- ಭಾರತೀಯ ರೈಲ್ವೇಸ್ ಟಿಕೆಟ್ (Train ticket price hike) ದರ ಪರಿಷ್ಕರಣೆ
- ಟಿಕೆಟ್ ದರ ಏರಿಕೆಯಿಂದ ರೈಲ್ವೇಸ್‌ಗೆ ವರ್ಷಕ್ಕೆ 600 ಕೋಟಿ ರೂ ಹೆಚ್ಚುವರಿ ಆದಾಯದ ನಿರೀಕ್ಷೆ
- ಜನರಲ್, ಎಸಿ, ಮೇಲ್ ಮತ್ತು ಎಕ್ಸ್‌ಪ್ರೆಸ್ ಟ್ರೈನ್‌ಗಳಿಗೆ ಅನ್ವಯಿಸುವ ಹೊಸ ದರ
ಭಾರತೀಯ ರೈಲ್ವೇಸ್ (Railways) ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ (Train ticket price hike) ಮಹತ್ವದ ಮಾಹಿತಿ ನೀಡಿದೆ.
ರೈಲು ಟಿಕೆಟ್ (Ticket) ದರಗಳಲ್ಲಿ ಸಣ್ಣ ಮಟ್ಟದ ಏರಿಕೆ ಮಾಡುವುದಾಗಿ ರೈಲ್ವೇಸ್ ಘೋಷಿಸಿದೆ.
ಜುಲೈ ತಿಂಗಳ ಬಳಿಕ ಮತ್ತೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತಿದ್ದು, ಮುಖ್ಯವಾಗಿ 215 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಪ್ರಯಾಣಿಸುವವರಿಗೆ ಈ ಹೊಸ ದರ ಅನ್ವಯವಾಗಲಿದೆ. ಸಾಮಾನ್ಯ ಜನರ ಮೇಲೆ ಅತಿಯಾದ ಬರೆ ಬೀಳದಂತೆ, ಪೈಸೆಗಳ ಲೆಕ್ಕದಲ್ಲಿ ಮಾತ್ರ ದರ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂಲಕ ರೈಲು ಪ್ರಯಾಣ ಇನ್ನೂ ದೇಶದ ಅತ್ಯಂತ (Train ticket price hike) ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆಯಾಗಿ ಮುಂದುವರಿಯಲಿದೆ.
ರೈಲ್ವೇಸ್ ಪ್ರಕಟಿಸಿರುವ ಮಾಹಿತಿಯಂತೆ, ಜನರಲ್ ಕ್ಲಾಸ್ (General Class) ಪ್ರಯಾಣಿಕರಿಗೆ 215 ಕಿಮೀ ದೂರದವರೆಗೆ ಯಾವುದೇ ದರ ಬದಲಾವಣೆ ಇರುವುದಿಲ್ಲ.
ಆದರೆ 215 ಕಿಮೀ ಮೀರಿದ ದೂರಕ್ಕೆ, ಪ್ರತೀ ಹೆಚ್ಚುವರಿ ಕಿಲೋಮೀಟರ್‌ಗೆ ಒಂದು ಪೈಸೆಯಷ್ಟು ಟಿಕೆಟ್ ದರ ಹೆಚ್ಚಳವಾಗಲಿದೆ.
ಅಂದರೆ, 100 ಕಿಲೋಮೀಟರ್ ಹೆಚ್ಚುವರಿ ಪ್ರಯಾಣಕ್ಕೆ ಸುಮಾರು ಒಂದು ರೂಪಾಯಿ ಹೆಚ್ಚುವರಿ ವೆಚ್ಚವಾಗುತ್ತದೆ.
ಇದು ಜನರಲ್ ಕೋಚ್ ಪ್ರಯಾಣಿಕರಿಗೆ ಅನ್ವಯವಾಗುವ ದರ ಏರಿಕೆ ಆಗಿದೆ. ಸಬರ್ಬನ್ (Suburban) ಮತ್ತು ನಗರ ಒಳವಲಯದ ರೈಲುಗಳ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಪ್ರಯಾಣಿಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಇನ್ನು ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಹಾಗೂ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ನಾನ್-ಎಸಿ ಕೋಚ್‌ಗಳಲ್ಲಿ (Non-AC coach) ಪ್ರಯಾಣಿಸುವವರಿಗೆ ಸ್ವಲ್ಪ ಹೆಚ್ಚು ದರ ಏರಿಕೆ ಮಾಡಲಾಗಿದೆ.
