- ವಾಹನ ಸವಾರರೇ ಎಚ್ಚರ ಎಚ್ಚರ, ಬೀಳುತ್ತೆ ಭಾರೀ ದಂಡ (Traffic rules are getting stricter)
- ಹೆಲ್ಮೆಟ್ ಇಲ್ಲದೇ ಓಡಿಸಿದ್ರೆ 1000 ರೂಪಾಯಿ ಫೈನ್
- ಡ್ರಂಕ್ ಅಂಡ್ ಡ್ರೈವ್ಗೆ 10 ಸಾವಿರ ದಂಡ, 6 ವರ್ಷ ಜೈಲು ಶಿಕ್ಷೆ
Bengaluru: ಸಿಲಿಕಾನ್ ಸಿಟಿಯಲ್ಲಿ (Silicon City) ಎಷ್ಟು ದುಡಿದ್ರೂ ದುಡ್ಡೇ ಉಳಿಯೋಲ್ಲ, ಹೇಗೆ ದುಡ್ಡು ಉಳಿಸಬೇಕು ಅಂತಾನೂ ಗೊತ್ತಿಲ್ಲ ಅಂತ ಸದಾ ದುಡ್ಡಿನ ಬಗ್ಗೆ ಚಿಂತಿಸ್ತೀರಾ. ನಿಮ್ಮ ಪಾಕೆಟ್ ಭದ್ರ ಇರಬೇಕು ಅಂದ್ರೆ ಇನ್ನು ಮುಂದೆ ತಪ್ಪದೇ ಟ್ರಾಫಿಕ್ ನಿಯಮಗಳನ್ನು (Traffic rules) ಸರಿಯಾಗಿ ಪಾಲಿಸಿ. ಕೊಂಚ ಯಾಮಾರಿದ್ರೂ ನಿಮ್ಮ ಪಾಕೆಟ್ ಬರಿದಾಗೋದು ಖಂಡಿತ.
ಇದ್ಯಾಕೆ ಹೀಗೆ ಹೇಳ್ತಾ ಇದಾರೆ ಅಂದ್ಕೋತೀರಾ, ಟ್ರಾಫಿಕ್ ದಂಡ (Traffic fine) ಇನ್ನು ಮುಂದೆ ದುಪ್ಪಟ್ಟಾಗಲಿದೆ. ಈ ಸಲ ಹೆಚ್ಚು ಸದ್ದು ಗದ್ದಲವಿಲ್ಲದೆ ದುಬಾರಿ ಟ್ರಾಫಿಕ್ ದಂಡ ವಿಧಿಸುವ ನಿಯಮ ಜಾರಿಯಾಗಿದೆ. ಟ್ರಾಫಿಕ್ ನಿಯಮ ಉಲಂಘನೆಗೆ 10 ಪಟ್ಟು ಹೆಚ್ಚಿನ ದಂಡ ವಿಧಿಸುವ ಆದೇಶವನ್ನು ಸರ್ಕಾರ (Govt) ಪಾಸ್ ಮಾಡಿದೆ. ಮಾರ್ಚ್ 1 ರಿಂದಲೇ ದುಬಾರಿ ದಂಡದ ನಿಯಮ ಜಾರಿಗೆ ಬಂದಿದೆ.

ಹೊಸ ಟ್ರಾಪಿಕ್ ದಂಡದ ವಿವರ ಹೀಗಿದೆ :
* ಡ್ರಂಕ್ ಅಂಡ್ ಡ್ರೈವಿಂಗ್ಗೆ (Drunk and driving) 10 ಸಾವಿರ ರೂಪಾಯಿ ದಂಡ, 6 ತಿಂಗಳು ಜೈಲುಶಿಕ್ಷೆ (Imprisonment) ವಿಧಿಸಲು ಅವಕಾಶ ಇದೆ. ಈ ಮೊದಲು ಡ್ರಂಕ್ ಅಂಡ್ ಡ್ರೈವಿಂಗ್ಗೆ 1 ಸಾವಿರ ರೂಪಾಯಿ ದಂಡ ಇತ್ತು. ಡ್ರಂಕ್ ಅಂಡ್ ಡ್ರೈವಿಂಗ್ ಪುನಾರಾವರ್ತನೆಯಾದರೆ 15 ಸಾವಿರ ರೂಪಾಯಿ ದಂಡ 2 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.
