Washington: ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ (Republican Party) ಡೊನಾಲ್ಡ್ ಟ್ರಂಪ್ (Donald Trump) ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರವಾಗಿರುವ ಅಮೆರಿಕದ ಚುಕ್ಕಾಣಿಯನ್ನು ಎರಡನೇ ಬಾರಿಗೆ ಹಿಡಿಯುವ ಮೂಲಕ ಇತಿಹಾಸ ನಿರ್ಮಿಸಿದರು.ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹಲವು ಘೋಷಣೆಗಳನ್ನು ಮಾಡಿದರು.ಇಂದಿನಿಂದ ನಮ್ಮ ದೇಶವು ಬಲಿಷ್ಠವಾಗಲಿದೆಯಲ್ಲದೆ, ವಿಶ್ವದಾದ್ಯಂತ ತನ್ನ ಗೌರವವನ್ನು ಮರಳಿ ಪಡೆಯಲಿದೆ. ಪ್ರತಿ ರಾಷ್ಟ್ರವೂ ಅಸೂಯೆಪಡುವ ರೀತಿಯಲ್ಲಿ ನಾವು ಬೆಳವಣಿಗೆ ಸಾಧಿಸಲಿದ್ದೇವೆ’ ಎಂದು ಹೇಳಿದರು. ಅಮೆರಿಕವು ಯಾರಿಗೂ ಮಣಿಯದು ಅಥವಾ ಹೆದರದು. ನಾವು ಎಂದಿಗೂ ವಿಫಲರಾಗುವುದಿಲ್ಲ. ಅಮೆರಿಕವು ಇಂದಿನಿಂದ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ. ಭವಿಷ್ಯವು ನಮ್ಮದಾಗಲಿದೆ’ ಎಂದು ಘೋಷಿಸಿದ್ದಾರೆ.

ವಲಸೆ:ಅಮೆರಿಕ ವಲಸೆ ಮತ್ತು ಪೌರತ್ವವನ್ನು ಹೇಗೆ ಮರು ವಿನ್ಯಾಸ ಮಾಡಲಿದೆ ಎಂಬ ಗುರಿಯ ಹಲವು ಆದೇಶಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತನ್ನು ಘೋಷಣೆ ಮಾಡಿದರು. ವಿದೇಶಿ ಅಪರಾಧಿಗಳು (Foreign criminals) ಎಂದು ಕರೆಯುವ ಮೂಲಕ ಸಾಮೂಹಿಕ ಗಡೀಪಾರು ಕಾರ್ಯಾಚರಣೆಗೆ ಭರವಸೆ ನೀಡಿದ್ದಾರೆ.
ಜನನ ಪೌರತ್ವ ರದ್ದು: ಜನ್ಮ ಪೌರತ್ವ ಹಕ್ಕನ್ನು (Right to birth citizenship) ರದ್ದುಗೊಳಿಸುವ ಆದೇಶಕ್ಕೂ ಕೂಡ ಅವರು ಸಹಿ ಹಾಕಿದರು. ಅಮೆರಿಕ ಪೌರತ್ವಕ್ಕಾಗಿ ಅಲ್ಲಿ ಜನಿಸಿದ ಮಕ್ಕಳಿಗೆ ಹಕ್ಕು ನೀಡುವ ಈ ಪೌರತ್ವವನ್ನು ಟ್ರಂಪ್ ರದ್ದು ಮಾಡಿದ್ದು, ಈ ಕ್ರಮವು ಇದೀಗ ಕಾನೂನು ಸವಾಲನ್ನು ಎದುರಿಸಲಿದೆ.
ಜನವರಿ 6ರ ದಂಗೆ : 2020ರ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ 2021ರ ಜನವರಿ 6ರ ದಾಳಿಯಲ್ಲಿ ಭಾಗಿಯಾಗಿದ್ದ 1,500 ಮಂದಿಗೆ ಟ್ರಂಪ್ ಸಹಿ ಹಾಕಿದರು. ಈ ವೇಳೆ ಗಲಭೆಯಲ್ಲಿ ತಪ್ಪೊಪ್ಪಿಕೊಂಡವರನ್ನು ತಮ್ಮ ಒತ್ತೆಯಾಳುಗಳು ಎಂದು ಒಪ್ಪಿಕೊಂಡರು.
ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ : ಸಂಸ್ಕೃತಿ ಮೇಲಿನ ದಾಳಿಗೆ ಕಾರಣವಾಗುವ ಅನೇಕ ವೈವಿಧ್ಯತೆಯ ಕಾರ್ಯಕ್ರಮ ಮತ್ತು ಎಲ್ಜಿಬಿಟಿಕ್ಯೂ ಸಮಾನತೆಯನ್ನು ಅವರು ರದ್ದು ಮಾಡಿದರು. ಸರ್ಕಾರ, ವ್ಯವಹಾರಗಳು ಮತ್ತು ಆರೋಗ್ಯ ರಕ್ಷಣೆಯಲ್ಲಿ ವೈವಿಧ್ಯತೆ ಮತ್ತು ಸಮಾನತೆಯನ್ನು ಉತ್ತೇಜಿಸುವ ತೀರ್ಪು ಹಾಗೇ ಅವರು, ಎಲ್ಜಿಬಿಟಿಕ್ಯೂ (LGBTQ) ಅಮೆರಿಕನ್ನರ ಹಕ್ಕನ್ನು ರದ್ದುಗೊಳಿಸಿದರು. ಇದೇ ವೇಳೆ ಅವರು ಅಮೆರಿಕದಲ್ಲಿರುವುದು ಕೇವಲ ಎರಡು ಲಿಂಗ ಅದು ಗಂಡು ಮತ್ತು ಹೆಣ್ಣು ಎಂದರು.
ಪ್ಯಾರಿಸ್ ಹವಾಮಾನ ಒಪ್ಪಂದ (Paris Climate Agreement): ಪ್ಯಾರಿಸ್ ಒಪ್ಪಂದದಿಂದ (Paris Agreement) ತಕ್ಷಣವೇ ಅಮೆರಿಕವನ್ನು ಹಿಂಪಡೆಯುವ ಮೂಲಕ ಮೊದಲ ಆಡಳಿತ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮರುಕಳಿಸಿದರು. ಜಾಗತಿಕವಾಗಿ ತಾಪಮಾನ ವಿರುದ್ಧ ಒಟ್ಟಾರೆ ಹೋರಾಟದ ನಿರ್ಧಾರದಿಂದ ಟ್ರಂಪ್ ಹಿಂದೆ ಸರಿದರು.
ತೈಲ ಕೊರೆಯುವಿಕೆ: ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿ ವಿಶ್ವದ ಪ್ರಮುಖ ತೈಲ ಮತ್ತು ಗ್ಯಾಸ್ ಉತ್ಪಾದನೆ ವಿಸ್ತರಣೆ ಗುರಿಯೊಂದಿಗೆ ಆದೇಶಕ್ಕೆ ಸಹಿ ಹಾಕಿದರು.
ಮನೆಯಿಂದ ಕೆಲಸ ರದ್ದು : ಫೆಡರಲ್ ಉದ್ಯೋಗಿಗಳು ಸಂಪೂರ್ಣವಾಗಿ ಕಚೇರಿಗೆ ಬಂದು ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಮಾಡಿದರು ಹಾಗೇ ಕೋವಿಡ್ 19 ಸಾಂಕ್ರಾಮಿಕ ವೇಳೆ ನೀಡಿದ ವರ್ಕ್ ಫ್ರಂ ಹೋಮ್ (Work from home) ಭತ್ಯೆಗಳನ್ನು ತೆಗೆದು ಹಾಕಿದರು.
ಡಬ್ಲ್ಯೂಎಚ್ಒದಿಂದ (WHO) ಹೊರಗೆ : ವಿಶ್ವ ಆರೋಗ್ಯ ಸಂಸ್ಥೆಯಿಂದ (World Health Organization) ಹೊರ ನಡೆಯುವ ನಿರ್ಧಾರಕ್ಕೆ ಕೂಡ ಟ್ರಂಪ್ ಸಹಿ ಹಾಕಿದರು. ಇದು ಅಮೆರಿಕಕ್ಕೆ ಪಕ್ಷಪಾತ ಮಾಡುತ್ತಿದ್ದು, ಚೀನಾಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಟಿಕ್ಟಾಕ್ (Tiktok): ಟಿಕ್ ಟಾಕ್ ಮೇಲೆ ಇದ್ದ ನಿಷೇಧವನ್ನು ಟ್ರಂಪ್ ಹಿಂಪಡೆದಿದ್ದಾರೆ. ಈ ವಾರದಿಂದ ಈ ಕಾಯ್ದೆ ಜಾರಿಯಾಗಲಿದೆ ಎಂದರು. ಇದೇ ವೇಳೆ ಟ್ರಂಪ್ ಚೀನಿ ಮಾತೃ ಸಂಸ್ಥೆಯ ಟಿಕ್ ಟಾಕ್ ಆ್ಯಪ್ ಅಮೆರಿಕಕ್ಕೆ 50ರಷ್ಟು ಷೇರು ಮಾರಾಟ ಮಾಡಲು ಒಪ್ಪಿಗೆ ನೀಡಬೇಕು ಎಂದರು.
ವೆಸ್ಟ್ ಬ್ಯಾಂಕ್ ಸೆಟಲ್ಮೆಂಟ್ (West Bank Settlement): ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿ ವಸಾಹತುಗಾರರ ವಿರುದ್ಧದ ನಿರ್ಬಂಧಗಳನ್ನು ಟ್ರಂಪ್ ಹಿಂತೆಗೆದುಕೊಂಡರು. ಜೋ ಬೈಡನ್ (Joe Biden) ಆಡಳಿತದಲ್ಲಿ ನಡೆಸಿದ ಕಾರ್ಯವನ್ನು ರದ್ದುಗೊಳಿಸಿದರು.
ಕ್ಯೂಬಾ (Cuba): ಭಯೋತ್ಪಾದಕರ ಕಪ್ಪು ಪಟ್ಟಿಯಿಂದ ಕ್ಯೂಬಾವನ್ನು (Cuba) ಟ್ರಂಪ್ ತೆಗೆದುಹಾಕಿದ್ದಾರೆ.