- ಸಾರಿಗೆ ನೌಕರರ ಮುಷ್ಕರ ಜನಸಾಮಾನ್ಯರಿಗೆ ಪರದಾಟ
- ಹೆಚ್ಚು ಹಣ ನೀಡುತ್ತೇವೆಂದರೂ ಸಿಗದ ಆಟೋ ಟ್ಯಾಕ್ಸಿ
- ಮೆಟ್ರೋ ನಿಲ್ದಾಣದತ್ತ ಮುಖ ಮಾಡಿದ ಪ್ರಯಾಣಿಕರು
Bengaluru: ಸಾರಿಗೆ ನೌಕರರ ಮುಷ್ಕರದ ಪರಿಣಾಮವಾಗಿ ಬೆಂಗಳೂರಿನಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ.
ಬಿಎಂಟಿಸಿ(BMTC) ಮತ್ತು ಕೆಎಸ್ಆರ್‌ಟಿಸಿ(KSRTC) ಬಸ್‌ಗಳು ಅಪರೂಪವಾಗಿ ಸಂಚರಿಸುತ್ತಿದ್ದು, ಇದರಿಂದ ನಿತ್ಯ ಪ್ರಯಾಣಿಕರಿಗೆ ಅಸೌಕರ್ಯ ಉಂಟಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ(Kempegowda Bus Stand) ಹಾಗೂ ಯಶವಂತಪುರ ಜಂಕ್ಷನ್‌ಗಳಲ್ಲಿ ಬಸ್ ಸಂಚಾರ ಇನ್ನೂ ಸಂಪೂರ್ಣವಾಗಿ ಪುನರಾರಂಭವಾಗಿಲ್ಲ.
ಆದುದರಿಂದ ಅನೇಕರು ಬಸ್ ಇಲ್ಲವೇ ಖಾಸಗಿ ವಾಹನಕ್ಕಾಗಿ ಕಾಯುತ್ತಾ ನಿಲ್ಲುತ್ತಿದ್ದಾರೆ.
ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿಯೂ ಕೆಎಸ್ಆರ್‌ಟಿಸಿ ಬಸ್‌ಗಳ ಇಳಿಮೆ ಕಂಡುಬಂದಿದೆ.
ನೌಕರರ ಸಂಘಟನೆಗಳು(Organization of employees) ಮುಷ್ಕರಕ್ಕೆ ಕರೆ ನೀಡಿದ್ದರೂ, ಕೆಲವೊಂದು ಸಿಬ್ಬಂದಿಗಳು ಎಸ್ಮಾ ಭಯದಿಂದ ಭಯದಿಂದ ತಮ್ಮ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಆದರೆ, ಬಹುತೇಕ ಬಸ್‌ಗಳು ಸಮಯಕ್ಕೆ ತಲುಪದ ಕಾರಣದಿಂದ ಪ್ರಯಾಣಿಕರು ಪರ್ಯಾಯ ಸಾರಿಗೆಯತ್ತ ಮುಖಹಾಕಿದ್ದಾರೆ.
ಖಾಸಗಿ ಕ್ಯಾಬ್‌ಗಳು(Private cabs), ಆಟೋಗಳು(Autos) ಮತ್ತು ಮೆಟ್ರೋಗಳು(metros) ಜಾಸ್ತಿಯಾಗಿ ಬಳಕೆಯಾಗುತ್ತಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು ಇಂತಿವೆ:
- 2024ರ ಜನವರಿಯಿಂದಲೇ ವೇತನ ಪರಿಷ್ಕರಣೆ ಜಾರಿಗೆ ತರಬೇಕು
- ಕಳೆದ 38 ತಿಂಗಳ ವೇತನ ಬಾಕಿಯನ್ನು ಪಾವತಿಸಬೇಕು
- ಪ್ರತಿ 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಖಚಿತಪಡಿಸಬೇಕು
- 7ನೇ ವೇತನ ಆಯೋಗ ಜಾರಿಗೆ ತರಬೇಕು
- ಮುಷ್ಕರದಲ್ಲಿ ಪಾಲ್ಗೊಂಡ ಕಾರಣದಿಂದ ವಜಾಗೊಳಿಸಲಾದ ನೌಕರರ ಮೇಲೆ ತೆಗೆದುಕೊಂಡ ಕ್ರಮಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು
- ನೌಕರರ ಕುಟುಂಬದ ಮೇಲೆ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು
- ವೈದ್ಯಕೀಯ ಸೌಲಭ್ಯಗಳು ನಗದುರಹಿತವಾಗಿರಬೇಕು
- ವಿದ್ಯುತ್ ಬಸ್‌ಗಳ ನಿರ್ವಹಣೆಯಲ್ಲಿ ಖಾಸಗಿಕರಣ ತಪ್ಪಿಸಬೇಕು
ಇನ್ನು ಈ ಕುರಿತಾಗಿ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆ ಯಾವುದೇ ಸ್ಪಷ್ಟ ನಿರ್ಧಾರ ತಲುಪಿಲ್ಲ.
