New Delhi : ಪಿಎಂ ಕೇರ್ಸ್ ಫಂಡ್ನ(PM Cares Fund) ಹೊಸ ಟ್ರಸ್ಟಿಯಾಗಿ ಕೈಗಾರಿಕೋದ್ಯಮಿ ರತನ್ ಟಾಟಾ(Ratan Tata) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಪಿಎಂ ಕೇರ್ಸ್ ಫಂಡ್ಗೆ ಸುಪ್ರೀಂ ಕೋರ್ಟ್ನ (Supremecourt) ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಟಿ ಥಾಮಸ್, ಮಾಜಿ ಡೆಪ್ಯೂಟಿ ಸ್ಪೀಕರ್ ಕರಿಯಾ ಮುಂಡಾ, ಟಾಟಾ ಸನ್ಸ್ ಅಧ್ಯಕ್ಷ ಎಮೆರಿಟಸ್ ಇತರ ಹೊಸ ಟ್ರಸ್ಟಿಗಳಾಗಿದ್ದಾರೆ.
ಇನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯವು ನೂತನ ಟ್ರಸ್ಟಿಗಳನ್ನು ಪಿಎಂ ಕೇರ್ಸ್ ಫಂಡ್ನ ಅವಿಭಾಜ್ಯ ಅಂಗವಾಗಲು ಸ್ವಾಗತಿಸಿದ್ದು,
ಇದನ್ನೂ ಓದಿ : https://vijayatimes.com/siddaramaiah-is-corrupted-says-bjp/
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರು ಪಿಎಂ ಕೇರ್ಸ್ ಫಂಡ್ನ ಇತರ ಟ್ರಸ್ಟಿಗಳಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು(Narendra Modi) ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳ ಸಭೆಯ ಅಧ್ಯಕ್ಷತೆ ವಹಿಸಿ,

ಪಿಎಂ ಕೇರ್ಸ್ ಫಂಡ್ನ ಸಹಾಯದಿಂದ ಕೈಗೊಂಡ ವಿವಿಧ ಉಪಕ್ರಮಗಳ ಕುರಿತು ಮಾತನಾಡಿದ್ದು, ಸಭೆಯಲ್ಲಿ ರತನ್ ಟಾಟಾ ಕೂಡ ಉಪಸ್ಥಿತರಿದ್ದರು.
ಟ್ರಸ್ಟಿಗಳ ಜೊತೆಗೆ ನೂತನ ಸಲಹಾ ಮಂಡಳಿಯನ್ನು ರಚಿಸಿದ್ದು, ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ, ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ(SudhaMurthy), ಟೀಚ್ ಫಾರ್ ಇಂಡಿಯಾದ ಸಹ-ಸಂಸ್ಥಾಪಕ ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಮಲ್ ಫೌಂಡೇಶನ್ನ ಮಾಜಿ ಸಿಇಒ ಆನಂದ್ ಶಾ ಅವರನ್ನು ಸಲಹಾ ಮಂಡಳಿಗೆ ನೇಮಕ ಮಾಡಲಾಗಿದೆ.
ಇದನ್ನೂ ಓದಿ : https://vijayatimes.com/long-allegation-on-bjp-by-congress/
ಇದೇ ವೇಳೆ ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಭಾಗವಹಿಸುವಿಕೆಯು ಪಿಎಂ ಕೇರ್ಸ್ ಫಂಡ್ನ ಕಾರ್ಯಚಟುವಟಿಕೆಗೆ ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
- ಮಹೇಶ್.ಪಿ.ಎಚ್