- ಯಮಸ್ವರೂಪಿ ಕಂಟೈನರ್‌ಗೆ 9 ಬ*, 25 ಜನ ಗಂಭೀರ
- ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಡೆದ ದುರ್ಘಟನೆ
- ಅದ್ಧೂರಿ ಗಣೇಶ ಮೆರವಣಿಗೆ ಸಾ*ನ ಮೆರವಣಿಗೆಯಾಗಿ ಬದಲಾಗಿದೆ
Hassan: ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ(Mosalehosahalli village) ಘನಘೋರ ದುರಂತವೊಂದು ನಡೆದುಹೋಗಿದೆ,
ಗಣೇಶನ ಮೆರವಣಿಗೆ ಸಾ*ನ ಮೆರವಣಿಗೆಯಾಗಿ ಬದಲಾಗಿದ್ದು 9 ಯುವಕರನ್ನು ಬ* ಪಡೆದಿದೆ. ಪ್ರತಿವರ್ಷದಂತೆ ಈ ಬಾರಿಯೂ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶನ ಅದ್ಧೂರಿ ಉತ್ಸವ ಜರುಗುತ್ತಿತ್ತು,
ಝಗಮಗಿಸುವ ಲೈಟ್ನಲ್ಲಿ ಢಗಢಗ ಡಿಜೆ ಸೌಂಡ್ನಲ್ಲಿ ಸಖತ್ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸುತ್ತಿದ್ದವರ ಮೇಲೆ ಯಮಸ್ವರೂಪಿ ಕಂಟೈನರ್ ನುಗ್ಗಿ ನಡೆಯಬಾರದಿದ್ದ ಅವಘಡಕ್ಕೆ ಕಾರಣವಾಗಿದೆ.
ಹಾಸನ-ಮೈಸೂರು ಹೆದ್ದಾರಿಯಲ್ಲಿ ಹಾಸನದಿಂದ ಹೊಳೆನರಸೀಪುರ ಕಡೆಗೆ ಟ್ರಕ್ವೊಂದು ವೇಗವಾಗಿ ಬಂದಿದೆ, ಈ ಟ್ರಕ್‌ಗೆ ಏಕಾಏಕಿ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ,
ಆ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಮೆರವಣಿಗೆಯಲ್ಲಿದ್ದ ಜನರ ಮೇಲೆ ನುಗ್ಗಿಸಿದ್ದಾನೆ.
ಘಟನೆ ನಡೆದ ಸ್ಥಳದಲ್ಲಿ ಜನ ಕಿಕ್ಕಿರಿದು ಸೇರಿದ್ದರಿಂದ ಕಂಟೈನರ್ ಏಕಾಏಕಿ ನುಗ್ಗಿದ್ದ ಪರಿಣಾಮ ಜನರೆಲ್ಲ ಅಲ್ಲೋಲ-ಕಲ್ಲೋಲವಾಗಿದ್ದಾರೆ. ಕಂಟೈನರ್ನಡಿ ಸಿಲುಕಿ 9 ಮಂದಿ ಸಾ*ನ ಮನೆ ಸೇರಿದ್ರೆ
25ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಆಂಬ್ಯುಲೆನ್ಸ್ ಕರೆಸಿ ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು

ಆದರೂ ಮಾಹಿತಿ ಪ್ರಕಾರ ಐವರು ಸ್ಥಳದಲ್ಲೇ ಮೃತಪಟ್ರೆ ತೀವ್ರ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾ*ನ್ನಪ್ಪಿದ್ದಾರೆ. ಕೆಲವರ ಸ್ಥಿತಿ ಇನ್ನೂಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ದುರಂತಕ್ಕೆ ಮೂಲ ಕಾರಣ ಬೈಕ್ ಸವಾರ ಬೇಕಾಬಿಟ್ಟಿಯಾಗಿ ಅಡ್ಡ ಬಂದಿದ್ದು ಹಾಗೂ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ. ಸಿಟ್ಟಿಗೆದ್ದ ಸ್ಥಳೀಯರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅಪಘಾತ ಮಾಡಿದ ವಾಹನ ಮಹಾರಾಷ್ಟ್ರ ನೋಂದಣಿ ಹೊಂದಿದ್ದು ಚಾಲಕ ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ್, ಆತನೂ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ,
