- ಮೊಬೈಲ್ ಜಗತ್ತಿಗೆ ಪ್ರವೇಶ ಮಾಡಿದ ಡೊನಾಲ್ಡ್ ಟ್ರಂಪ್
- ಮೇಡ್ ಇನ್ ಅಮೆರಿಕ ಹೆಸರಲ್ಲಿ ಟ್ರಂಪ್ ಮೊಬೈಲ್ (Trump family enters smartphone)
- ಆ್ಯಪಲ್‌ನ ಐಫೋನ್‌ನೊಂದಿಗೆ ನೇರವಾಗಿ ಸ್ಪರ್ಧಿಸಲು ಮಾರುಕಟ್ಟೆಗೆ ಲಗ್ಗೆ
ಈ ಹಿಂದೆ ಐಫೋನ್‌ಗಳನ್ನು ಅಮೆರಿಕದಲ್ಲಿ (America) ಉತ್ಪಾದನೆ ಮಾಡುವಂತೆ ಆಪಲ್‌ಗ ಸೂಚಿಸಿದ್ದ ಡೊನಾಲ್ಡ್ ಟ್ರಂಪ್ (Donald Trump) ಈಗ ಮೊಬೈಲ್ ಫೋನ್ (Mobile phone) ಮತ್ತು ವಯರ್‌ಲೆಸ್ ಸೇವಾ ಉದ್ಯಮಕ್ಕೆ (Wireless service industry) ಕಾಲಿಟ್ಟಿದ್ದಾರೆ.
The Trump Organization ಕಂಪನಿಯು ‘ಟ್ರಂಪ್ ಮೊಬೈಲ್’ ಎಂಬ ಸ್ಮಾರ್ಟ್‌ಫೋನ್ (Smartphone) ಬಿಡುಗಡೆ ಮಾಡಿದೆ.ಆ್ಯಪಲ್‌ನ ಐಫೋನ್‌ನೊಂದಿಗೆ (Apple’s iPhone) ನೇರವಾಗಿ ಸ್ಪರ್ಧಿಸಲು ಮಾರುಕಟ್ಟೆಗೆ (market) ಲಗ್ಗೆ ಇಡ್ತಿದೆ.
ಪ್ರಸ್ತುತ ಅಮೆರಿಕದಲ್ಲಿ ಈಗಾಗಲೇ ಬುಕಿಂಗ್ ಶುರುವಾಗಿದೆ. ಮುಂದಿನ ಆರು ತಿಂಗಳ (next six months) ನಂತರ ಟ್ರಂಪ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಇನ್ನು ಈ ಫೋನ್ ವೈಶಿಷ್ಟ್ಯತೆ (Feature) ನೋಡುವುದಾದರೆ 6.78 ಇಂಚಿನ AMOLED ಸ್ಕ್ರೀನ್, 1080 x 2460 ಪಿಕ್ಸೆಲ್, ~396 ಪಿಪಿಐ ಹೊಂದಿದೆ. ನ್ಯಾನೋ ಸಿಮ್ + ಇ ಸಿಮ್ ಹಾಕಬಹುದಾಗಿದ್ದು ಅಕ್ಟಾಕೋರ್ ಪ್ರೊಸೆಸರ್‌ನೊಂದಿಗೆ (Octacore processor) ಬಂದಿದೆ.

ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ, 12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್ ಮೂಲಕ ಹೆಚ್ಚುವರಿ ಮೆಮೊರಿ (Additional memory) ವಿಸ್ತರಿಸಬಹುದಾಗಿದೆ.
ಹಿಂದೆ 50 ಎಂಪಿ, 2 ಎಂಪಿ, 2 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ.
ಫೋನಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ (Fingerprint scanner) ಜೊತೆ 5000 mAh ಬ್ಯಾಟರಿಯನ್ನು (Battery) ನೀಡಲಾಗಿದೆ.
ಚಿನ್ನದ ಬಣ್ಣದ ಫೋನ್ (Gold colored phone) ಇದಾಗಿದ್ದು 499 ಡಾಲರ್ (ಅಂದಾಜು 43,000 ರೂ.) ದರವನ್ನು ನಿಗದಿ ಮಾಡಲಾಗಿದೆ.
ಅಂದರೆ ಭಾರತೀಯ ಕರೆನ್ಸಿಯಲ್ಲಿ (Indian currency) ಸರಿಸುಮಾರು 42,911 ರೂಪಾಯಿ.
ಒಂದು ವೇಳೆ ಭಾರತದಲ್ಲಿ ಬಿಡುಗಡೆಯಾದರೆ ಅದರ ಮೇಲೆ ಸುಂಕ ವಿಧಿಸೋದು ಪಕ್ಕಾ ಆಗಿದೆ.
ಭಾರತ ಸರ್ಕಾರ (Government of India) ಈ ಫೋನ್ ಮೇಲೆ 25% ಸುಂಕ ವಿಧಿಸಿದರೆ ಅದರ ಬೆಲೆ ಸುಮಾರು 53,638 ರೂಪಾಯಿ ಆಗಲಿದೆ.
ಶೇಕಡಾ 50 ರಷ್ಟು ತೆರಿಗೆ ವಿಧಿಸಿದರೆ 64,366 ರೂಪಾಯಿಗಳಿಗೆ ಹೆಚ್ಚಳವಾಗಬಹುದು. ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
The Trump Organization ನಲ್ಲಿ ಎರಿಕ್ ಟ್ರಂಪ್ (Eric Trump) ಮತ್ತು ಡೊನಾಲ್ಡ್ ಟ್ರಂಪ್ (Donald Trump) ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ (Executive Vice President).
T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್ ಎಂಬ ಹೆಸರನ್ನು ಇಡಲಾಗಿದೆ.
ಟ್ರಂಪ್ ಮೊಬೈಲ್ ವರ್ಚುವಲ್ ಆಪರೇಟರ್ (Virtual operator) ಆಗಿ ಕೆಲಸ ಮಾಡುತ್ತದೆ.
ಇದನ್ನು ಓದಿ : ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ: ಮಂಗಳೂರು ಮೂಲದ ಕೋ ಪೈಲಟ್ ಸಾ*
ಅಂದರೆ ಇದು ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ (Company) Verizon, AT&T ಮತ್ತು (Trump family enters smartphone) T-Mobile ನಿಯಂತ್ರಿಸುವ ನೆಟ್‌ವರ್ಕ್‌ಗಳ (Network) ಮೂಲಕ ಸೇವೆಗಳನ್ನು ನೀಡುತ್ತದೆ.