ಈ ಸಭೆಯ ಬಳಿಕ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷ ಅನಂತ್ ಸುಬ್ಬರಾವ್(Anant Subbarao) “ಸರ್ಕಾರ 2 ವರ್ಷಗಳ ವೇತನ ಬಾಕಿಯನ್ನು ಮಾತ್ರ ಪಾವತಿಸಬಲ್ಲದು ಎನ್ನುತ್ತಿದೆ.
ಉಳಿದ ಬೇಡಿಕೆಗಳ ಬಗ್ಗೆ ಸ್ಪಷ್ಟ ಭರವಸೆ ನೀಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ರಾಜ್ಯ ಸರ್ಕಾರ(State Govt) ಕೆಲವು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿದೆ.
ಐಟಿ ಉದ್ಯೋಗಿಗಳಿಗೆ(IT employees) ವರ್ಕ್ ಫ್ರಮ್ ಹೋಮ್(Work from home) ಗೆ ಸೂಚಿಸಲಾಗಿದೆ.
ಖಾಸಗಿ ಶಾಲಾ ವ್ಯಾನ್‌ಗಳ ಮೂಲಕ ಸರ್ಕಾರಿ ಶಾಲಾ ಮಕ್ಕಳ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಮೆಟ್ರೋ ರೈಲುಗಳ ಹೆಚ್ಚುವರಿ ಟಿಕೆಟ್ ಮತ್ತು ಫ್ರೀಕ್ವೆನ್ಸಿ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ರೈಲ್ವೆ ಇಲಾಖೆ ಒಳಜಿಲ್ಲೆಗಳ ರೈಲು ಸಂಚಾರ ಹೆಚ್ಚಿಸಲು ಸೂಚನೆ ನೀಡಿದೆ.
ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿರುವ ಕಾರಣ, ಖಾಸಗಿ ಬಸ್(Private bus) ಮಾಲೀಕರ ಸಂಘದಿಂದ ತಾತ್ಕಾಲಿಕವಾಗಿ ಸುಮಾರು 4 ಸಾವಿರ ಬಸ್‌ಗಳನ್ನು ಬೆಂಗಳೂರು ನಗರಕ್ಕೆ ಒದಗಿಸುವಂತೆ ಸರ್ಕಾರ ಮನವಿ ಮಾಡಿದೆ.
ರಾಜ್ಯದಾದ್ಯಂತ ಸುಮಾರು 11 ಸಾವಿರ ಬಸ್‌ಗಳ ಅಗತ್ಯವಿದೆ ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
ಇದನ್ನು ಓದಿ : ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ
ಆದರೆ ಈ ಪ್ರಸ್ತಾವನೆಗೆ ಇನ್ನೂ ಅಂತಿಮ ಒಪ್ಪಿಗೆ ದೊರಕಿಲ್ಲ. ಈ ಮಧ್ಯೆ ಮಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಕ್ಯೂ ಇದ್ದು ಪೊಲೀಸರು ಕಟ್ಟು ನಿಟ್ಟಿನ ಭದ್ರತೆ ಕೈಗೊಂಡಿದ್ದಾರೆ.