* ಡ್ರೈವಿಂಗ್ ವೇಳೆ ಮೊಬೈಲ್ ಪೋನ್ ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ. ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ (Mobile phone use) ಬಳಕೆ ಮಾಡಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು.
* ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಅಲ್ಲದೇ 3 ತಿಂಗಳು ಕಾಲ ಡ್ರೈವಿಂಗ್ ಲೈಸೆನ್ಸ್ (Driving license) ಸಸ್ಪೆಂಡ್ ಕೂಡ ಮಾಡಬಹುದು. ಈ ಮೊದಲು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದರೆ 100 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಇನ್ನು ಕಾರಿನ ಸೀಟ್ ಬೆಲ್ಟ್ (Car seat belt) ಹಾಕದಿದ್ದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಸಾರಿಗೆ ಇಲಾಖೆ (Department of Transport) ಆದೇಶ ಮಾಡಿದೆ.
* ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5 ಸಾವಿರ ರೂಪಾಯಿ ದಂಡ ಬೀಳಲಿದೆ.
* ವಾಹನದ ಇನ್ಸೂರೆನ್ಸ್ (Vehicle insurance) ಇಲ್ಲದೇ ವಾಹನ ಚಲಾಯಿಸಿದರೇ 2 ಸಾವಿರ ರೂಪಾಯಿ ದಂಡ ಕಟ್ಟಬೇಕು.
* ಮಾಲಿನ್ಯ ಸರ್ಟಿಫಿಕೇಟ್ (Pollution Certificate) ಇಲ್ಲದೆ ವಾಹನ ಚಲಾಯಿಸಿದರೆ 10 ಸಾವಿರ ರೂಪಾಯಿ ದಂಡ ಹಾಗೂ 6 ತಿಂಗಳು ಜೈಲುಶಿಕ್ಷೆ, ಸಮುದಾಯ ಸೇವೆ.
* ಬೈಕ್ನಲ್ಲಿ ಟ್ರಿಪಲ್ ರೈಡಿಂಗ್ (Triple riding) ಮಾಡಿದರೆ 1 ಸಾವಿರ ರೂಪಾಯಿ ದಂಡ ಬೀಳಲಿದೆ.
* ನಿರ್ಲಕ್ಷ್ಯದ ಚಾಲನೆ ಮಾಡಿದರೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕು.
ಇದನ್ನೂ ಓದಿ: ವಿಪಕ್ಷಗಳ ವಿರುದ್ಧ ಒಂದು ರಾಷ್ಟ್ರ ಒಂದು ಚುನಾವಣೆ ತಂತ್ರರೂಪಿಸುತ್ತಿರುವ NDA !
*ಅಂಬ್ಯುಲೆನ್ಸ್ಗೆ ರಸ್ತೆ ಬಿಡದೆ ವಾಹನ ಚಲಾಯಿಸಿದ 10 ಸಾವಿರ ರೂಪಾಯಿ ದಂಡ ಕಟ್ಟಬೇಕು.
*ಸಿಗ್ನಲ್ ಜಂಪ್ (Signal jump) ಮಾಡಿದ್ರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
* ವಾಹನಗಳನ್ನು ಓವರ್ ಲೋಡ್ (Over load) ಮಾಡಿ ಚಲಾಯಿಸಿದರೆ 20 ಸಾವಿರ ರೂಪಾಯಿ ದಂಡ.
* 10-ಅಪ್ರಾಪ್ತರು ವಾಹನ ಚಲಾಯಿಸಿದರೆ 25 ಸಾವಿರ (Traffic rules are getting stricter) ರೂಪಾಯಿ ದಂಡ ಹಾಗೂ 3 ವರ್ಷ ಜೈಲುಶಿಕ್ಷೆ ವಾಹನದ ನೋಂದಣಿ (Vehicle registration) ಕೂಡ ರದ್ದು ಮಾಡಲಾಗುತ್ತದೆ. 25 ವರ್ಷ ಆಗುವವರೆಗೂ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತದೆ.