• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
0
SHARES
18
VIEWS
Share on FacebookShare on Twitter
  • ಗ್ರೀನ್‌ಲ್ಯಾಂಡ್ ವಿಚಾರವಾಗಿ (Trump U turn on Greenland issue) ಉಂಟಾಗಿದ್ದ ಉದ್ವಿಗ್ನತೆ ಶಮನ
  • ಅಮೆರಿಕ-ಯುರೋಪ್ ಸಂಬಂಧದಲ್ಲಿ ಹೊಸ ಚೌಕಟ್ಟು ರೂಪಿಸುವ ಯತ್ನ
  • ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಸುಂಕ ಹೇರದಿರಲು ನಿರ್ಧಾರ

Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಇತ್ತೀಚಿನ ನಿಲುವುಗಳು (Trump U turn on Greenland issue) ಜಾಗತಿಕ ರಾಜಕೀಯ ವಲಯದಲ್ಲಿ ಗೊಂದಲ ಮತ್ತು ಕುತೂಹಲವನ್ನು ಸೃಷ್ಟಿಸುತ್ತಿವೆ.

ಗ್ರೀನ್‌ಲ್ಯಾಂಡ್ (Greenland) ಮೇಲಿನ ಅಮೆರಿಕ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸುವುದಾಗಿ ಅವರು ಘೋಷಿಸಿದ್ದ ಬೆದರಿಕೆ ಇದೀಗ ಅಚಾನಕ್ ಹಿಂಪಡೆಯಲಾಗಿದೆ.

ಈ ದಿಢೀರ್ ಯೂ-ಟರ್ನ್‌ (U-Turn) ಮೂಲಕ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಭಾರೀ ಮಟ್ಟದಲ್ಲಿ (Trump U turn on Greenland issue) ಉಂಟಾಗಬಹುದಾಗಿದ್ದ ವ್ಯಾಪಾರ ಸಮರಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ. ಟ್ರಂಪ್ ಅವರ ನಿರ್ಧಾರವು ಮಿತ್ರ ರಾಷ್ಟ್ರಗಳ ನಡುವೆ ಮತ್ತೆ ಸಂಧಾನದ ಹಾದಿ ತೆರೆದಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಸಭೆಯ ಸಂದರ್ಭದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.

ಗ್ರೀನ್‌ಲ್ಯಾಂಡ್ ವಿಚಾರವಾಗಿ ಉಂಟಾಗಿದ್ದ ರಾಜತಾಂತ್ರಿಕ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಮತ್ತು ನಾಟೋ ಮಿತ್ರ ರಾಷ್ಟ್ರಗಳು ಹೊಸ ‘ಫ್ರೇಮ್‌ವರ್ಕ್’ ಅಡಿಯಲ್ಲಿ ಮಾತುಕತೆ ನಡೆಸಲು ಒಪ್ಪಿಕೊಂಡಿವೆ.

ಆರ್ಕ್ಟಿಕ್ ಪ್ರದೇಶದ ಭದ್ರತೆ, ರಷ್ಯಾ (Russia) ಮತ್ತು ಚೀನಾದ ಹೆಚ್ಚುತ್ತಿರುವ ಪ್ರಭಾವ, ಹಾಗೂ ನಾಟೋ ಸಹಕಾರದ ಬಲವರ್ಧನೆ—ಈ ಎಲ್ಲ ಅಂಶಗಳು ಚರ್ಚೆಯ ಕೇಂದ್ರಬಿಂದುವಾಗಿವೆ.

ಟ್ರಂಪ್ ಅವರ ಪ್ರಕಾರ, ಗ್ರೀನ್‌ಲ್ಯಾಂಡ್ (Greenland) ಅಮೆರಿಕದ ಭದ್ರತೆಗೆ ಅತ್ಯಂತ ತಂತ್ರಪ್ರಧಾನ ಪ್ರದೇಶವಾಗಿದ್ದು, ಈ ವಿಚಾರದಲ್ಲಿ ನಾಟೋ ಜೊತೆ ಸಮನ್ವಯ ಅತ್ಯಗತ್ಯವಾಗಿದೆ.

ಈ ನಡುವೆ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (Scott Besant) ಅವರ ಪಾತ್ರವೂ ನಿರ್ಣಾಯಕವಾಗಿದೆ. ಯುರೋಪಿಯನ್ ರಾಷ್ಟ್ರಗಳೊಂದಿಗೆ

