ಬೆಂಗಳೂರು, ಆ. 07: ಪ್ರಥಮ ಬಾರಿಗೆ ಸಚಿವನಾಗಿ ಆಯ್ಕೆಯಾಗಿದ್ದೇನೆ, ಸಂಪುಟದಲ್ಲಿ ಗೃಹ ಖಾತೆಯಂತಹ ಮಹತ್ವದ ಜವಬ್ಧಾರಿ ನೀಡಿದ್ದಾರೆ ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ನನಗಿದೆ ಎಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಎನ್. ಆರ್. ಪುರ ತಾಲೂಕಿನ ವಿವಿಧೆಡೆ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಹಾನಿಯಾದ ಮನೆಗಳಿಗೆ ಹಾಗೂ ಸಂತ್ರಸ್ಥರಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳ ದುರಸ್ತಿಗೆ ಕ್ರಮ ವಹಿಸುತ್ತೇನೆ ಎಂದು ಹೇಳಿದರು.
ಗೃಹ ಖಾತೆ ಜವಬ್ದಾರಿ ಬಗ್ಗೆ ಮಾತನಾಡಿದ ಅವರು ನಾನು ಆರ್ ಎಸ್ ಎಸ್ ಹಿನ್ನಲೆಯಿಂದ ಬಂದಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಸಂಘ ನನಗೆ ಶಿಸ್ತು ಜೊತೆಗೆ ಕೆಟ್ಟದ್ದು ಮತ್ತು ಒಳ್ಳೆಯದು ಯಾವುದು ಎಂಬುದನ್ನು ಕಲಿಸಿದೆ. ಇದೀಗ ಹಿರಿಯ ನಾಯಕರು ನನಗೆ ಗೃಹ ಖಾತೆ ಕೊಟ್ಟಿದ್ದಾರೆ ನನಗೆ ಕೊಟ್ಟ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.