• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಬಿಹಾರದಲ್ಲಿ ತಾಯಿ ಎದೆ ಹಾಲಿನಲ್ಲಿ ಯುರೇನಿಯಂ ಪತ್ತೆ: ನವಜಾತ ಶಿಶುಗಳ ಆರೋಗ್ಯಕ್ಕೆ ಮಾರಕ ಎಂದ AIIMS

Teju Srinivas by Teju Srinivas
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
0
SHARES
40
VIEWS
Share on FacebookShare on Twitter
  • ಬಿಹಾರದ ಅಮ್ಮಂದಿರ ಎದೆಹಾಲಿನಲ್ಲಿ ವಿಷಕಾರಿ (Toxic uranium in breast milk) ಅಂಶ ಪತ್ತೆ
  • 70% ಕ್ಕೂ ಹೆಚ್ಚು ಶಿಶುಗಳು ಆರೋಗ್ಯ ಸಮಸ್ಯೆಗಳ ಒಳಗಾಗುವ ಸಾಧ್ಯತೆ
  • ಅಂತರ್ಜಲ ಮಾಲಿನ್ಯವೇ ಮುಖ್ಯ ಕಾರಣ ಎನ್ನುವ ಶಂಕೆ ಮೂಡಿದೆ
Toxic uranium in milk

Delhi: ಬಿಹಾರದಲ್ಲಿ ನಡೆದ ಒಂದು ಅಧ್ಯಯನ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.(Toxic uranium in breast milk) ತಾಯಿಯ

ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ (Uranium) ಅಂಶ ಪತ್ತೆಯಾಗಿದೆ ಎಂಬ ವರದಿ ಪ್ರಕಟಗೊಂಡಿದ್ದು, ಇದು ನವಜಾತ ಶಿಶುಗಳ ಆರೋಗ್ಯಕ್ಕೆ ಗಂಭೀರ

ಹಾನಿಯಾಗುತ್ತಿರುವ ಸೂಚನೆಯಾಗಿದೆ. ತಾಯಿಯ ಎದೆಹಾಲು ಎಂದರೆ ಮಗು ಜನಿಸಿದ ಬಳಿಕ ದೊರೆಯುವ ಅತ್ಯಂತ ಸುರಕ್ಷಿತ, ಪವಿತ್ರ ಮತ್ತು ಪೌಷ್ಟಿಕಾಹಾರ.

ಭೂಲೋಕದ ಅಮೃತ ಎಂದು ಕರೆಸಿಕೊಳ್ಳುವ ಹಾಲು ಇಂದು ಹಾಲಾಹಲದಂತಾಗಿದೆ. ಬಿಹಾರದ ಒಂಬತ್ತು ಜಿಲ್ಲೆಗಳಲ್ಲಿ ನಡೆದ ಅಧ್ಯಯನದಲ್ಲಿ ಪ್ರತಿಯೊಬ್ಬ

ಹಾಲುಣಿಸುವ ತಾಯಿಯ ಹಾಲಿನಲ್ಲೂ ಯುರೇನಿಯಂ ಕಂಡುಬಂದಿರುವುದು ಆತಂಕ ಮೂಡಿಸಿದೆ.

ಭೋಜ್‌ಪುರ, ಸಮಷ್ಟಿಪುರ, ಬೇಗುಸರಾಯ್, ಖಗೇರಿಯಾ, ಕಟಿಹಾರ್ ಮತ್ತು ನಳಂದ ಜಿಲ್ಲೆಗಳ ಎಲ್ಲಾ ಮಾದರಿಗಳಲ್ಲೂ ಯುರೇನಿಯಂ (Uranium) ಪತ್ತೆಯಾಗಿದೆ.ವರದಿಯ

ಪ್ರಕಾರ, ಯುರೇನಿಯಂ ಪ್ರಮಾಣ ಜಿಲ್ಲಾವ್ಯಾಪಿ ಒಂದೇ ರೀತಿಯಲ್ಲಿಲ್ಲ. ಖಗೇರಿಯಾ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣ ದಾಖಲಾಗಿದ್ದು, ನಳಂದದಲ್ಲಿ ಕಡಿಮೆ ಪ್ರಮಾಣ ಕಂಡುಬಂದಿದೆ

