- ಇರಾನ್‌ಗೆ ಹೊಸ (Trump warning to new iran leader) ಸುಪ್ರೀಂ ಲೀಡರ್: ಅಲಿ ಮೊಜ್ತಬಾ ಅಧಿಕಾರಕ್ಕೆ
- ಹೊಸ ಸುಪ್ರೀಂ ಲೀಡರ್ ಆಯ್ಕೆಯ ಬೆನ್ನಲ್ಲೇ ಟ್ರಂಪ್‌ನ ತೀವ್ರ ಎಚ್ಚರಿಕೆ
- ಮೊಜ್ತಬಾ ಆಯ್ಕೆ ಘೋಷಣೆ; ಅಮೆರಿಕಾ-ಇಸ್ರೇಲ್ ವಿರುದ್ಧ ಉದ್ವಿಗ್ನ ಪರಿಸ್ಥಿತಿ
ಇರಾನ್ ಮತ್ತು ಅಮೆರಿಕಾ-ಇಸ್ರೇಲ್ ನಡುವಿನ ಉದ್ವಿಗ್ನತೆ ದಿನೇ ದಿನೇ (Trump warning to new iran leader) ಹೆಚ್ಚುತ್ತಿರುವ ನಡುವೆಯೇ, ಇರಾನ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ.
ಇತ್ತೀಚೆಗೆ ನಡೆದ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಹತ್ಯೆಯಾದ ಬಳಿಕ, ಅವರ ಪುತ್ರ ಅಯತೊಲ್ಲಾ ಅಲಿ ಮೊಜ್ತಬಾ (Ayatollah Ali Mojtaba) ಅವರನ್ನು ಹೊಸ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಲಾಗಿದೆ. ಕಳೆದ ವಾರವೇ ಈ ನಿರ್ಧಾರ ಕೈಗೊಳ್ಳಲಾಗಿದ್ದರೂ, ಅದರ ಅಧಿಕೃತ ಘೋಷಣೆ ಭಾನುವಾರ ಹೊರಬಂದಿದೆ.

ಇರಾನ್‌ನ ಉನ್ನತ ಧಾರ್ಮಿಕ ಹಾಗೂ ರಾಜಕೀಯ ನಾಯಕರ ಒಮ್ಮತದೊಂದಿಗೆ ಮೊಜ್ತಬಾ ಅವರನ್ನು ದೇಶದ ಅತ್ಯುನ್ನತ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಈ ಬೆಳವಣಿಗೆಗೆ ತಕ್ಷಣ ಪ್ರತಿಕ್ರಿಯಿಸಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕಠಿಣ ಎಚ್ಚರಿಕೆ ನೀಡಿದರು.
“ಇರಾನ್‌ನಲ್ಲಿ ಯಾರೇ ಸುಪ್ರೀಂ ಲೀಡರ್ ಆಗಿ ಆಯ್ಕೆಯಾಗಲಿ, ಅವರು ಅಮೆರಿಕದ ಅನುಮೋದನೆ (Trump warning to new iran leader) ಇಲ್ಲದೆ ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಅನುಮತಿ ಪಡೆಯದ ನಾಯಕ ಹೆಚ್ಚು ದಿನ ಉಳಿಯಲಾರ” ಎಂದು ಟ್ರಂಪ್ ಹೇಳಿದ್ದಾರೆ.
ಮೊಜ್ತಬಾ ಅವರನ್ನು ಹೊಸ ನಾಯಕನಾಗಿ ಘೋಷಿಸಿದ ಬೆನ್ನಲ್ಲೇ ಈ ಎಚ್ಚರಿಕೆ ನೀಡಿರುವುದು ಜಾಗತಿಕ ರಾಜಕೀಯದಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದೆ.
ಇದರ ನಡುವೆ ಇರಾನ್-ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದ ಭಾಗವಾಗಿ ಇರಾನ್‌ನ ಪ್ರಮುಖ ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ನಡೆದಿರುವ ವರದಿಗಳು ಹೊರಬಿದ್ದಿವೆ. ಸಹರಾನ್ ಪ್ರದೇಶದ ಸಮೀಪದಲ್ಲಿರುವ ತೈಲ ಡಿಪೋ ಮೇಲೆ ಬಾಂಬ್ ದಾಳಿ ನಡೆದಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಈ ದಾಳಿಯಿಂದ ತೈಲ ಸೋರಿಕೆಯಾಗಿದ್ದು ರಸ್ತೆಗಳಲ್ಲಿ ಹರಿದ ತೈಲಕ್ಕೆ ಬೆಂಕಿ ತಗುಲಿ ಭೀಕರ ದೃಶ್ಯಗಳು ಕಂಡುಬಂದಿವೆ. ಇರಾನ್ ರಾಜಧಾನಿ ಟೆಹ್ರಾನ್‌ನ (Tehran)
ನಾಲ್ಕು ಪ್ರಮುಖ ತೈಲ ಸಂಗ್ರಹಾಗಾರಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗಳ ಪರಿಣಾಮವಾಗಿ ಟೆಹ್ರಾನ್ ನಗರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ರಾತ್ರಿಯಲ್ಲೇ ಹಗಲಿನಂತೆ ಬೆಳಕು ಕಾಣುವಷ್ಟು ಇಂಧನ ಸುಡುತ್ತಿರುವ ದೃಶ್ಯಗಳು ವರದಿಯಾಗಿವೆ.
ತೈಲ ರಫ್ತು ಇರಾನ್ ದೇಶದ ಪ್ರಮುಖ ಆದಾಯ ಮೂಲವಾಗಿರುವುದರಿಂದ, ಈ ದಾಳಿಯಿಂದ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾ ಮತ್ತು ಇಸ್ರೇಲ್ ಈ ದಾಳಿಗಳ ಮೂಲಕ ಇರಾನ್‌ನ ಆರ್ಥಿಕ ಶಕ್ತಿಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇಷ್ಟಕ್ಕೂ ದಾಳಿ ತಣ್ಣಗಾಗದೇ ಇನ್ನಷ್ಟು ತೀವ್ರಗೊಂಡಿದೆ. ತೈಲ ಸಂಗ್ರಹಾಗಾರಗಳ ಬಳಿಕ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹಾರ್ಮುಜ್ ಜಲಸಂಧಿಯ ಸಮೀಪದ ಕೀಸಂ ದ್ವೀಪದಲ್ಲಿರುವ ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ ನಡೆದ ಪರಿಣಾಮ ಸುಮಾರು 30 ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ ಎಂದು ವರದಿಯಾಗಿದೆ.
ಆದರೆ ಅಮೆರಿಕಾ ಮತ್ತು ಇಸ್ರೇಲ್ ಈ ಆರೋಪಗಳನ್ನು ತಳ್ಳಿಹಾಕುತ್ತಿದ್ದು, ಉಪ್ಪು ನೀರನ್ನು ಶುದ್ಧೀಕರಿಸುವ ಘಟಕಗಳ ಮೇಲೆ ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿವೆ. ಆದರೂ ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.
ಇದನ್ನು ಓದಿ : https://vijayatimes.com/kmf-new-qr-code-on-products/