ ಯಾವುದೇ ಜಾಬ್ ಅಥವಾ ಅರ್ಧ ನಿಂತಿರೋ ಕೆಲ್ಸಾ ಮುಂದುವರಿಬೇಕಾದರು ಲಂಚ ಕೊಟ್ಟೆ ಕೆಲ್ಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ.

ರಾಜ್ಯ: ಉತ್ತರ ಪ್ರದೇಶ ಲಂಚ ಕೊಟ್ಟವರ ಪ್ರಮಾಣ: 74% ಉತ್ತರಪ್ರದೇಶ ಭ್ರಷ್ಟಾಚಾರ ರಾಜ್ಯಗಳಲ್ಲಿ ಟಾಪ್ ಮೂರನೇ ಸ್ಥಾನದಲ್ಲಿದೆ . ಇಲ್ಲಿ Anti corruption bureau, Anti corruption portal ಆ ರೀತಿ schemes ಬಂದ್ರೂ ಸಹ ಭ್ರಷ್ಟಾಚಾರಕ್ಕೆ ಬ್ರೇಕೇ ಬೀಳುತ್ತಿಲ್ಲ. ಇಲ್ಲಿ ನಡೆದ ಸರ್ವೆ ಪ್ರಕಾರ 74% ಜನ ಯಾವುದೇ ಕೆಲಸಕ್ಕು ಸಹ ಲಂಚ ಕೊಡ್ತೀವಿ ಅಂತ ಒಪ್ಪಿಕೊಂಡಿದ್ದಾರೆ . ಹಾಗೂ ಕೇವಲ 3% ಜನ ಅಷ್ಟೇ ಲಂಚ ಕೊಡದೆ ಅವರ ಕೆಲಸ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ರಾಜ್ಯ: ಬಿಹಾರ ಲಂಚ ಕೊಟ್ಟವರ ಪ್ರಮಾಣ: 75% ಬಿಹಾರ್ ಭ್ರಷ್ಟಾಚಾರದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ . ಭಾರತೀಯ ಭ್ರಷ್ಟಾಚಾರ ಸಮಿತಿ survey ಪ್ರಕಾರ 75% ಜನ ನಾವು ಲಂಚ ನೀಡುತ್ತೇವೆ ಎಂದು ಅವರೇ ಒಪ್ಪಿಕೊಂಡಿದ್ದಾರೆ . ಇಲ್ಲಿ ಪ್ರತಿಯೊಂದು ಕೆಲಸಕ್ಕೂ ಲಂಚ ನಿಡಲೇಬೇಕು . ಪ್ರಾಪರ್ಟಿ ರಿಜಿಸ್ಟ್ರೇಷನ್, land issues ಅಥವಾ ಮುನಿಸಿಪಲ್ ಕಾರ್ಪೋರೇಷನ್ ಗೂ ಸಹ 6%- 47% ರೀತಿ ಲಂಚ ನೀಡಬೇಕಾಗಿದೆ. Police, ಎಲೆಕ್ಟ್ರಿಸಿಟಿ ಬೋರ್ಡ್, Transport office, Tax office ಈ ರೀತಿ ಹಲವಾರು ಭಾಗದಲ್ಲೂ ಸಹ ಲಂಚ ನೀಡಿದ್ದಾರೆ ಎಂದು ಸರ್ವೆ ಮೂಲಕ ತಿಳಿದುಬಂದಿದೆ.

ರಾಜ್ಯ- ರಾಜಸ್ಥಾನ ಲಂಚ ಕೊಟ್ಟವರ ಪ್ರಮಾಣ: 78% ರಾಜಸ್ಥಾನ್ ಕರಪ್ಷನ್ ಚಾರ್ಟ್‌ ನಲ್ಲಿ ಮೊದಲನೇ ಸ್ಥಾನದಲ್ಲಿದೆ . ಕರಪ್ಷನ್ ಸರ್ವೇ ಪ್ರಕಾರ 78% ಜನ ನಾವು ಲಂಚ ಕೊಡುತ್ತೇವೆ ಹೌದು ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿ ಯಾವುದೇ ಕೆಲ್ಸ ಆಗ್ಬೇಕಾದ್ರೊ ಉದಾ. ಪೊಲೀಸ್ ಇಲಾಖೆ ,ಕಾರ್ಪೋರೇಷನ್. Transport office ಮುಖ್ಯವಾಗಿ ಯಾವುದೇ ಒಂದು ಫೈಲನ್ನೂ move ಮಾಡ್ಬೇಕಾದ್ರೊ, property registration, land issue ಯಾವುದೇ ಕೆಲಸಕ್ಕೂ ಲಂಚ ಕೊಡದೆ ಫೈಲ್ ಮುಂದೆ ಹೋಗುವುದಿಲ್ಲ. ಭ್ರಷ್ಟಾಚಾರ ಇಲ್ಲಿನ ಜನರಿಗೆ ಮಾಮೂಲಿ ಆಗೋಗಿದೆ.

ಇದು ನಮ್ಮ ದೇಶದ ಬ್ರಹ್ಮಾಂಡ ಭ್ರಷ್ಟಾಚಾರದ ಚಿತ್ರಣ. ವರದಿಯ ನಂತ್ರ ಈ ಕೊಳಕು ಕೆಲಸಕ್ಕೆ ಬ್ರೇಕ್‌ ಬಿದ್ದಿದೆಯಾ? ಖಂಡಿತಾ ಇಲ್ಲ. ಇದು ಇನ್ನಷ್ಟು ಹೆಚ್ಚುತ್ತಲೇ ಇದೆ. ಕಮಿಷನ್ ದಂಧೆ ದಿನೇ ದಿನೇ ಏರುತ್ತಲೇ ಇದೆ. ಇದು ನಿಜವಾಗ್ಲೂ ಆತಂಕ ಮೂಡಿಸುತ್ತಿರುವ ವಿಚಾರ.

  • ಪದ್ಮಶ್ರೀ

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.