• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಮಧ್ಯಪ್ರಾಚ್ಯ ರಕ್ಷಣೆಗೆ ಯುದ್ಧ ಅನಿವಾರ್ಯ : ಇದಕ್ಕೆಲ್ಲ ಒಬಾಮಾ ನೀತಿಗಳೇ ಕಾರಣ ಎಂದು ಟ್ರಂಪ್‌ ಕಿಡಿ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಮಧ್ಯಪ್ರಾಚ್ಯ ರಕ್ಷಣೆಗೆ ಯುದ್ಧ ಅನಿವಾರ್ಯ : ಇದಕ್ಕೆಲ್ಲ ಒಬಾಮಾ ನೀತಿಗಳೇ ಕಾರಣ ಎಂದು ಟ್ರಂಪ್‌ ಕಿಡಿ
0
SHARES
6
VIEWS
Share on FacebookShare on Twitter

ತೈಲಕ್ಕಾಗಿ ಅಲ್ಲ, ಜಾಗತಿಕ (Trump blames Obama policies ) ಶಾಂತಿಗಾಗಿ ಯುದ್ಧ: ಟ್ರಂಪ್

ಕೆಲವೇ ವಾರಗಳಲ್ಲಿ ಯುದ್ಧ ಅಂತ್ಯವಾಗಬಹುದು ಎಂದ ಟ್ರಂಪ್

ಪರಮಾಣು ಅಸ್ತ್ರ ತಡೆಯುವುದು ಮುಖ್ಯ ಉದ್ದೇಶ; ಮಾತುಕತೆಗೆ ಬರದಿದ್ದರೆ ಭಾರೀ ದಾಳಿ ಎಚ್ಚರಿಕೆ

Washington: ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಕುರಿತು ಅಮೆರಿಕದ (Trump blames Obama policies) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿದ್ದು, ಮಧ್ಯಪ್ರಾಚ್ಯ ದೇಶಗಳ ರಕ್ಷಣೆಗೆ ಈ ಯುದ್ಧ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದರಿಂದ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ದಾಳಿ ನಡೆಸಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸೈನ್ಯ ಮತ್ತು ಇಸ್ರೇಲ್ ಪಡೆಗಳು ಈಗಾಗಲೇ ನಿರ್ಣಾಯಕ ಯಶಸ್ಸು ಸಾಧಿಸಿದ್ದು, ಇರಾನ್‌ನ (Trump blames Obama policies) ನೌಕಾಪಡೆ ಮತ್ತು ವಾಯುಪಡೆಗೆ ಭಾರೀ ಹಾನಿಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಅಮೆರಿಕದ ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಈ ಯುದ್ಧವನ್ನು ದೀರ್ಘಕಾಲ ಮುಂದುವರಿಸುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದ್ದಾರೆ.

ಗುರಿ ಈಡೇರಿದ ಕೂಡಲೇ ಯುದ್ಧವನ್ನು ಅಂತ್ಯಗೊಳಿಸಲಾಗುವುದು ಮತ್ತು ಇನ್ನೂ ಎರಡು ಅಥವಾ ಮೂರು ವಾರಗಳಲ್ಲಿ ಯುದ್ಧ ಮುಗಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇರಾನ್ ಪರಮಾಣು ಅಸ್ತ್ರಗಳನ್ನು ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಗುರಿಯಾಗಿದೆ ಮತ್ತು ಜಾಗತಿಕ ಭದ್ರತೆಗಾಗಿ ಈ ಕ್ರಮ ಅಗತ್ಯವಾಯಿತು ಎಂದು ಅವರು ಹೇಳಿದ್ದಾರೆ.

ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕಕ್ಕೆ ಬೆಂಬಲ ನೀಡುತ್ತಿರುವ ಇಸ್ರೇಲ್ ದೇಶವನ್ನು ಟ್ರಂಪ್ ವಿಶೇಷವಾಗಿ ಪ್ರಶಂಸಿಸಿದ್ದಾರೆ.

