• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ ಮಾಡಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು : ಸಾರಿಗೆ ಇಲಾಖೆಯಿಂದ ಕಠಿಣ ಆದೇಶ ಜಾರಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ ಮಾಡಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು : ಸಾರಿಗೆ ಇಲಾಖೆಯಿಂದ ಕಠಿಣ ಆದೇಶ ಜಾರಿ
0
SHARES
34
VIEWS
Share on FacebookShare on Twitter
  • ಕುಡಿದು ಶಾಲಾ ವಾಹನ ಚಾಲನೆ (Transport Department strict order) ಮಾಡಿದ್ರೆ ಲೈಸೆನ್ಸ್ ರದ್ದು
  • ನವೆಂಬರ್ ಅಂತ್ಯದವರೆಗೆ ಪರ್ಮಿಟ್ & ಫಿಟ್ನೆಸ್ ನವೀಕರಣ
  • ನವೆಂಬರ್ 30ರೊಳಗೆ ಎಲ್ಲ ಶಾಲಾ ವಾಹನಗಳಿಗೆ ಎಫ್‌ಸಿ ಕಡ್ಡಾಯ

Bengalore: ಬೆಂಗಳೂರು ನಗರದಲ್ಲಿ ಶಾಲಾ ಮತ್ತು ಕಾಲೇಜು ಮಕ್ಕಳು ಸಂಚರಿಸುವ ವಾಹನಗಳ (Transport Department strict order) ಸುರಕ್ಷತೆ ಕುರಿತು ಸರ್ಕಾರ ಮತ್ತಷ್ಟು ಕಠಿಣ ನಿಲುವು ತೆಗೆದುಕೊಂಡಿದೆ.

ಸಾರಿಗೆ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ವಿಶೇಷವಾಗಿ ಕುಡಿದು ಸ್ಕೂಲ್‌ಬಸ್‌ಗಳನ್ನು ಚಾಲನೆ ಮಾಡುವವರ ಮೇಲೆ ಯಾವುದೇ ರೀತಿಯ ಸಡಿಲಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Transport Department strict order

ಈ ಹಿನ್ನೆಲೆಯಲ್ಲಿ, ಮದ್ಯಪಾನ ಮಾಡಿ ಶಾಲಾ ಬಸ್‌ಗಳನ್ನು (Transport Department strict order) ಓಡಿಸಿದರೆ, ಚಾಲಕರ ಡ್ರೈವಿಂಗ್ ಲೈಸೆನ್ಸ್ ನೇರವಾಗಿ ರದ್ದು ಮಾಡಲಾಗುತ್ತದೆ ಎಂದು ಇಲಾಖೆ ಘೋಷಿಸಿದೆ.

ಪೊಲೀಸರು ಹಿಡಿದು ಶಿಫಾರಸು ಮಾಡಿದ ಡಿಎಲ್‌ಗಳನ್ನು ಆರ್‌ಟಿಒ ಅಧಿಕಾರಿಗಳು ತಕ್ಷಣವೇ ಅಮಾನತು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ, ಎಲ್ಲಾ ಶಾಲಾ ಮತ್ತು ಕಾಲೇಜು ವಾಹನಗಳ ಅರ್ಹತಾ ಪತ್ರಗಳ ನವೀಕರಣ (ಪರ್ಮಿಟ್) ಕಡ್ಡಾಯವಾಗಿದ್ದು, ವಾಹನ ಮಾಲೀಕರು ಎಲ್ಲ ನಿಯಮ ಪಾಲಿಸಬೇಕಾಗಿದೆ.

ಇನ್ನು ಈ ಕುರಿತಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮಗಳಿಗೆ ಮಾತನಾಡುತ್ತಾ, ನವೆಂಬರ್ 30ರ ಒಳಗೆ ಎಲ್ಲಾ ಶಾಲಾ ವಾಹನಗಳು ಎಫ್‌ಸಿ (ಫಿಟ್ನೆಸ್ ಸರ್ಟಿಫಿಕೇಟ್) ಮಾಡಿಸಿಕೊಳ್ಳಬೇಕು ಎಂಬ ಸ್ಪಷ್ಟ ಡೆಡ್‌ಲೈನ್ ಘೋಷಿಸಿದ್ದಾರೆ.

