- ಬೈಯಪ್ಪನಹಳ್ಳಿಯಲ್ಲಿರುವ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿರುವ (tree chopping at SMVT railway station ) 269 ಮರಗಳಿಗೆ ಬೀಳಲಿದೆ ಕೊಡಲಿ ಏಟು
- ರೈಲ್ವೆ ಡಿಪೋ ನಿರ್ಮಾಣಕ್ಕಾಗಿ 269 ಮರಗಳ ಕಡಿತ ಯೋಜನೆಗೆ ಸಾರ್ವಜನಿಕರ ವಿರೋಧ
- ಹಳೆಯ ಬೃಹತ್ ಮರಗಳನ್ನು ಉಳಿಸಲು ಸ್ಥಳೀಯರಿಂದ ಹೋರಾಟದ ಎಚ್ಚರಿಕೆ
Bengaluru: ಬೈಯಪ್ಪನಹಳ್ಳಿ ಸಮೀಪ ಇರುವ Sir M. Visvesvaraya Terminal ಆವರಣದಲ್ಲಿ ಅಭಿವೃದ್ಧಿ (tree chopping at SMVT railway station) ಕಾಮಗಾರಿಯ ಹೆಸರಿನಲ್ಲಿ 269ಕ್ಕೂ ಹೆಚ್ಚು ಮರಗಳನ್ನು ಕಡಿಸಲು ರೈಲ್ವೆ ಇಲಾಖೆ ( Indian Railways) ಮುಂದಾಗಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಏರ್ಪೋರ್ಟ್ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ಆಧುನಿಕ ರೈಲು ನಿಲ್ದಾಣದ ವಿಸ್ತರಣಾ ಯೋಜನೆ ಭಾಗವಾಗಿ ರೈಲ್ವೆ ಕೋಚ್‌ಗಳ (Coach) ತಪಾಸಣೆ ಮತ್ತು ನಿರ್ವಹಣೆಗೆ ಡಿಪೋ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ತಿಳಿದುಬಂದಿದೆ.

ಆದರೆ, ಆ ಯೋಜನೆಗೆ ಆಯ್ಕೆ ಮಾಡಿರುವ ಜಾಗದಲ್ಲೇ ಹಲವು ವರ್ಷಗಳಷ್ಟು ಹಳೆಯ, ಬೃಹತ್ ಗಾತ್ರದ ಮರಗಳು (tree chopping at SMVT railway station) ಇರುವುದರಿಂದ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕಡಿಸಲು ಗುರುತಿಸಿರುವ ಮರಗಳು ಕೇವಲ ಅಂಕಿ-ಅಂಶಗಳಲ್ಲ; ಅವು ನಗರ ಪರಿಸರದ ಉಸಿರು. ಹತ್ತಾರು ವರ್ಷಗಳಿಂದ ಬೆಳೆದಿರುವ ಈ ಮರಗಳು ಪಕ್ಷಿಗಳ ಆಶ್ರಯವಾಗಿಯೂ, ಸುತ್ತಮುತ್ತಲಿನ ವಾತಾವರಣ ಸಮತೋಲನ ಕಾಯ್ದುಕೊಳ್ಳುವ ಪ್ರಮುಖ ಮೂಲವಾಗಿಯೂ ಕಾರ್ಯನಿರ್ವಹಿಸುತ್ತಿವೆ.
ಈಗಾಗಲೇ ಹೆಚ್ಚುತ್ತಿರುವ ತಾಪಮಾನ, ವಾಯು ಮಾಲಿನ್ಯ ಮತ್ತು ಹಸಿರು ಆವರಣ ಕುಸಿತದ ನಡುವೆ ಇಂತಹ ದೊಡ್ಡ ಪ್ರಮಾಣದ ಮರಗಳ ಕಡಿತವು ನಗರದ ಪರಿಸರ ಸಮತೋಲನಕ್ಕೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯ. “ಅಭಿವೃದ್ಧಿ ಅಗತ್ಯವೇ ಸರಿ, ಆದರೆ ಅದು ಪರಿಸರವನ್ನು ನಾಶಮಾಡುವ ರೀತಿಯಲ್ಲಿ ನಡೆಯಬಾರದು” ಎಂಬುದು ಹೋರಾಟಗಾರರ ಒತ್ತಾಯವಾಗಿದೆ.