ಈ ವರ್ಗದ ಕೋಚ್‌ಗಳಲ್ಲಿ ಪ್ರತೀ ಕಿಲೋಮೀಟರ್‌ಗೆ ಎರಡು ಪೈಸೆಯಷ್ಟು ದರ ಹೆಚ್ಚಳವಾಗಲಿದೆ.
ಇದರರ್ಥ, ಪ್ರತೀ 50 ಕಿಲೋಮೀಟರ್ ಪ್ರಯಾಣಕ್ಕೆ ಸುಮಾರು ಒಂದು ರೂಪಾಯಿ ಹೆಚ್ಚುವರಿ ಹಣ ಟಿಕೆಟ್ (Ticket) ದರಕ್ಕೆ ಸೇರಲಿದೆ.
ಆದರೂ, ವಿಮಾನ ಮತ್ತು ಖಾಸಗಿ ಬಸ್ ಸೇವೆಗಳೊಂದಿಗೆ ಹೋಲಿಕೆ ಮಾಡಿದರೆ, ರೈಲು ಪ್ರಯಾಣ ಇನ್ನೂ ಜನಸಾಮಾನ್ಯರಿಗೆ ಅತ್ಯಂತ ಆರ್ಥಿಕ ಆಯ್ಕೆಯಾಗಿ ಉಳಿದಿದೆ ಎಂದು ರೈಲ್ವೇಸ್ ಸ್ಪಷ್ಟಪಡಿಸಿದೆ.
ಈ ಅಲ್ಪ ಪ್ರಮಾಣದ ದರ ಏರಿಕೆಯ ಮೂಲಕ ಭಾರತೀಯ ರೈಲ್ವೇಸ್‌ಗೆ ವರ್ಷಕ್ಕೆ ಸುಮಾರು 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆ ಇದೆ.
ಕಳೆದ ಒಂದು ದಶಕದಲ್ಲಿ ರೈಲ್ವೇಸ್ ತನ್ನ ಜಾಲವನ್ನು ಗಣನೀಯವಾಗಿ ವಿಸ್ತರಿಸಿದ್ದು, ಹೊಸ ರೈಲುಗಳ ಆರಂಭ, ಹೆಚ್ಚುವರಿ ಸೇವೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಮೊತ್ತ ಹೂಡಿಕೆ ಮಾಡಿದೆ.
ಇದರ ಜೊತೆಗೆ, ಮಾನವ ಸಂಪನ್ಮೂಲ ವೆಚ್ಚವೂ ಹೆಚ್ಚಾಗಿದೆ. ಪ್ರಸ್ತುತ ರೈಲ್ವೇಸ್‌ನ ಮಾನವ ಸಂಪನ್ಮೂಲ ವೆಚ್ಚ ಸುಮಾರು 1.15 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಪಿಂಚಣಿ ವೆಚ್ಚವೇ ಸುಮಾರು 60,000 ಕೋಟಿ ರೂಪಾಯಿಯಷ್ಟಿದೆ.
2024-25 ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೇಸ್‌ನ ಒಟ್ಟು ಕಾರ್ಯಾಚರಣಾ ವೆಚ್ಚ 2.63 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಈ ಹೆಚ್ಚುತ್ತಿರುವ ವೆಚ್ಚವನ್ನು ಸಮತೋಲನಗೊಳಿಸುವ ಉದ್ದೇಶದಿಂದಲೇ ಟಿಕೆಟ್ ದರಗಳಲ್ಲಿ ಸಣ್ಣ ಮಟ್ಟದ ಪರಿಷ್ಕರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ ತಿಂಗಳಲ್ಲಿಯೂ ಇದೇ ರೀತಿಯಲ್ಲಿ ಪೈಸೆಗಳ ಲೆಕ್ಕದಲ್ಲಿ ದರ ಏರಿಕೆ ಮಾಡಲಾಗಿತ್ತು.
ಮುಂದಿನ ದಿನಗಳಲ್ಲಿ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವುದು, ಸುರಕ್ಷತೆ ಹೆಚ್ಚಿಸುವುದು ಮತ್ತು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದೇ ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ರೈಲ್ವೇಸ್ ಸ್ಪಷ್ಟಪಡಿಸಿದೆ.
ಇದನ್ನು ಓದಿ : https://vijayatimes.com/solution-for-metro-parking-problem/