Visit Channel

ತುಳಸಿಯಿಂದ ಆರೋಗ್ಯ ತುಳಸಿಯಿಂದ ಆನಂದ

file77vbdcx8fiq15h9rc1r01573191241

ತುಳಸಿಯಲ್ಲಿ ಎರಡು ವಿಧಗಳಿವೆ ಒಂದು ರಾಮ ತುಳಸಿ ಇನ್ನೊಂದು  ಕಷ್ಣ ತುಳಸಿ ರಾಮ ತುಳಸಿ  ರಾಮ ತುಳಸಿ ಮತ್ತು ಕ್ರಷ್ಣ ತುಳಸಿ ಇವೆರಡೂ ತದ್ವಿರುದ್ಧ ಗುಣಗಳನ್ನು ಹೊಂದಿದ್ದರೂ ಉತ್ತಮ ಆರೋಗ್ಯಕ್ಕೆ ಉಪಕಾರಿಯಾಗಿದೆ. ರಾಮ ತುಳಸಿ ತಂಪಿನ ಗುಣವನ್ನು ಹೊಂದಿದ್ದು ಕ್ರಷ್ಣ ತುಳಸಿ ಉಷ್ಣದ ಗುಣವನ್ನು ಹೊಂದಿದೆ. ತುಳಸಿ ಗಿಡದಲ್ಲಿ ಮಾನವನಿಗೆ ಬೇಕಾಗುವ ಔಷದೀಯ ಗುಣಗಳನ್ನು ಹೊಂದಿದ್ದು  ಎಲ್ಲಾ ಸರ್ವಗುಣ ಸಂಪನ್ನತೆಯನ್ನು ಈ ಗಿಡ ಹೊಂದಿದೆ. ದಿನಾಲು ಬೆಳಗ್ಗೆದ್ದು ತುಳಸಿ ಗಿಡದ ಬಳಿ ನಿಂತು ತುಳಸಿ ಗಿಡದ ಎಲೆಗಳಿಂದ ಬರುವ  ಗಾಳಿಯನ್ನು ತೆಗೆದುಕೊಂಡರೆ ನಮ್ಮ ಶ್ವಾಸ ಕೋಶದ ಒಳಗೆ ಏನಾದರೂ ಸೋಂಕು ಇದ್ದರೆ ನಿವಾರಣೆಯಾಗುತ್ತದೆ ಹಾಗೂ ದೇಹಕ್ಕೆ ಬರುವ ಯಾವುದೇ ತೊಂದರೆಗಳಿದ್ದರೂ ದೂರವಾಗುತ್ತವೆ.

ಮನೆ ಸುತ್ತ-ಮುತ್ತ ಯಥೇಷ್ಠವಾಗಿ ಈ ಗಿಡಗಳನ್ನು ಬೆಳೆಸುವುದರಿಂದ ಸೊಳ್ಳೆಗಳ ಕಾಟವು ಕಡಿಮೆಯಾಗುತ್ತದೆ. ಯಾವುದೇ ಚರ್ಮ ರೋಗಗಳು ಹಾಗೂ ಅಲರ್ಜಿಯಂತಹ ರೋಗಗಳಿಂದ ಮುಕ್ತಿ ಹೊಂದಬಹುದಾಗಿದೆ. ಚರ್ಮರೋಗಗಳು ಇದ್ದಲ್ಲಿ ತುಳಸಿ ರಸಕ್ಕೆ ಲಿಂಬು ರಸವನ್ನುಹಾಗೂ ಅರಿಶಿನ ಪುಡಿಯ ಮಿಶ್ರಣವನ್ನು ಮಾಡಿಕೊಂಡು ಹಚ್ಚಿದರೆ ಗುಣಮುಖವಾಗುತ್ತದೆ. ಇನ್ನು ತುಳಸಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಕೆಮ್ಮು ನೆಗಡಿಯಂತಹ ಕಾಯಿಲೆಗಳು ದೂರವಾಗುತ್ತವೆ  ಮಾತ್ರವಲ್ಲ ಕುಷ್ಠರೋಗ ನಿವಾರಣೆಗೂ ಇದನ್ನು ಪ್ರತೀ ದಿನ ತೆಗೆದುಕೊಂಡರೆ ಗುಣಪಡಿಸಲಾಗುತ್ತದೆ.

