- ಕ್ಯೂಬಾ ತೈಲ ವ್ಯವಹಾರಕ್ಕೆ ಅಡ್ಡಿ (Trump pressures Mexico to impose tariffs) ತಂದ ಟ್ರಂಪ್ ಆಡಳಿತ
- ಕ್ಯೂಬಾಗೆ ಕಚ್ಚಾ ತೈಲ ರಫ್ತು ಮಾಡಿದ ದೇಶಗಳಿಗೆ ಆರ್ಥಿಕ ಒತ್ತಡ ತರುವ ಅಮೆರಿಕದ ಹೊಸ ತಂತ್ರ
- ಮೆಕ್ಸಿಕೊ ಸೇರಿ ತೈಲ ಪೂರೈಸುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕದ ಭೀತಿ
Washington:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯೂಬಾಗೆ ಕಚ್ಚಾ (Trump pressures Mexico to impose tariffs) ತೈಲವನ್ನು ಮಾರಾಟ ಮಾಡುವ ಅಥವಾ ಸರಬರಾಜು ಮಾಡುವ ಯಾವುದೇ ದೇಶದ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಈ ಕ್ರಮವು ಕ್ಯೂಬಾ ವಿರುದ್ಧ ಅಮೆರಿಕದ ಕಠಿಣ ವಿದೇಶಾಂಗ ನೀತಿಯ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿ ಪರಿಗಣಿಸಲಾಗುತ್ತಿದೆ. ವಿಶೇಷವಾಗಿ ಲ್ಯಾಟಿನ್ (Latin) ಅಮೆರಿಕ ಪ್ರದೇಶದಲ್ಲಿ ಅಮೆರಿಕ ತನ್ನ ಪ್ರಭಾವವನ್ನು ಬಲಪಡಿಸಲು ಈ ನಿರ್ಧಾರ ಕೈಗೊಂಡಿದೆ ಎಂಬ ಅಭಿಪ್ರಾಯ ರಾಜಕೀಯ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ದ್ವೀಪ ರಾಷ್ಟ್ರವಾದ ಕ್ಯೂಬಾವನ್ನು ಅಮೆರಿಕ ತನ್ನ ರಾಷ್ಟ್ರೀಯ ಭದ್ರತೆಗೆ (Trump pressures Mexico to impose tariffs) ಅಪಾಯವೆಂದು ಪರಿಗಣಿಸುವ ನಿಲುವು ಮುಂದುವರಿದಿರುವುದೇ ಈ ಆದೇಶದ ಹಿನ್ನೆಲೆ ಎಂದು ಹೇಳಲಾಗುತ್ತಿದೆ.
ಈ ಹೊಸ ಸುಂಕ ನೀತಿಯ ಪ್ರಮುಖ ಗುರಿ ಮೆಕ್ಸಿಕೊ ಆಗಿದೆ. ಕಳೆದ ಹಲವು ವರ್ಷಗಳಿಂದ ಕ್ಯೂಬಾಗೆ ಕಚ್ಚಾ ತೈಲ ಪೂರೈಸುವ ಪ್ರಮುಖ ದೇಶಗಳಲ್ಲಿ ಮೆಕ್ಸಿಕೊ ಪ್ರಮುಖ ಸ್ಥಾನದಲ್ಲಿದೆ.
ಮೆಕ್ಸಿಕೊ ಸರ್ಕಾರದ ಸ್ವಾಮ್ಯದ ತೈಲ ಕಂಪನಿಯಾದ ಪೆಮೆಕ್ಸ್ (PEMEX) ಮೂಲಕ ಕ್ಯೂಬಾಗೆ ತೈಲ ರಫ್ತು ನಡೆಯುತ್ತಿತ್ತು.
2025ರ ಜನವರಿಯಿಂದ ಸೆಪ್ಟೆಂಬರ್ ವರೆಗೆ ಕ್ಯೂಬಾಗೆ ದಿನಕ್ಕೆ ಸರಾಸರಿ ಸುಮಾರು 20,000 ಬ್ಯಾರೆಲ್ ತೈಲವನ್ನು ಮೆಕ್ಸಿಕೊ ರಫ್ತು ಮಾಡಿದೆ ಎಂಬ ಮಾಹಿತಿ ಅಧಿಕೃತ ವರದಿಗಳಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆ, ಮೆಕ್ಸಿಕೊ ಮೇಲೆ ಆರ್ಥಿಕ ಒತ್ತಡ ತರುವ ಉದ್ದೇಶದಿಂದಲೇ ಟ್ರಂಪ್ ಆಡಳಿತ ಈ ಸುಂಕ ಕ್ರಮವನ್ನು ಜಾರಿಗೆ ತಂದಿದೆ ಎನ್ನಲಾಗುತ್ತಿದೆ.
