- ಇ–ಖಾತಾ ಅಭಿಯಾನಕ್ಕೆ ವೇಗ: ಬೆಂಗಳೂರು ಆಸ್ತಿ (Transfer from B khata to ‘A’ khata) ದಾಖಲೆಗಳು ಸಂಪೂರ್ಣ ಡಿಜಿಟಲ್
- ರಾಜ್ಯಾದ್ಯಂತ 25 ಲಕ್ಷ ಆಸ್ತಿ ದಾಖಲೆಗಳ ಡಿಜಿಟಲೀಕರಣ ಪೂರ್ಣ; 9 ಲಕ್ಷ ಇ–ಖಾತಾ ಹಂಚಿಕೆ – ಡಿ.ಕೆ. ಶಿವಕುಮಾರ್
- ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ವ್ಯವಸ್ಥೆ ಮೂಲಕ ಬಿ ಖಾತಾ ಮಾಲೀಕರಿಗೆ ಎ ಖಾತಾ ಭಾಗ್ಯ
Bengaluru: ರಾಜ್ಯದಲ್ಲಿ ಆಸ್ತಿ ದಾಖಲೆಗಳ ಸುಧಾರಣೆ ಮತ್ತು ಡಿಜಿಟಲೀಕರಣ ಸರ್ಕಾರದ ಪ್ರಮುಖ (Transfer from B khata to ‘A’ khata) ಗುರಿಯಾಗಿದ್ದು, ಈಗಾಗಲೇ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 25 ಲಕ್ಷಕ್ಕೂ ಹೆಚ್ಚು ಆಸ್ತಿಗಳ ದಾಖಲೆಗಳನ್ನು ಡಿಜಿಟಲ್ (Digital) ರೂಪಕ್ಕೆ ತರುವ ಕಾರ್ಯ ಪೂರ್ಣಗೊಂಡಿದೆ.
ಇದಲ್ಲದೆ, 9 ಲಕ್ಷ ಇ–ಖಾತಾ ದಾಖಲೆಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ತಿಳಿಸಿದರು. ನಗರದಲ್ಲಿ ಉಚಿತ ಇ–ಖಾತಾ ಅಭಿಯಾನವನ್ನು ಆರಂಭಿಸಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಖಾತಾ ಪರಿವರ್ತನೆ ಮಾಡಿಕೊಂಡವರಿಗೆ ಸೋಮವಾರ ಖಾತಾ ಪತ್ರಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ (Transfer from B khata to ‘A’ khata) ಮಾತನಾಡಿದ ಅವರು, ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಅತ್ಯಂತ ಮಹತ್ವದ ತೀರ್ಮಾನವಾಗಿದೆ ಎಂದು ಹೇಳಿದರು.
ಈ ಹಿಂದೆ ಕೃಷಿ ಭೂಮಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ‘ಭೂಮಿ’ ಯೋಜನೆ ಜಾರಿಗೊಳಿಸಲಾಗಿತ್ತು. ಅದೇ ಮಾದರಿಯಲ್ಲಿ, ಈಗ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ–ಖಾತಾ ವ್ಯವಸ್ಥೆಗೆ ತರುವ ಉದ್ದೇಶ ಹೊಂದಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್ (Software) ಮೂಲಕ ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರಿಂದ ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿದ್ದು, ನಕಲಿ ದಾಖಲೆಗಳು ಮತ್ತು ಅಕ್ರಮಗಳು ಕಡಿಮೆಯಾಗಲಿವೆ ಎಂದು ಹೇಳಿದರು. ಡಿಜಿಟಲ್ ವ್ಯವಸ್ಥೆಯಿಂದ ಜನರಿಗೆ ಸರಳ, ವೇಗದ ಮತ್ತು ಭ್ರಷ್ಟಾಚಾರ ರಹಿತ ಸೇವೆ ಸಿಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಮೂಲಕ ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಈಗಾಗಲೇ ಸುಮಾರು 7 ಸಾವಿರ ಅರ್ಜಿಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಲಕ್ಷಗಟ್ಟಲೆ ಅರ್ಜಿಗಳು ಬರಲಿವೆ ಎಂದು ಹೇಳಿದರು.
ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ 15 ದಿನಗಳೊಳಗೆ ಖಾತಾ ನೀಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಅನೇಕ ನಾಗರಿಕರು ಕ್ರಯಪತ್ರ ಹೊಂದಿದ್ದರೂ ಖಾತಾ ಪಡೆದುಕೊಳ್ಳದೇ ಇರುವ ಸ್ಥಿತಿ ಇತ್ತು. ಈ ಕುರಿತು 1.20 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 60 ಸಾವಿರ ಅರ್ಜಿಗಳನ್ನು ಒಪ್ಪಿಗೆಯೊಂದಿಗೆ ಮಂಜೂರು ಮಾಡಲಾಗಿದೆ.
40 ಸಾವಿರ ಅರ್ಜಿಗಳು ತಿರಸ್ಕೃತವಾಗಿದ್ದು, ಉಳಿದ 15 ಸಾವಿರ ಅರ್ಜಿಗಳು ವಿವಿಧ ಹಂತಗಳಲ್ಲಿ ಪ್ರಕ್ರಿಯೆಯಲ್ಲಿವೆ. ತಿರಸ್ಕೃತ ಅರ್ಜಿಗಳನ್ನು ಮತ್ತೆ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದರು.
ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 34,977 ನಿವೇಶನಗಳನ್ನು ರಚಿಸಲಾಗಿದ್ದು, 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡಬೇಕಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಶೇ.75ರಷ್ಟು ಮಾಲೀಕರು ನಿವೇಶನ ಸ್ವೀಕರಿಸಲು ಒಪ್ಪಿದ್ದಾರೆ. ಉಳಿದ ಮಾಲೀಕರಿಗೂ ಸಹ ಸಹಕಾರ ನೀಡುವಂತೆ ಮನವಿ ಮಾಡಿದರು.
ಬಿಡಿಎಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆ, ಒಂದೇ ದಿನ 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ಹಂಚಿಕೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು. ಉಳಿದ ನಿವೇಶನಗಳಿಗೆ ಅರ್ಜಿ ಆಹ್ವಾನಿಸಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ನಂಬಿಕೆ ನಕ್ಷೆ ಯೋಜನೆಯಡಿ ಈಗಾಗಲೇ 12 ಸಾವಿರ ನಕ್ಷೆಗಳನ್ನು ವಿತರಿಸಲಾಗಿದ್ದು, ಇದರಿಂದ ಭ್ರಷ್ಟಾಚಾರ ಕಡಿಮೆಯಾಗಿದೆ ಮತ್ತು ಕೆಲಸಗಳ ವೇಗ ಹೆಚ್ಚಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಓಟಿಎಸ್ ಯೋಜನೆಯಡಿ ದಂಡ ಮತ್ತು ಬಡ್ಡಿಯನ್ನು ರದ್ದುಪಡಿಸಿರುವುದರಿಂದ ಸುಮಾರು 2 ಲಕ್ಷ ಜನರಿಗೆ ಅನುಕೂಲವಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಟಿಡಿಆರ್ ಯೋಜನೆಯಿಂದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಹೆಚ್ಚಿನ ಲಾಭವಾಗಲಿದೆ.
ಪ್ರೀಮಿಯಂ ಎಫ್‌ಎಆರ್ ವಿಚಾರದಲ್ಲಿ ಕಾನೂನು ಅಡೆತಡೆಗಳು ನಿವಾರಣೆಯಾಗಿದ್ದು, ಇದರಿಂದ ಸುಮಾರು 1,000 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಜೊತೆಗೆ, ‘ಬಿ ಸ್ಮೈಲ್’ ಯೋಜನೆಯಡಿ 1.47 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬಂದಿದ್ದು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇದನ್ನು ಓದಿ : https://vijayatimes.com/fssai-milk-test-report/