ದೆಹಲಿಯ AIIMS ಹಾಗೂ ಪಾಟ್ನಾದ ಮಹಾವೀರ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (Cancer Institute) ಸಂಯುಕ್ತವಾಗಿ ನಡೆಸಿದ ಈ ಸಂಶೋಧನೆ 2021 ರಿಂದ 2024ರ ನಡುವೆ 17

ರಿಂದ 35 ವರ್ಷ ವಯಸ್ಸಿನ ಮಹಿಳೆಯರ ಎದೆಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದೆ. ಈ ವರದಿ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ನೇಚರ್ ಜರ್ನಲ್‌ (Nature Journal)ನಲ್ಲಿ ಪ್ರಕಟವಾಗಿದೆ.

ಎದೆಹಾಲಿನಲ್ಲಿ ಯುರೇನಿಯಂಗೆ ಯಾವುದೇ ಸುರಕ್ಷಿತ ಮಟ್ಟ ಎಂಬುದು ಅಸ್ತಿತ್ವದಲ್ಲಿಲ್ಲ. ವಿಜ್ಞಾನಿಗಳ ಪ್ರಕಾರ, ಅತಿ ಕಡಿಮೆ ಪ್ರಮಾಣದಲ್ಲಿಯೂ ಈ ಲೋಹ ಶಿಶುಗಳಿಗೆ ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ.

ಶಿಶುಗಳ ದೇಹದ ತೂಕ ಕಡಿಮೆ ಮತ್ತು ಅವರ ಅಂಗಾಂಗಗಳು ಇನ್ನೂ ಬೆಳೆಯುತ್ತಿರುವುದರಿಂದ, ಯುರೇನಿಯಂ ಶೀಘ್ರವಾಗಿ ದೇಹದಲ್ಲಿ ಹೀರಿಕೊಳ್ಳಬಹುದು.

ಸುಮಾರು 70% ಶಿಶುಗಳು ಕ್ಯಾನ್ಸರ್ (Cancer)ಅಲ್ಲದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ (Health) ಒಳಪಡುವ ಅಪಾಯವಿದೆ ಎಂದು ಅಧ್ಯಯನ ಹೇಳುತ್ತದೆ.

ಇದರಲ್ಲಿ ಬೆಳವಣಿಗೆಯ ಸಮಸ್ಯೆಗಳು, ನರ ಸಂಬಂಧಿತ ಸಮಸ್ಯೆಗಳು, ದೀರ್ಘಕಾಲದ ಅಂಗಾಂಗ ಹಾನಿ ಮೊದಲಾದವು ಉಂಟಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಬೇಸರದ ಸಂಗತಿ ಏನೆಂದರೆ ಯುರೇನಿಯಂ ಎದೆಹಾಲಿಗೆ ಹೇಗೆ ತಲುಪುತ್ತಿದೆ ಎಂಬುದು ಸಂಶೋಧಕರಿಗೂ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಂತರ್ಜಲ ಮಾಲಿನ್ಯವೇ

ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.

ಹಲವು ವರ್ಷಗಳಿಂದ ಬಿಹಾರದ ಕೆಲವು ಪ್ರದೇಶಗಳಲ್ಲಿ ಭೂಗರ್ಭಜಲದಲ್ಲಿ ಯುರೇನಿಯಂ ಅಂಶ ಹೆಚ್ಚಾಗಿರುವ ಬಗ್ಗೆ ವರದಿಗಳು ಬಂದಿದ್ದವು.