ಹೊಟ್ಟೆಯಲ್ಲಿ ಅಜೀರ್ಣವಾದಾಗಲೂ ತುಳಸಿ ಎಲೆಗಳ ಜೊತೆ ಸ್ವಲ್ಪ ಕಾಳುಮೆಣಸನ್ನು ಹಾಗೂ ಏಲಕ್ಕಿಯನ್ನೂ ಮಿಕ್ಸ್ ಮಾಡಿಕೊಂಡು ಜಜ್ಜಿ ರಸ ತೆಗೆದು ಕುಡಿದರೆ ಅಜೀರ್ಣವು ದೂರವಾಗಿ ಹೊಟ್ಟೆ ಹಗುರವಾಗಿ ಹಸಿವು ಪ್ರಾರಂಭವಾಗುತ್ತದೆ.ಒಂದು ಚಮಚ ಜೇನು ತುಪ್ಪದೊಂದಿಗೆ ತುಳಸಿ ರಸವನ್ನು ಸೇವಿಸುತ್ತಾ ಬಂದರೆ ಗಂಟಲು ನೋವಿನ ಸಮಸ್ಯೆಯು ಪರಿಹಾರವಾಗುತ್ತದೆ. ಹಲ್ಲು ನೋವಿನ ಸಮಸ್ಯಗೂ ಇದು ಪರಿಹಾರ ನೀಡುತ್ತದೆ. ಹಲ್ಲು ನೋವಾಗುತ್ತದ್ದರೆ, ತುಳಸಿ ಎಲೆ ಮತ್ತು ಉಪ್ಪನ್ನು ಸೇರಿಸಿ ಜಜ್ಜಿ ಹಲ್ಲಿನ ಬದಿಯಲ್ಲಿಟ್ಟುಕೊಂಡರೆ ನೋವು ಉಪಶಮನವಾಗುತ್ತದೆ.

ಹೀಗೆ ತುಳಸಿ ಬಹೂಪಯೋಗಿ ಗಿಡವಾಗಿದ್ದು ನಮ್ಮ ನಿತ್ಯ ಜೀವನಕ್ಕೆ ಬಹಳ ಪರಿಣಾಮಕಾರಿಯಾಗಿದೆ. ಈ ಎಲೆಯ ಗಾಳಿಯನ್ನು ಉಸಿರಾಡುವುದರಿಂದ ಕ್ಯಾನ್ಸರ್ ನಂತಹ ರೋಗಾಣುಗಳೂ ದೇಹದೊಳಗೆ ಹೋಗದಂತೆ ತಡೆಯುತ್ತವೆಂದು ಹೇಳಲಾಗುತ್ತದೆ. ಇನ್ನು ದೇಹದ ತೂಕ ಇಳಿಸಿಕೊಳ್ಳುವಲ್ಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಮಜ್ಜಿಗೆಯೊಂದಿಗೆ ಸ್ವಲ್ಪ ತುಳಸಿ ಎಲೆಗಳನ್ನು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಒಂದು ಗಿಡದಿಂದ ಹಲವಾರು ಔಷದೀಯ ಗುಣಗಳು ನಮಗೆ ಸಿಗುತ್ತವೆ.

ಮನೆಯ ಮುಂದೆ ತುಳಸಿ ಗಡವಿದ್ದರೆ ಮನೆಗೂ ಲಕ್ಷಣ ನಮ್ಮ ಮನಸಿಗೂ ಆನಂದ ಬೆಳಗ್ಗೆದ್ದು ನಾವು ಮನೆಯಿಂದ ಹೊರಗೆ ಬರುವಾಗ ಮೊದಲು ನೋಡುವುದೇ ತುಳಸಿ ಕಟ್ಟೆಯಲ್ಲಿರುವ ತುಳಸಿ ಗಿಡವನ್ನು. ಇದೊಂದು ದೈವಾಂಶ ಗಿಡವೂ ಹೌದು. ಆದ್ದರಿಂದ ಆದಷ್ಟು ತುಳಸಿ ಬೆಳೆಸಿ. ಆರೋಗ್ಯ ಕಾಪಾಡಿಕೊಳ್ಳಿ.

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.