ಮರಗಳ ಕಡಿತಕ್ಕೆ ವಿರೋಧ ವ್ಯಕ್ತಪಡಿಸಿದ ಪರಿಸರ ಸಂಘಟನೆಗಳು, ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಪುನರ್‌ಸಸಿ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಇಂತಹ ಕ್ರಮ ಕೈಗೊಳ್ಳುತ್ತಿರುವುದನ್ನು ಪ್ರಶ್ನಿಸಿವೆ.
ಒಂದು ವೇಳೆ ಮರಗಳ ಕಡಿತ ಪ್ರಕ್ರಿಯೆ ಆರಂಭಿಸಿದರೆ ರೈಲು ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
“ನಗರದ ಹಸಿರು ಸಂಪತ್ತನ್ನು ಉಳಿಸುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಕಾನೂನು ಹೋರಾಟದ ಮಾರ್ಗವನ್ನೂ ಪರಿಗಣಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ, ರೈಲ್ವೆ ಇಲಾಖೆ ತನ್ನ ಯೋಜನೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ.
ರೈಲ್ವೆ ಕೋಚ್‌ಗಳ ನಿರ್ವಹಣೆ ಮತ್ತು ತಪಾಸಣೆ ಕಾರ್ಯಗಳನ್ನು ಸುಗಮಗೊಳಿಸಲು ಡಿಪೋ (Depo) ನಿರ್ಮಾಣ ಅನಿವಾರ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಮನಗಂಡು ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಿದೆ ಎಂಬುದು ಇಲಾಖೆಯ ವಾದ.
ಆದಾಗ್ಯೂ, ಮರಗಳ ಕಡಿತಕ್ಕೆ ಬದಲಾಗಿ ಸ್ಥಳಾಂತರ ಅಥವಾ ಪರ್ಯಾಯ ಜಾಗದ ಅನ್ವೇಷಣೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ. ಈ ಕುರಿತು ಸ್ಪಷ್ಟ ಉತ್ತರ ನೀಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ, ‘ಅಭಿವೃದ್ಧಿ’ ಮತ್ತು ‘ಪರಿಸರ ಸಂರಕ್ಷಣೆ’ ಎಂಬ ಎರಡು ಪ್ರಮುಖ ಅಂಶಗಳ ನಡುವೆ ಸಮತೋಲನ ಸಾಧಿಸುವ ಸವಾಲು ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಗಾರ್ಡನ್ ಸಿಟಿ (Garden City) ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ನಿರಂತರವಾಗಿ ಹಸಿರು ಆವರಣ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ.
ನೂರಾರು ಮರಗಳ ಕಡಿತ ನಗರವನ್ನು ಮತ್ತಷ್ಟು ಕಾಂಕ್ರೀಟ್ (Concrete) ಕಾಡಾಗಿ ಪರಿವರ್ತಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸರ್ಕಾರ ಮತ್ತು ಸಂಬಂಧಿತ ಇಲಾಖೆ ಜನಾಭಿಪ್ರಾಯವನ್ನು ಗೌರವಿಸಿ, ಪರಿಸರಕ್ಕೆ ಹಾನಿಯಾಗದಂತೆ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸಮಗ್ರ ಪರಿಹಾರ ಕಂಡುಕೊಳ್ಳಬೇಕೆಂಬುದು ನಾಗರಿಕ ಸಮಾಜದ ಒತ್ತಾಯವಾಗಿದೆ.
ಇದನ್ನು ಓದಿ : https://vijayatimes.com/modi-calls-israel-pm-to-stop-war/