ಈ ನೀರನ್ನು ಕುಡಿಯುವುದು, ಅಡುಗೆ ಮಾಡುವಲ್ಲಿ ಬಳಸುವುದು, ಆಹಾರ (Food) ಬೆಳೆದ ಮಣ್ಣಿಗೆ ನೀರಾವರಿಯಾಗಿ ಹೋಗುವುದು ಈ ಎಲ್ಲಾ ಮಾರ್ಗಗಳಿಂದ

ಯುರೇನಿಯಂ ಆಹಾರ ಸರಪಳಿಗೆ ಸೇರಿ, ಅಂತಿಮವಾಗಿ ತಾಯಿಯ ದೇಹಕ್ಕೆ ಮತ್ತು ನಂತರ ಎದೆಹಾಲಿಗೆ ತಲುಪುತ್ತದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯೂ ತನಿಖೆ ಆರಂಭಿಸಿದೆ. ಯುರೇನಿಯಂ ಮಾನವ ದೇಹಕ್ಕೆ ಸೇರಿದರೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ

ಕಾರಣವಾಗುತ್ತದೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ. ಈ ಕಂಡುಬಂದ ಬೆಳವಣಿಗೆ ಕೇವಲ ಬಿಹಾರದ ಸಮಸ್ಯೆ ಎಂದು ಮಾತ್ರ ಪರಿಗಣಿಸಲು ಸಾಧ್ಯವಿಲ್ಲ.

ಇದು ದೇಶದ ಇತರ ಭಾಗಗಳಲ್ಲಿಯೂ ಅಂತರ್ಜಲದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಸೃಷ್ಠಿಸುತ್ತದೆ. ಯುರೇನಿಯಂ ಮಾಲಿನ್ಯ ಸಾಮಾನ್ಯವಾಗಿ ಗಣಿಗಾರಿಕೆ

(mining) ಪ್ರದೇಶಗಳಲ್ಲಿ, ಅತಿಯಾದ ಭೂಗರ್ಭಜಲ ಶೋಷಣೆ ನಡೆಯುವ ಪ್ರದೇಶಗಳಲ್ಲಿ, ರಾಸಾಯನಿಕ ಗೊಬ್ಬರ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ, ರಾಷ್ಟ್ರ ಮಟ್ಟದಲ್ಲಿ ಅಂತರ್ಜಲ ಗುಣಮಟ್ಟ ಪರಿಶೀಲನೆ, ಕುಡಿಯುವ ನೀರಿನ ಶುದ್ಧೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ನೀರು ಪರೀಕ್ಷಾ ಚಟುವಟಿಕೆಗಳ ವಿಸ್ತರಣೆ ಅಗತ್ಯ.

ತಾಯಂದಿರಿಗೆ ಸ್ಥಳೀಯ ಮಟ್ಟದಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ಮಾಡುವ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ವಿಶೇಷ

ಮಾರ್ಗಸೂಚಿಗಳು ಮತ್ತು ಶೀಘ್ರ ಕ್ರಮಗಳು ಕೈಗೊಳ್ಳಬೇಕಾಗಿದೆ. ಶಿಶುಗಳಿಗಾಗಿ ಸುರಕ್ಷಿತ ನೀರು ಮತ್ತು ಆಹಾರ ಪದ್ಧತಿ ಹೆಚ್ಚುವರಿ ಜಾಗೃತಿಯನ್ನು ಅಗತ್ಯವಾಗಿಸುತ್ತದೆ.

ಈ ವರದಿ ಸರ್ಕಾರಗಳು ಪರಿಸರ ಮಾಲಿನ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವನ್ನು ಸ್ಪಷ್ಟಪಡಿಸಿದೆ.

ಇದನ್ನು ಓದಿ: ಸಿಎಂ ಬದಲಾವಣೆ ಮಾಡೋದು ತಪ್ಪು ದಾರಿ ತುಳಿದಂತೆ: ಬೆಂಕಿಯೊಂದಿಗೆ ಆಟ ಬೇಡ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ

Tags: AIIMSbiharDelhihealthdepartmentNithish Kumarwaterpollution

Related News

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್
ದೇಶ-ವಿದೇಶ

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್

August 19, 2026
ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ
ದೇಶ-ವಿದೇಶ

ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ

August 19, 2026
ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.