Chennai : ತಮಿಳುನಾಡಿನ (Tamilnadu) ಟುಟಿಕೋರಿನ್ ನಲ್ಲಿ (Tuticorn) ನಡೆದಿರುವ ಘಟನೆಗೆ ಸಂಬಂಧಿಸಿದ ವೀಡಿಯೋ (Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral) ಆಗಿದ್ದು,
ಈ ಒಂದು ದೃಶ್ಯವನ್ನು ಕಂಡ ನೆಟ್ಟಿಗರು ವ್ಯಾಪಕವಾಗಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಂಗಳಮುಖಿಯರ (Transgender) ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿ, ಅಪಹಾಸ್ಯ ಮಾಡಿದ್ದಲ್ಲದೇ, ಆಕೆಯ (Transgender Woman’s Hair Forcibly Cut) ಕೂದಲನ್ನು ಕತ್ತರಿಸಿದ್ದಾರೆ. ಸದ್ಯ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ಪೊಲೀಸರು ಕೂಡಲೇ ಬಂಧಿಸಿದ್ದಾರೆ.
https://vijayatimes.com/murugha-shree-case-continues/
ಈ ಕುರಿತು ಟ್ರಾನ್ಸ್‌ಜೆಂಡರ್ ಹಕ್ಕುಗಳ ಕಾರ್ಯಕರ್ತೆ ಗ್ರೇಸ್ ಬಾನು ಅವರು ಘಟನೆಯ ವೀಡಿಯೋ ಹಂಚಿಕೊಂಡಿದ್ದು,
19 ಸೆಕೆಂಡುಗಳಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ರೇಜರ್ ಬಳಸಿ ಮಂಗಳಮುಖಿಯನ್ನು ನೆಲದ ಮೇಲೆ ಕೂರುವಂತೆ ಮಾಡಿ, ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿದ್ದಾನೆ. ಆಕೆಯ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಮಂಗಳಮುಖಿ ಕೂಡ ನಿಂದನೆಗಳಿಗೆ ಒಳಗಾಗಿದ್ದಾರೆ.
https://fb.watch/g7rTDe3ecg/ ನಿರಂತರವಾಗಿ ಬಯಲಿಗೆ ಬರುತ್ತಿವೆ ಸರ್ಕಾರಿ ವಾಹನ ದುರ್ಬಳಕೆ ಪ್ರಕರಣಗಳು!
ಒಬ್ಬ ಆಕೆಯ ಕೂದಲನ್ನು ಕತ್ತರಿಸಿ ಎಸೆದಿದ್ದು, “ಇಬರಿಬ್ಬರನ್ನು ನೋಡಿ, ಇವರು ಗಂಡಸರಿಂದ (Transgender Woman’s Hair Forcibly Cut) ಹಣ ಕೀಳುತ್ತಾರೆ. ಇಂಥವರನ್ನು ನಾವು ಏನು ಮಾಡಬೇಕು? ನಿಮ್ಮ ಕೂದಲನ್ನು ಕತ್ತರಿಸಿದ್ದೇವೆ, ಈಗ ನೀವು ಚೆನ್ನಾಗಿ ಕಾಣಿಸುತ್ತೀರಿ,
ದರವಾಗಿ ಕಾಣಿಸುತ್ತೀರಿ ಎಂದು ಹೇಳುವ ಮುಖೇನ ಇಬ್ಬರು ಮಂಗಳಮುಖಿಯರನ್ನು ಅಪಹಾಸ್ಯ ಮಾಡಿರುವುದನ್ನು ವೀಡಿಯೋ ಮಾಡಿಕೊಂಡಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ, ಮಂಗಳಮುಖಿಯ ಒಂದು ಕಣ್ಣು ಊದಿಕೊಂಡಂತೆ ಕಂಡುಬಂದಿದೆ. ಆಕೆಯ ಮೇಲೆ ಹಲ್ಲೆ ಮಾಡಿರುವುದು ಖಚಿತವಾಗಿದ್ದು, ಅಸಹಾಯಕರಾಗಿರುವುದು ವೀಡಿಯೋ ಮೂಲಕ ಬಲವಾಗಿ ತಿಳಿದುಬಂದಿದೆ.
ಈ ವೀಡಿಯೋ ಹಂಚಿಕೊಂಡ ಬಾನು ಅವರು, ಇಂತಹ ಹಿಂಸಾಚಾರ (Violence) ಯಾವಾಗ ಕೊನೆಗೊಳ್ಳುತ್ತದೆ ಎಂದು ಶೀರ್ಷಿಕೆ ನೀಡುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ದಕ್ಷಿಣ ವಲಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿ ನಿಂದಿಸಿದ ಇಬ್ಬರು ಪುರುಷರು ನೋವಾ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. “ಇಬ್ಬರೂ ಪುರುಷರು ಇಬ್ಬರು ಮಂಗಳಮುಖಿಯರಿಗೆ ಚಿರಪರಿಚಿತರು”. ಇಬ್ಬರು ಪುರುಷರ ಪೈಕಿ ಒಬ್ಬ, ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಘಟನೆಯ ವೀಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ : https://twitter.com/thirunangai/status/1580152179762962432?s=20&t=gMgAsu3jtk3bXXZuXd2GSg