Banglore : ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸಾಧನೆ ಮೆರೆದಿರುವ ಮತ್ತು ಇತ್ತೀಚಿಗೆ ವಕೀಲರಾಗಿ ಪ್ರಮಾಣ ವಚನ ಸ್ವೀಕರಿಸಿರುವ ವಿಜಯಲಕ್ಷ್ಮಿ ಶಿಬರೂರು (Vijayalakshmi Shibaroor) ಅವರಿಗೆ ಬೆಂಗಳೂರು ವಕೀಲರ ಸಂಘ ವಿಶ್ವ ಮಹಿಳಾ ದಿನಾಚರಣೆಯ (International Women’s Day) ಅಂಗವಾಗಿ ಗೌರವಾರ್ಪಣೆ (Tribute to Vijayalakshmi Shibaroor) ಮಾಡಲಾಯಿತು.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ (Bangalore City Civil Court) ಅವರಣದಲ್ಲಿರುವ ವಕೀಲರ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿಯ (BJP) ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ (Tejaswini Gowda), ಸಿನಿಮಾ ನಟಿ ಮಯೂರಿ ಕ್ಯಾತಾರಿ,
ಸಿನಿಮಾ ನಿರ್ದೇಶಕಿ ಶ್ವೇತಾ ಶ್ರೀವಾತ್ಸವ್, ಕಾನೂನು ಅಧ್ಯಯನ ಪ್ರೊಫೆಸರ್ ನಾಗರತ್ನ ಎ ಮುಂತಾದವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ (Tribute to Vijayalakshmi Shibaroor) ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರವಾನ್ವಿತ ಎಂ.ಜಿ ಉಮಾ (MG Uma) ಅವರು, ಮಹಿಳೆಯರಿಗೆ ಕಾನೂನಿನ ಅರಿವು ಅತ್ಯಗತ್ಯ.
ಕಾನೂನಿನ ಜ್ಞಾನ ಆಕೆಯನ್ನು ಸಬಲೀಕರಣಗೊಳಿಸುತ್ತೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ವಕೀಲರ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಅಂತ ಶ್ಲಾಘಿಸಿದ್ರು. ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ (Vivek Subbareddy), ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ (TG Ravi), ಖಜಾಂಚಿ ಹರೀಶ್ ಎಂ.ಟಿ ಮುಂತಾದವರು ಭಾಗವಹಿಸಿದ್ದರು.