ಅಮೇರಿಕಾ ಸಂಸತ್ತು ಜಂಟಿ ಅಧಿವೇಶನ
ಹೆಚ್ಚು ಸುಂಕ ವಿಧಿಸುವ ನಿರ್ಧಾರಕ್ಕೆ ಟ್ರಂಪ್
ಇತರೆ ದೇಶಗಳಿಂದ ಅಮೇರಿಕಕ್ಕೆ ಅನ್ಯಾಯ
ಏ.2 ರಿಂದ ಪ್ರತಿಸುಂಕ ವಿಧಿಸುವ ಘೋಷಣೆ (Trump’s decision to impose tariffs)
ಭಾರತ ,ಚೀನಾ ಸೇರಿದಂತೆ ಇತರೆ ರಾಷ್ಟ್ರಗಳು ಅಮೇರಿಕಾದಿಂದ ಹೆಚ್ಚು ಸುಂಕ ವಸೂಲಾತಿ (Collection of duty) ಮಾಡುತ್ತಿವೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ನೆರೆ ರಾಷ್ಟ್ರಗಳಿಗೆ ಅಧಿಕ ಸುಂಕ ವಿಧಿಸಲು ನಿರ್ಧಾರ ಮಾಡಿದ್ದಾರೆ.ಅಮೇರಿಕಾ ಸಂಸತ್ತು ಅಧೀವೇಶನದಲ್ಲಿ (Parliament session) ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು, ಏ 2 ರಿಂದ ಸುಂಕ ವಿಧಿಸುವ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
“ಯುರೋಪಿಯನ್ ಯೂನಿಯನ್, ಚೀನಾ, ಬ್ರೆಝಿಲ್, ಭಾರತ, ಮೆಕ್ಸಿಕೋ ಮತ್ತು ಕೆನಡಾ (Mexico and Canada) ಸೇರಿದಂತೆ ಹಲವು ದೇಶಗಳು ನಾವು ಅವುಗಳ ಸರಕುಗಳಿಗೆ ವಿಧಿಸಿದ್ದಕಿಂತ ಭಾರೀ ಪ್ರಮಾಣದ ಸುಂಕವನ್ನು ನಮ್ಮ ಸರಕುಗಳ ಮೇಲೆ ವಿಧಿಸುತ್ತಿದೆ. ದಶಕಗಳಿಂದ ಇದು ನಡೆಯುತ್ತಿದೆ. ಈಗ ನಮ್ಮ ಸರದಿ ನಾವೂ ಪ್ರತಿಸುಂಕ ವಿಧಿಸುತ್ತೇವೆ” ಎಂದು ಟ್ರಂಪ್ ಹೇಳಿದ್ದಾರೆ.
ಇತರೆ ದೇಶಗಳು ನಮ್ಮ ಮೇಲೆ ದಶಕಗಳಿಂದ ಸುಂಕ ಹಾಕುತ್ತಿವೆ.ಈಗ ನಮ್ಮ ಸರದಿ ಬಂದಿದೆ,ನಾವು ಅವರಿಗೆ ವಿಧಿಸುವ ತೆರಿಗೆಗಿಂತ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಹಲವು ದೇಶಗಳು ತೆಗೆದುಕೊಳ್ಳುತಿವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ಸುಂಕ ಏಪ್ರಿಲ್ 2 ರಂದು ಜಾರಿಗೆ ಬರಲಿದ್ದು, ಅಮೆರಿಕದ ಉತ್ಪನ್ನಗಳ ಮೇಲೆ ಸುಂಕದಷ್ಟೇ ವಿದೇಶಿ ರಾಷ್ಟ್ರಗಳ (Foreign countries) ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುವುದು.ಭಾರತವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ ಟ್ರಂಪ್ “ಭಾರತ (India) ನಮ್ಮ ಮೇಲೆ ಶೇಕಡ 100ರಷ್ಟು ಸುಂಕ ವಿಧಿಸುತ್ತಿದೆ” ಎಂದಿದ್ದಾರೆ.(Trump’s decision to impose tariffs)
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭಾರತ ಮತ್ತು ಚೀನಾ ವಿರುದ್ದ ಪ್ರತಿ ಸುಂಕ ಹೇರಲಿದೆ ಎಂದು ಟ್ರಂಪ್ ಹೇಳಿದ್ದರು.“ನಮ್ಮ ಉತ್ಪನ್ನಗಳ ಮೇಲೆ ಚೀನಾದ (China) ಸರಾಸರಿ ಸುಂಕವು ನಾವು ವಿಧಿಸುವುದಕ್ಕಿಂತ ಎರಡು ಪಟ್ಟು ಹೆಚ್ಚಿದೆ. ದಕ್ಷಿಣ ಕೊರಿಯಾದ (South Korea) ಸರಾಸರಿ ಸುಂಕವು ನಾಲ್ಕು ಪಟ್ಟು ಹೆಚ್ಚಿದೆ” ಎಂದು ವಿವರಿಸಿದ್ದಾರೆ.
ಇದನ್ನು ಓದಿ: ಸತತ ಮೂರನೇ ದಿನವೂ USAID ನಿಧಿ ಪ್ರಸ್ತಾಪಿಸಿದ ಟ್ರಂಪ್!: ಭಾರತದ ರಾಜಕೀಯದಲ್ಲಿ ವಾಕ್ಸಮರ
ದಕ್ಷಿಣ ಕೊರಿಯಾಗೆ ಮಿಲಿಟರಿ ಮತ್ತು ಹಲವು ರೀತಿಯಲ್ಲಿ ನಾವು ಸಹಕಾರ ನೀಡುತ್ತಿದ್ದೇವೆ. ಏ.2 ರಿಂದ ಪ್ರತಿ ಸುಂಕ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.ಅವರ ತೆರಿಗೆಯ ಪ್ರತಿಯಾಗಿ ನಮ್ಮ ತೆರಿಗೆ ಇರುತ್ತದೆ.ಒಂದು ವೇಳೆ ನಮ್ಮನ್ನು ಅವರ ಮಾರುಕಟ್ಟೆಯಿಂದ ಹೊರಗಿಡಲು ಹಣಕಾಸೇತರ ಸುಂಕ ಪದ್ಧತಿ (Non-Monetary Tariff System) ಬಳಸಿದರೆ, ನಾವೂ ನಮ್ಮ ಮಾರುಕಟ್ಟೆಯಿಂದ ಅವರನ್ನು ಹೊರಡಗಿಡಲು ಅದೇ ವಿಧಾನವನ್ನು ಬಳಸುತ್ತೇವೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.ನೆರೆಯ ರಾಷ್ಟ್ರಗಳಾದ ಕೆನಡಾ ಮತ್ತು ಮೆಕ್ಸಿಕೊ ಮೇಲೆ ಶೇ.25 ರಷ್ಟು ಮತ್ತು ಚೀನಾ ಮೇಲೆ ಶೇ.20 ರಷ್ಟು ಸುಂಕ ವಿಧಿಸಲು ಅಮೇರಿಕಾ (America) ನಿರ್ಧರಿಸಿದೆ.