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗಣೇಶ ಮೆರವಣಿಗೆಯ ವೇಳೆ ನಡೆದ ಈ ದುರ್ಘಟನೆಯು ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರ ವಿವರಗಳು:
- ಪ್ರವೀಣ್ ಕುಮಾರ್, BE ಅಂತಿಮ ವರ್ಷದ ವಿದ್ಯಾರ್ಥಿ, ಬಿಹಾರ
- ರಾಜೇಶ್ ಬಿನ್ ಮೂರ್ತಿ, ( 17 ) ಕೆ.ಬಿ. ಪಾಳ್ಯ, ಹೊಳೆನರಸೀಪುರ
- ಈಶ್ವರ್ ಬಿನ್ ರವಿಕುಮಾರ್( 17 ) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ
- ಗೋಕುಲ್ ಬಿನ್ ಸಂಪತ್ ಕುಮಾರ್( 17 ) ಮುತ್ತಿಗೆ ಹಿರೇಹಳ್ಳಿ
- ಕುಮಾರ್ ಬಿನ್ ತಿಮ್ಮಯ್ಯ( 25 ) ಕಬ್ಬಿನಹಳ್ಳಿ, ಹಳೆಕೋಟೆ, ಹೊಳೆನರಸೀಪುರ
- ಪ್ರವೀಣ್ ಬಿನ್ ಹನುಮಯ್ಯ ( 25 ) ಕಬ್ಬಿನಹಳ್ಳಿ, ಹೊಳೆನರಸೀಪುರ
- ಮಿಥುನ್ ಬಿನ್ ವಿಜಯ್ (23 ) ಗವಿಗಂಗಾಪುರ, ಹೊಸದುರ್ಗ, ಚಿತ್ರದುರ್ಗ ಜಿಲ್ಲೆ
- ಪ್ರಭಾಕರ್, ಬಂಟರಹಳ್ಳಿ, ಹೊಳೆನರಸೀಪುರ ತಾಲೂಕು
- ಮೃತನ ಹೆಸರು, ವಿಳಾಸ ಇನ್ನೂ ಪತ್ತೆಯಾಗಿಲ್ಲ
ಒಟ್ಟಾರೆ ಮೊಸಳೆಹೊಸಹಳ್ಳಿ ಗಣೇಶ ಮೆರವಣಿಗೆ ದುರಂತದಲ್ಲಿ ಮೃತಪಟ್ಟ ಎಲ್ಲ 9 ಮಂದಿ 17 ರಿಂದ 25 ವರ್ಷದೊಳಗಿನ ಯುವಕರಾಗಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ(H.D. Revanna) ಪೊಲೀಸರ ನಿರ್ಲಕ್ಷ್ಯದಿಂದಲೇ ದುರಂತ ನಡೆದಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಣೇಶ ಮೆರವಣಿಗೆ ಬ್ಯಾರಿಕೇಡ್ ಹಾಕಿರಲಿಲ್ಲ,
ಮೆರವಣಿಗೆ ವೇಳೆ ಪೊಲೀಸರೇ ಇರಲಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮೃತರ ಕುಟುಂಬಗಳಿಗೆ ಕನಿಷ್ಠ 10 ಲಕ್ಷದಿಂದ 15 ಲಕ್ಷ ರೂ. ಪರಿಹಾರ ಕೊಡ್ಬೇಕು ಎಂದು ಆಗ್ರಹಿಸಿದ್ದಾರೆ.
ಅಪಘಾತ ವಲಯ ಎಂದು ಗೊತ್ತಿದ್ದರೂ ಟ್ರಕ್ ವೇಗವಾಗಿ ಬಂದಿದೆ, ಅದಕ್ಕೆ ಸರಿಯಾಗಿ ಬೈಕ್ ಸವಾರ ಬೇಕಾಬಿಟ್ಟಿಯಾಗಿ ಅಡ್ಡ ಬಂದಿದ್ದು ಬಾಳಿ ಬದುಕಬೇಕಿದ್ದ 9 ಜನ ಯುವಕರು ಇಹಲೋಕ ತ್ಯಜಿಸಿದ್ದಾರೆ.
ಇದನ್ನು ಓದಿ : Road Accident Deaths in India: 2023ರಲ್ಲಿ 1.7 ಲಕ್ಷ ಜೀವ ಹಾನಿ, ಕರ್ನಾಟಕಕ್ಕೆ 5ನೇ ಸ್ಥಾನ
ಮೆರವಣಿಗೆಗಳು ಸಾಗುವಾಗ ವಾಹನ ಸಂಚಾರಕ್ಕೆ ಸೂಕ್ತ ನಿರ್ಬಂಧಗಳನ್ನು ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರು ನಮಗೆ ಪರಿಹಾರ ಬೇಡ, ನಮಗೆ ನಮ್ಮ ಮಕ್ಕಳು ಬೇಕು ಅಂತ ಕಣ್ಣೀರು ಇಟ್ಟಿದ್ದಾರೆ.