ಇಸ್ರೇಲ್ ಸೈನ್ಯದ ಧೈರ್ಯ ಮತ್ತು ನಾಯಕತ್ವವನ್ನು ಅವರು ಕೊಂಡಾಡಿದ್ದಾರೆ. ಇದಲ್ಲದೆ ಸೌದಿ ಅರೇಬಿಯಾ (Saudi Arabia) , ಕತಾರ್, ಯುಎಇ, ಕುವೈತ್ ಮತ್ತು ಬಹರೇನ್ ಸೇರಿದಂತೆ ಹಲವು ಮಧ್ಯಪ್ರಾಚ್ಯ ದೇಶಗಳು ನೀಡಿದ ಬೆಂಬಲಕ್ಕೆ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ನೀಡಿದ ಕೆಲವು ಯುರೋಪಿಯನ್ (European) ರಾಷ್ಟ್ರಗಳಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇರಾನ್ ತನ್ನ ಪ್ರಭಾವವನ್ನು ಮಧ್ಯಪ್ರಾಚ್ಯದಲ್ಲಿ ಹೆಚ್ಚಿಸಲು ಮತ್ತು ಪರಮಾಣು ಶಕ್ತಿಯಾಗಲು ಪ್ರಯತ್ನಿಸುತ್ತಿರುವುದು ಜಗತ್ತಿಗೆ ದೊಡ್ಡ ಅಪಾಯವಾಗಿದೆ ಎಂದು ಟ್ರಂಪ್

ಹೇಳಿದ್ದಾರೆ. ಅಮೆರಿಕ ಈಗ ಇಂಧನಕ್ಕಾಗಿ ಮಧ್ಯಪ್ರಾಚ್ಯದ ಮೇಲೆ ಅವಲಂಬಿತವಾಗಿಲ್ಲ ಮತ್ತು ತೈಲಕ್ಕಾಗಿ ಈ ಯುದ್ಧ ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬದಲಾಗಿ ಮಿತ್ರ ರಾಷ್ಟ್ರಗಳ ರಕ್ಷಣೆ ಮತ್ತು ಜಾಗತಿಕ ಶಾಂತಿಯಿಗಾಗಿ ಈ ಯುದ್ಧಕ್ಕೆ ಇಳಿದಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇರಾನ್ ತಕ್ಷಣವೇ ತನ್ನ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಿ ಶಾಂತಿ ಮಾತುಕತೆಗೆ ಬರಬೇಕು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಟ್ರಂಪ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (Barack Obama) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಒಬಾಮಾ ಕಾಲದಲ್ಲಿ ನಡೆದ ಇರಾನ್ ಅಣು ಒಪ್ಪಂದವೇ ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಆ ಒಪ್ಪಂದವನ್ನು ರದ್ದುಗೊಳಿಸದೇ ಇದ್ದರೆ ಇರಾನ್ ಈಗಾಗಲೇ ಪರಮಾಣು ಅಸ್ತ್ರಗಳನ್ನು ತಯಾರಿಸಿರುತ್ತಿತ್ತು ಮತ್ತು ಅದು ಮಧ್ಯಪ್ರಾಚ್ಯದ ವಿನಾಶಕ್ಕೆ ಕಾರಣವಾಗುತ್ತಿತ್ತು ಎಂದು ಟ್ರಂಪ್ ಹೇಳಿದರು. ಒಬಾಮಾ ಆಡಳಿತವು ಇರಾನ್‌ಗೆ ಹಣ ಸಹಾಯ ನೀಡಿದ್ದುದನ್ನೂ ಅವರು ಟೀಕಿಸಿದರು.

ಇರಾನ್ ವಿಚಾರದಲ್ಲಿ ಹಿಂದಿನ ಆಡಳಿತ ಮಾಡಿದ ತಪ್ಪನ್ನು ಈಗ ನಾವು ಸರಿಪಡಿಸುತ್ತಿದ್ದೇವೆ ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : https://vijayatimes.com/massive-layoff-at-oracle/

Tags: Barack ObamaDonaldTrumpIranmiddleeast

Related News

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ
ಪ್ರಮುಖ ಸುದ್ದಿ

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ

April 14, 2026
ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ
ಡಿಜಿಟಲ್ ಜ್ಞಾನ

ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ

April 14, 2026
ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ
Vijaya Time

ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ

April 14, 2026
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ
ದೇಶ-ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ

April 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.