ಪ್ರವಾಸಿ ತಾಣಗಳಲ್ಲಿರುವ ಹೋಂಸ್ಟೇಗಳ, ರೆಸಾರ್ಟ್ ಮಾಲೀಕರಿಗೆ ಹೊಸ ರೂಲ್ಸ್
ಅನುಮತಿಯಿಲ್ಲದೆ ಪ್ರವಾಸಿಗರನ್ನು ಅರಣ್ಯ ಪ್ರದೇಶಗಳಿಗೆ ಕರೆದೊಯ್ಯುವ ಹಾಗಿಲ್ಲ
ಜಿಲ್ಲಾ ಅಧಿಕಾರಿಗಳಿಗೆ ಆಗಾಗ ಸ್ಥಳ ಭೇಟಿ ನೀಡಲು ಸೂಚನೆ (Tourist safety is top priority)
Bengaluru: ಕಳೆದ ಕೆಲ ದಿನಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯಲ್ಲಿ ಒಡಿಶಾದ ಪ್ರವಾಸಿಗರೊಬ್ಬರ ಕೊಲೆ ಹಾಗೂ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದ ನಂತರ ರಾಜ್ಯ ಸರ್ಕಾರ (State Govt) ಮಂಗಳವಾರ ಹೋಂಸ್ಟೇ, ರೆಸಾರ್ಟ್ (Homestay, Resort) ಮತ್ತು ಹೋಟೆಲ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅತಿಥಿಗಳ ಸುರಕ್ಷತೆಯನ್ನು (Safety of guests) ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು (Security measures) ನಿರ್ದೇಶನವು ಕಡ್ಡಾಯಗೊಳಿಸಿದೆ. ಸಣಾಪುರ ಘಟನೆಯು ದುಃಖಕರ ಮತ್ತು ವಿಷಾದನೀಯ ಎಂದಿರುವ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಮಾರ್ಗಸೂಚಿಗಳನ್ನು (New guidelines) ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸೂಚನೆ ನೀಡಿದೆ.
ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿರುವ (Tourist spot) ಹೋಂಸ್ಟೇಗಳು ವಿದೇಶಿ ಪ್ರವಾಸಿಗರು (Foreign tourists) ಸೇರಿದಂತೆ ಎಲ್ಲ ಪ್ರವಾಸಿಗರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರವಾಸಿಗರನ್ನು ದೂರದ ಅಥವಾ ನಿರ್ಜನ ಪ್ರದೇಶಗಳಿಗೆ (deserted areas) ಕರೆದೊಯ್ಯುವ ಮೊದಲು, ಪೂರ್ವ ಮಾಹಿತಿಯನ್ನು ಒದಗಿಸಬೇಕು ಮತ್ತು ಅದಕ್ಕೆ ಸಂಬಂಧಿತ ಪೊಲೀಸ್ ಠಾಣೆಯಿಂದ ಅನುಮತಿ (Permission from police station) ಪಡೆಯಬೇಕು ಎಂದು ಹೇಳಲಾಗಿದೆ.

ಪೊಲೀಸ್ ಅಥವಾ ಅರಣ್ಯ ಇಲಾಖೆಯಿಂದ (Forest Department) ಪೂರ್ವಾನುಮತಿ ಇಲ್ಲದೆ ಪ್ರವಾಸಿಗರನ್ನು ದೂರದ ಸ್ಥಳಗಳು, ಹೊರವಲಯಗಳು ಅಥವಾ ಅರಣ್ಯ ಪ್ರದೇಶಗಳಿಗೆ ಕರೆದೊಯ್ದರೆ, ದುಷ್ಕರ್ಮಿಗಳು ಅಥವಾ ಕಾಡು ಪ್ರಾಣಿಗಳಿಂದ ಉಂಟಾಗುವ ಯಾವುದೇ ಘಟನೆಗಳಿಗೆ ಹೋಂಸ್ಟೇ ಮಾಲೀಕರನ್ನು (Homestay owners) ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಅಲ್ಲದೇ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಹೋಂಸ್ಟೇಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಮಾರ್ಗಸೂಚಿ ಪಾಲನೆ ಖಾತ್ರಿಗೆ ರಾಜ್ಯ ಸರ್ಕಾರವು ಜಿಲ್ಲಾ ಆಡಳಿತಕ್ಕೆ (District Administration) ನಿರ್ದೇಶನ ನೀಡಿದೆ.
ಇದನ್ನೂ ಓದಿ: 7 ಪಾಲಿಕೆಗಳಾಗಿ ವಿಭಜನೆಗೊಂಡ ಬಿಬಿಎಂಪಿ :ಪ್ರಾಧಿಕಾರ ರಚಿಸಲು ಸೂಚನೆ
ಸಂಭಾವ್ಯ ಅಪಾಯಗಳನ್ನು ನಿರ್ಣಯಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಅಧಿಕಾರಿಗಳಿಗೆ ಸ್ಥಳ ಭೇಟಿ ಕಾರ್ಯಕ್ರಮಗಳ ಪಟ್ಟಿಯನ್ನು ಒದಗಿಸಬೇಕು ಎಂದು ಹೇಳಲಾಗಿದೆ. ಇನ್ನು ಹಂಪಿ ಎಲ್ಲರಿಗೂ ಅನ್ನ ಒದಗಿಸುತ್ತಿದೆ. ಸಣಾಪುರದಂತ ಘಟನೆಗಳಿಗೆ ಆಸ್ಪದ ನೀಡಿದರೆ, (Tourist safety is top priority) ಅನ್ನಕ್ಕೆ ಕನ್ನ ಹಾಕಿಕೊಳ್ಳಬೇಕಾಗುತ್ತದೆ.
ಹಾಗಾಗಿ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳ ಮಾಲೀಕರು ನಿಯಮ ಪಾಲನೆಯೊಂದಿಗೆ ಸಿಸಿ ಕ್ಯಾಮೆರಾ (CC camera) ಅಳವಡಿಸಬೇಕು. ಅಪರಿಚಿತರ ಚಲನವಲನದ ಬಗ್ಗೆ ನಿಗಾವಹಿಸಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಎಸ್ಪಿ ಡಾ.ಬಿ.ಎಲ್.ಶ್ರೀಹರಿಬಾಬು ಎಚ್ಚರಿಕೆ ನೀಡಿದ್ದಾರೆ.