ಇದೆಲ್ಲದರ ನಡುವೆಯೇ ಮೆಕ್ಸಿಕೊ ಅಧ್ಯಕ್ಷೆ ಕ್ಲೌಡಿಯಾ ಶೈನ್‌ಬಾಮ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಕ್ಯೂಬಾಗೆ ತೈಲ ರವಾನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬುದನ್ನು ಅವರು ದೃಢಪಡಿಸಿದರೂ, ಇದು ಅಮೆರಿಕದ ಒತ್ತಡದಿಂದಾಗಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಮೆಕ್ಸಿಕೊದ ಸಾರ್ವಭೌಮ ಹಾಗೂ ಸ್ವತಂತ್ರ ನಿರ್ಧಾರವಾಗಿದ್ದು, ಕಾರ್ಯಾಚರಣಾ ಮತ್ತು ಮಾರುಕಟ್ಟೆ ಸಂಬಂಧಿತ ಅಂಶಗಳ ಆಧಾರದಲ್ಲಿ ತೈಲ ಪೂರೈಕೆ ಏರಿಳಿತಗಳನ್ನು ಕಾಣುವುದು ಸಹಜ ಪ್ರಕ್ರಿಯೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಕ್ರಮಕ್ಕೆ ಮೆಕ್ಸಿಕೊ ಮಣಿದಿದೆ ಎಂಬ ಆರೋಪಗಳನ್ನು ಅವರು ತಳ್ಳಿ ಹಾಕಿದ್ದು, ತಮ್ಮ ದೇಶದ ಸ್ವಾತಂತ್ರ್ಯ ಮತ್ತು ನೀತಿ ನಿರ್ಧಾರಗಳ ಮೇಲೆ ಯಾವುದೇ ವಿದೇಶಿ ಪ್ರಭಾವ ಇಲ್ಲ ಎಂದು ಒತ್ತಿ ಹೇಳಿದ್ದಾರೆ.
ಟ್ರಂಪ್ ಆಡಳಿತದ ದೃಷ್ಟಿಯಲ್ಲಿ ಕ್ಯೂಬಾ ಸರ್ಕಾರವು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ‘ಅಸಾಧಾರಣ ಮತ್ತು ಗಂಭೀರ ಬೆದರಿಕೆ’ಯಾಗಿದೆ.
ಈ ಕಾರಣದಿಂದಲೇ ಕ್ಯೂಬಾವನ್ನು ಆರ್ಥಿಕವಾಗಿ ಇನ್ನಷ್ಟು ಪ್ರತ್ಯೇಕಿಸುವ ಉದ್ದೇಶದಿಂದ ಈ ರೀತಿಯ ಸುಂಕ ಮತ್ತು ನಿರ್ಬಂಧ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ.
ಕ್ಯೂಬಾಗೆ ತೈಲ ಪೂರೈಕೆ ಮಾಡುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವ ಮೂಲಕ, ಆ ದೇಶಗಳನ್ನು ಕ್ಯೂಬಾ ಪರ ನಿಲ್ಲದಂತೆ ತಡೆಯುವುದು ಮತ್ತು ಅಮೆರಿಕದ ಭೌಗೋಳಿಕ ರಾಜಕೀಯ ನಿಲುವಿಗೆ ಒಪ್ಪಿಸುವುದು ಈ ತಂತ್ರದ ಭಾಗವಾಗಿದೆ ಎನ್ನಲಾಗುತ್ತಿದೆ.
ಲ್ಯಾಟಿನ್ ಅಮೆರಿಕದ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನೂ ಈ ಕ್ರಮ ಹೊಂದಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಒಟ್ಟಾರೆ, ಟ್ರಂಪ್ ಅವರ ಈ ನಿರ್ಧಾರವು ಅಮೆರಿಕ–ಕ್ಯೂಬಾ ಸಂಬಂಧಗಳಲ್ಲಿ ಮತ್ತಷ್ಟು ತೀಕ್ಷ್ಣತೆ ತರುವ ಸಾಧ್ಯತೆಯಿದೆ. ಜೊತೆಗೆ, ಮೆಕ್ಸಿಕೊ–ಅಮೆರಿಕ ನಡುವಿನ ರಾಜತಾಂತ್ರಿಕ ಹಾಗೂ ವ್ಯಾಪಾರ ಸಂಬಂಧಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ತೈಲ ಪೂರೈಕೆ, ಸುಂಕ, ರಾಷ್ಟ್ರೀಯ ಭದ್ರತೆ ಎಂಬ ಅಂಶಗಳು ಸೇರಿ ಈ ವಿಚಾರವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಇತರೆ ರಾಷ್ಟ್ರಗಳು ಈ ವಿಷಯದಲ್ಲಿ ಯಾವ ನಿಲುವು ತಾಳುತ್ತವೆ ಎಂಬುದು ಕುತೂಹಲಕಾರಿ ವಿಷಯವಾಗಿದ್ದು, ಅಮೆರಿಕದ ವಿದೇಶಾಂಗ ನೀತಿಯ ದಿಕ್ಕು ಯಾವತ್ತಿಗೆ ಸಾಗುತ್ತದೆ ಎಂಬುದನ್ನು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ.
ಇದನ್ನು ಓದಿ:https://vijayatimes.com/ramalinga-reddy-challenge-mohandas-pai/