Telangana : ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳನ್ನು(Transgender Must Vote) ಮತದಾರರಾಗಿ ನೋಂದಾಯಿಸಲು ಮತ್ತು ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ಹೇಳಿದರು.

ತೆಲಂಗಾಣದಲ್ಲಿ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ಕೆಲಸ ಮಾಡುವ 52 ಎನ್‌ಜಿಒಗಳು(Transgender Must Vote) ಭಾಗವಹಿಸಿದ್ದ ವೀಡಿಯೊ ಕಾನ್ಫರೆನ್ಸ್ ಅನ್ನು ಉದ್ದೇಶಿಸಿ ಮಾತನಾಡಿದ ವಿಕಾಸ್ ರಾಜ್ ಅವರು,
ಸದ್ಯ ನಡೆಯುತ್ತಿರುವ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್‌ಎಸ್‌ಆರ್) ಭಾಗವಾಗಿ ಲೈಂಗಿಕ ಕಾರ್ಯಕರ್ತರನ್ನು ದಾಖಲಿಸಲು ಪ್ರಯತ್ನಿಸುವಂತೆ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗೆ ಮನವಿ ಮಾಡಿದರು.
ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಮತ್ತು ತೃತೀಯಲಿಂಗಿಗಳಂತಹ ಗುಂಪುಗಳೊಂದಿಗೆ ಎಚ್‌ಐವಿ(HIV) ತಡೆಗಟ್ಟುವಿಕೆಗಾಗಿ ಕೆಲಸ ಮಾಡುವ ಎನ್‌ಜಿಒಗಳೊಂದಿಗೆ ವೀಡಿಯೊ ಕಾನ್ಫರೆನ್ಸ್(Video Conference) ನಡೆಸಲಾಯಿತು. ಈ ವೇಳೆ ಸಿಇಒ ವಿಕಾಸ್ ರಾಜ್ ಅವರು, ಪ್ರಜಾಪ್ರಭುತ್ವದ ಭಾಗವಾಗಿ ಲೈಂಗಿಕ ಕಾರ್ಯಕರ್ತರು ಮತ್ತು ತೃತೀಯಲಿಂಗಿಗಳು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ : https://vijayatimes.com/weird-tradition-in-rajasthan/
ಲೈಂಗಿಕ ಕಾರ್ಯಕರ್ತರು ವಾಸಸ್ಥಳದಂತಹ ಪುರಾವೆಗಳನ್ನು ಹೊಂದಿಲ್ಲದಿದ್ದರೆ, ಪುರಾವೆಗಳನ್ನು ನೀಡುವಂತೆ ಒತ್ತಾಯಿಸಬಾರದು ಎಂದು ಚುನಾವಣಾ ಆಯೋಗವು(Election Commission) ನಿರ್ದೇಶಿಸಿದೆ. ಆದರು ಹಕ್ಕುದಾರರು ನಮೂನೆ 6ರಲ್ಲಿ ನಮೂದಿಸಿರುವ ಸ್ಥಳದಲ್ಲಿ ವಾಸ್ತವಿಕವಾಗಿ ನೆಲೆಸಿದ್ದಾರೆ ಎಂಬುದನ್ನು ಮತಗಟ್ಟೆ ಮಟ್ಟದ ಅಧಿಕಾರಿಯು,

ವಿಳಾಸಕ್ಕೆ ಭೇಟಿ ನೀಡುವ ಮೂಲಕ ಮತ್ತು ಚುನಾವಣಾ ನೋಂದಣಿ ಅಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗೆ ಪರಿಶೀಲನಾ ವರದಿಯನ್ನು ಸಲ್ಲಿಸುವ ಮೂಲಕ ಖಚಿತಪಡಿಸಿಕೊಳ್ಳುತ್ತಾರೆ. ಈ ಮೂಲಕ ಹಕ್ಕುದಾರರಿಗೆ ಮತದಾನದ ಹಕ್ಕನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
https://youtu.be/cViS_eJ77Vo ಕ್ರಷರ್ ನಿಂದ ನೆಮ್ಮದಿ ಕಳೆದುಕೊಂಡ ಸೌದತ್ತಿ ಗ್ರಾಮಸ್ಥರು!
ಇದೇ ವೇಳೆ ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್ ರಾಜ್ ಅವರು, ಟ್ರಾನ್ಸ್‌ಜೆಂಡರ್ ಸಮುದಾಯದೊಂದಿಗಿನ ಸಭೆಯಲ್ಲಿ, ತೃತೀಯಲಿಂಗಿ ಕಲ್ಯಾಣ ಮಂಡಳಿಯ ಸದಸ್ಯರು ಮತ್ತು ಟ್ರಾನ್ಸ್‌ಜೆಂಡರ್ ಸಮುದಾಯದೊಂದಿಗೆ ಕೆಲಸ ಮಾಡುವ ಎನ್‌ಜಿಒಗಳಿಂದ ಈ ಕುರಿತು ಸಲಹೆಗಳನ್ನು ಪಡೆದರು.
- ಮಹೇಶ್.ಪಿ.ಎಚ್