ಈ ಅವಧಿಯೊಳಗೆ ಎಫ್‌ಸಿ ಮಾಡಿಸದ ವಾಹನಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಲಾಗುವುದು. ಹೊರರಾಜ್ಯಗಳಲ್ಲಿ ನೋಂದಾಯಿತವಾಗಿರುವ ಬಸ್‌ಗಳು ಕರ್ನಾಟಕದಲ್ಲಿ ಸಂಚರಿಸುವ ಸಂದರ್ಭದಲ್ಲಿ ಅನಧಿಕೃತ ಲಗೇಜ್ ಹೊಂದಿದ್ದರೆ ವಾಹನಗಳನ್ನು ತಕ್ಷಣವೇ ಸೀಜ್ ಮಾಡಲಾಗುತ್ತದೆ.

ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಹೊರರಾಜ್ಯ ಬಸ್‌ಗಳಿಂದ ತೆರಿಗೆ ವಸೂಲಿ ಮಾಡಲು ಕೂಡ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಅನಧಿಕೃತ ವಾಹನ ಸಂಚಾರ ಹಾಗೂ ಅಕ್ರಮ ಲಗೇಜ್ ಸಾಗಣೆಗೆ ಬ್ರೇಕ್ ಬೀಳುತ್ತದೆ.

ಇನ್ನು ಆದೇಶದ ಇನ್ನೊಂದು ಪ್ರಮುಖ ಅಂಶವೆಂದರೆ, ಆರ್‌ಟಿಒ ಕಚೇರಿಗಳಲ್ಲಿ ಏಜೆಂಟ್‌ಗಳು ಹಾಗೂ ಬ್ರೋಕರ್‌ಗಳ ಪ್ರವೇಶದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ .

ಯಾರೇ ಪ್ರಯಾಣಿಕರು ಅಥವಾ ಚಾಲಕರು ಏಜೆಂಟ್ ಮುಖಾಂತರ ಡಾಕ್ಯುಮೆಂಟ್ ಸಲ್ಲಿಸಿದರೆ, ಅಧಿಕಾರಿಗಳ ಮೇಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ನೇರವಾಗಿ ಕಚೇರಿಯೊಂದಿಗೆ ಕಾರ್ಯನಿರ್ವಹಿಸಬೇಕು, ಇದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಮತ್ತು ಸೇವೆಗಳು ಪಾರದರ್ಶಕವಾಗಿರುತ್ತದೆ .

ಕಳೆದ ಕೆಲವು ವರ್ಷಗಳಿಂದ ಆರ್‌ಟಿಒ ಕಚೇರಿಗಳಲ್ಲಿ ಏಜೆಂಟುಗಳ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕಡ್ಡಾಯಗೊಳಿಸಲಾಗಿದೆ.

ಕರ್ನೂಲಿನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಬಸ್ ದುರಂತದ ನಂತರ, ರಾಜ್ಯದೊಳಗಿನ ಎಲ್ಲಾ ಬಸ್‌ಗಳಿಗೆ ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗಿದೆ.

ವಿಶೇಷವಾಗಿ, ಪ್ರತಿಯೊಂದು ಬಸ್‌ನ ಹಿಂಭಾಗದಲ್ಲಿ ಎಮರ್ಜೆನ್ಸಿ ಡೋರ್ ಕಡ್ಡಾಯವಾಗಿರಬೇಕು ಎಂದು ಆದೇಶಿಸಲಾಗಿದೆ.

ಪ್ರಯಾಣಿಕರು ಅಗತ್ಯವಿದ್ದಾಗ ತಕ್ಷಣ ಹೊರಬರುವ ಅವಕಾಶ ಕಲ್ಪಿಸುವುದಕ್ಕಾಗಿ ಈ ನಿಯಮ ಜಾರಿಗೆ ಬಂದಿದೆ.

ಬಸ್‌ನಲ್ಲಿ ಪ್ರಯಾಣಿಕರು ಹತ್ತಿ ಇಳಿಯುವ ವ್ಯವಸ್ಥೆ ಸರಿಯಾಗಿ ಇರಬೇಕು; ಈ ನಿಯಮಗಳು ಪಾಲಿಸದಿದ್ದರೆ ಬಸ್‌ಗೆ ಎಫ್‌ಸಿ ನೀಡುವುದಿಲ್ಲವೆಂದು ಇಲಾಖೆ ಸ್ಪಷ್ಟಪಡಿಸಿದೆ.

ಶಾಲಾ ಮಕ್ಕಳ ಸುರಕ್ಷತೆ, ಸಾರ್ವಜನಿಕರ ಪ್ರಯಾಣ ಭದ್ರತೆ ಮತ್ತು ಅಕ್ರಮ ವಾಹನ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಹೊಸ ನಿಯಮಗಳ ಇನ್ನಷ್ಟು ಕಠಿಣವಾಗಿವೆ

Tags: bengalurubuslicencesschool

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.