ನಡೆದ ಮಾತುಕತೆಗಳಲ್ಲಿ ಅವರು ಟ್ರಂಪ್ ಅವರನ್ನು ಮನವೊಲಿಸಿ, ಸುಂಕ ಹೇರಿಕೆ ನಿರ್ಧಾರವನ್ನು ಸದ್ಯಕ್ಕೆ ಜಾರಿಗೆ ತರದಂತೆ ಮಾಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ಗ್ರೀನ್‌ಲ್ಯಾಂಡ್ ಸಂಬಂಧಿತವಾಗಿ ‘ಗೋಲ್ಡನ್ ಡೋಮ್’ (Golden Dome) ಕ್ಷಿಪಣಿ ರಕ್ಷಣಾ ಯೋಜನೆ ಸೇರಿದಂತೆ ಹಲವು ಭದ್ರತಾ ವಿಷಯಗಳ ಕುರಿತು ಮುಂದಿನ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಇದರಿಂದ ವ್ಯಾಪಾರಕ್ಕಿಂತ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ತಂತ್ರಕ್ಕೆ ಟ್ರಂಪ್ ತಿರುಗಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಆದರೆ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣವಾಗಿ ವಿವಾದ ಮುಕ್ತವಾಗಿಲ್ಲ. ದಾವೋಸ್‌ನಲ್ಲಿ ಸುಮಾರು 70 ನಿಮಿಷಗಳ ಭಾಷಣದಲ್ಲಿ ಅವರು

ನಾಟೋ ಮಿತ್ರ ರಾಷ್ಟ್ರಗಳ ವಿರುದ್ಧ ತೀವ್ರ ಟೀಕೆ ನಡೆಸಿದರು.

ಪರಿಸರ ನೀತಿ, ವಲಸೆ ಸಮಸ್ಯೆ ಹಾಗೂ ವ್ಯಾಪಾರ ಸಮತೋಲನದ ವಿಚಾರದಲ್ಲಿ ಯುರೋಪ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಗ್ರೀನ್‌ಲ್ಯಾಂಡ್ ಕುರಿತು ಮಾತನಾಡಿದ ಟ್ರಂಪ್, “ನಾನು ಬಲಪ್ರಯೋಗದಿಂದ ಗ್ರೀನ್‌ಲ್ಯಾಂಡ್ ಪಡೆಯುವುದಿಲ್ಲ” ಎಂದು ಸ್ಪಷ್ಟಪಡಿಸಿದರೂ, ಅದನ್ನು ಅಮೆರಿಕ ಮಾತ್ರ ರಕ್ಷಿಸಬಲ್ಲದು ಎಂಬ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಯಿತು.

ಡೆನ್ಮಾರ್ಕ್‌ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ವಹಿಸಬೇಕು ಎಂಬ ಅವರ ಮಾತುಗಳು ಮಿತ್ರ ರಾಷ್ಟ್ರಗಳ ನಡುವೆ ಅಸಮಾಧಾನವನ್ನುಂಟುಮಾಡಿವೆ.

ಡೆನ್ಮಾರ್ಕ್ ವಿದೇಶಾಂಗ ಸಚಿವ ಲಾರ್ಸ್ ಲೋಕ್ಕ ರಾಸ್ಮುಸನ್ (Lars Lokka Rasmussen) ಅವರು ಈ ಬೆಳವಣಿಗೆಗೆ ಪ್ರತಿಕ್ರಿಯಿಸಿ, ಬಲಪ್ರಯೋಗದ ಮಾತನ್ನು ಕೈಬಿಟ್ಟಿರುವುದನ್ನು ಸ್ವಾಗತಿಸಿದರು.

ಜೊತೆಗೆ ಯುರೋಪ್ ವಿರುದ್ಧದ ವ್ಯಾಪಾರ ಯುದ್ಧಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿರುವುದು ಸಕಾರಾತ್ಮಕ ಹೆಜ್ಜೆ ಎಂದು ಹೇಳಿದರು.

ಆದರೆ ಗ್ರೀನ್‌ಲ್ಯಾಂಡ್‌ನಲ್ಲಿ ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ. ಅಲ್ಲಿನ ಸರ್ಕಾರ ನಾಗರಿಕರಿಗೆ ಐದು ದಿನಗಳ ತುರ್ತು ಪರಿಸ್ಥಿತಿಗೆ ತಯಾರಾಗುವಂತೆ ಸೂಚಿಸಿದ್ದು,

ಆಹಾರ, ನೀರು ಮತ್ತು ಇಂಧನ ಸಂಗ್ರಹಿಸಲು ಎಚ್ಚರಿಕೆ ನೀಡಿದೆ.

ಇದರಿಂದ ರಾಜಧಾನಿ ನೂಕ್‌ನಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದು, ಜಾಗತಿಕ ರಾಜಕೀಯ ನಿರ್ಧಾರಗಳು ಸ್ಥಳೀಯ ಜನಜೀವನದ

ಮೇಲೂ ಹೇಗೆ ಪ್ರಭಾವ ಬೀರುತ್ತವೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.

ಇದನ್ನು ಓದಿ : https://vijayatimes.com/namma-metro-phase-3a-project/

Tags: amerciaDonaldTrumpexportGreenlandtarifftax

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.