Visit Channel

ಈ ಪಾರದರ್ಶಕ ಶೌಚಾಲಯ ಸಾರ್ವಜನಿಕರಿಗೆ ಅಚ್ಚುಮೆಚ್ಚು ; ಎಲ್ಲಿದೆ ಗೊತ್ತಾ ಈ ಶೌಚಾಲಯ?

Public Toilet

ಹೊರಗೆ ಪ್ರವಾಸಕ್ಕೆ ಹೋದಾಗ ಶೌಚಾಲಯಕ್ಕೆ(Washroom) ಹೋಗುವ ಸಂದರ್ಭ ಬಂದೇ ಬರುತ್ತದೆ, ಆಗ ಅನಿವಾರ್ಯವಾಗಿ ಸಾರ್ವಜನಿಕ ಶೌಚಾಲಯಗಳನ್ನು ಅವಲಂಬಿಸಬೇಕಾಗುತ್ತದೆ.

ಆದ್ರೆ, ಹೆಚ್ಚಿನ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ಬಿಡಿ, ಒಳಗೆ ಕಾಲಿಡಲೂ ಸಹ ಅಸಹ್ಯವಾಗುವಂತೆ ಇರುತ್ತವೆ.

ಇದಕ್ಕೆ ಕಾರಣ, ನಮ್ಮ ದೇಶದಲ್ಲಿ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳ(Transparent public toilet in japan) ನಿರ್ವಹಣೆಗೆ ಸೂಕ್ತ ಸಿಬ್ಬಂದಿಯೇ ಇಲ್ಲ. ಅಲ್ಲದೇ ಅದನ್ನು ಬಳಸುವ ಜನರು ಕೂಡಾ ಅದನ್ನು ಸ್ವಚ್ಛವಾಗಿಡುವುದು ತಮ್ಮ ಜವಾಬ್ದಾರಿ ಎಂದು ಆಲೋಚನೆ ಮಾಡುವುದಿಲ್ಲ.

Transparent public toilet in japan

ಹೇಗೋ ತಮ್ಮ ಉಪಯೋಗಕ್ಕೆ ಬಂದರೆ ಸಾಕೆಂದು, ಬಳಸಿದ ನಂತರ ಅದನ್ನು ಹೇಗೆಂದರೆ ಹಾಗೆ ಬಿಟ್ಟು ಹೋಗುತ್ತಾರೆ. ಸಾರ್ವಜನಿಕ ಶೌಚಾಲಯ (Transparent public toilet in japan)ಎಂದ ಕೂಡಲೇ ಮೂಗಿಗೆ ಬಡಿಯುವ ದುರ್ನಾತ, ನೆಲದ ಮೇಲೆಲ್ಲ ನೀರು ಹರಿದು ಆಗಿರುವ ತೇವ ಇದೇ ನೆನಪಿಗೆ ಬಂದು ಅನೇಕರು ಸಾರ್ವಜನಿಕ ಶೌಚಾಲಯಗಳನ್ನು ಬಳಸಲು ಹಿಂದೇಟು ಕೂಡಾ ಹಾಕುವುದನ್ನು ನಾವು ಗಮನಿಸಿದ್ದೇವೆ. https://vijayatimes.com/cover-story/#google_vignette

ಇದಕ್ಕೆ ಪರಿಹಾರವೇನು ಎಂದೂ ಕೂಡ ನಾವು ಯೋಚಿಸಿರುತ್ತೇವೆ. ಈಗ ಜಪಾನ್ ದೇಶದಲ್ಲಿ ಇಂತಹ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಇಲ್ಲಿ ಶೌಚಾಲಯವನ್ನು ಪ್ರವೇಶ ಮಾಡುವ ಮೊದಲೇ ಹೊರಗಿನಿಂದ ನೋಡಿ,

ಒಳಗಿನ ಶೌಚಾಲಯವು ಶುದ್ಧವಾಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಅರೆರೆ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಜಪಾನ್ ನಲ್ಲಿ(Japan) ನಿರ್ಮಾಣ ಮಾಡಿರುವ ಈ ಹೊಸ ಪಬ್ಲಿಕ್ ಟಾಯ್ಲೆಟ್ ಪಾರದರ್ಶಕ ಗೋಡೆಗಳನ್ನು ಹೊಂದಿದೆ, ಆದ್ದರಿಂದ ಹೊರಗಿನಿಂದಲೇ ಟಾಯ್ಲೆಟ್ ಒಳಗೆ ಸ್ವಚ್ಛವಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ.https://vijayatimes.com/cover-story/#google_vignette


ಪಾರದರ್ಶಕ ಶೌಚಾಲಯ ಎಂದ ತಕ್ಷಣ ಸಹಜವಾಗಿಯೇ ಎದುರಾಗುವ ಇನ್ನೊಂದು ಪ್ರಶ್ನೆ ಎಂದರೆ, ಇಂತಹ ಪಾರದರ್ಶಕ ಗೋಡೆಗಳುಳ್ಳ ಶೌಚಾಲಯವನ್ನು ಬಳಸುವುದಾದರೂ ಹೇಗೆ?

Transparent public toilet in japan

ಸುತ್ತಲೂ ಪಾರದರ್ಶಕ ಗೋಡೆಗಳೇ ಇರುವ ಶೌಚಾಲಯವನ್ನು ಬಳಸುವಾಗ ಹೊರಗಿನವರಿಗೆ ಕಾಣುವುದಿಲ್ಲವೇ? ಎನ್ನುವ ಗೊಂದಲ ಮೂಡುವುದು ಸಾಮಾನ್ಯ. ಆದರೆ, ಇದಕ್ಕೂ ಕೂಡಾ ಉತ್ತರವಿದೆ. ಹೊರಗಿನಿಂದ ನೀವು ಟಾಯ್ಲೆಟ್ ಸ್ವಚ್ಚವಾಗಿದೆ ಎಂದು ಖಾತರಿ ಪಡಿಸಿಕೊಂಡ ನಂತರ, ಬಾಗಿಲನ್ನು ತೆರೆದು ಒಳಗೆ ಹೋಗಿ ಅಲ್ಲಿ ಅಳವಡಿಸಲಾಗಿರುವ ಒಂದು ಬಟನ್ ಒತ್ತಿದ ಕೂಡಲೇ ಇಡೀ ಟಾಯ್ಲೆಟ್ ಅಪಾರದರ್ಶಕವಾಗಿ ಬಿಡುತ್ತದೆ! ಟಾಯ್ಲೆಟ್ ನಲ್ಲಿ ಅಳವಡಿಸಲಾಗಿರುವ ಸ್ಮಾರ್ಟ್ ಗ್ಲಾಸ್ ತಂತ್ರಜ್ಞಾನದ ಸಹಾಯದಿಂದ ಒಳಗೆ ಇರುವವರು ಹೊರಗೆ ಕಾಣಿಸುವುದಿಲ್ಲ. ಇದೊಂದು ನಿಜಕ್ಕೂ ಅದ್ಭುತವಾದ ತಂತ್ರಜ್ಞಾನವುಳ್ಳ ಶೌಚಾಲಯವೇ ಸರಿ.

ನಮ್ಮ ದೇಶದಲ್ಲಿಯೂ ಈ ಸೌಲಭ್ಯವಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ಆದರೆ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ಇಂತಹ ಸೌಲಭ್ಯ ನೀಡಬಹುದಾದರೂ, ಅದನ್ನು ನಿರ್ವಹಣೆ ಮಾಡುವುದು ಬಹಳ ಕಠಿಣ.
  • ಪವಿತ್ರ

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.