Tumkuru : ಸ್ವಾತಂತ್ರ್ಯ ಹೋರಾಟಗಾರ (Freedom Fighter) ವೀರ್ ಸಾವರ್ಕರ್(Veer Savarkar) ವಿವಾದ (Controversy) ಇನ್ನೂ ತಣ್ಣಗಾಗಿಲ್ಲ, ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗುವ ಸಾಧ್ಯತೆಗಳು ಗೋಚರವಾಗುತ್ತಿವೆ.

ವೀರ್ ಸಾವರ್ಕರ್ ಅವರನ್ನು ಕಾಂಗ್ರೆಸ್ (Congress) ಟೀಕಿಸುತ್ತಿದ್ದರೆ, ರಾಜ್ಯ ಬಿಜೆಪಿ(State BJP) ಸಾವರ್ಕರ್ ಪರವಾಗಿ ರಥಯಾತ್ರೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಇದೀಗ ತುಮಕೂರು ವಿಶ್ವವಿದ್ಯಾಲಯ(Tumkuru University) “ವೀರ್ ಸಾವರ್ಕರ್ ಅಧ್ಯಯನ ಪೀಠʼ ಸ್ಥಾಪಿಸಲು ಅನುಮತಿ ನೀಡಿದೆ.
ತುಮಕೂರು ವಿಶ್ವವಿದ್ಯಾಲಯದ ಈ ನಡೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ತುಮಕೂರು ವಿಶ್ವವಿದ್ಯಾಲಯದ 6ನೇ ಸಿಂಡಿಕೇಟ್ ಸಭೆಯಲ್ಲಿ ವೀರ್ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. https://vijayatimes.com/second-world-war-rare-photo/
ಇದಕ್ಕಾಗಿ ವಿಶ್ವವಿದ್ಯಾಲಯದ ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಿಂಡಿಕೇಟ್ ಸದಸ್ಯ ವಿನಯ್ ಅವರು ಸಭೆಯ ಅಜೆಂಡಾದಲ್ಲಿ ವೀರ್ ಸಾವರ್ಕರ್ ಪೀಠ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ವಿಶ್ವವಿದ್ಯಾಲಯ ಸರ್ವಾನುಮತದಿಂದ ಪೀಠ ಸ್ಥಾಪನೆಗೆ ಒಪ್ಪಿಗೆ ನೀಡಿದೆ.
ಇನ್ನು ವೀರ್ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಬೇಕಾಗಿರುವ ಹಣಕಾಸು ನೆರವನ್ನು ದಾನಿಗಳಿಂದ ಸಂಗ್ರಹಿಸಲು ನಿರ್ಧಾರ ಮಾಡಲಾಗಿದೆ.
ಈ ವೇಳೆ ಸಿಂಡಿಕೇಟ್ ಸದಸ್ಯ ವಿನಯ್ ಅವರು ಪೀಠ ಸ್ಥಾಪನೆಗೆ 1 ಲಕ್ಷ ರೂಪಾಯಿ ಮೂಲ ಠೇವಣಿಯನ್ನು ಇರಿಸಿದ್ದಾರೆ. ಸಾವರ್ಕರ್ ಪೀಠ ಸ್ಥಾಪನೆಗೆ ಕರಡು ನಿಯಮ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಸಾವರ್ಕರ್ ಪೀಠ ಕಾರ್ಯಾರಂಭವಾಗುವ ಸಾಧ್ಯತೆ ಇದೆ.
ಇನ್ನು ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಸಿಂಡಿಕೇಟ್ ಸದಸ್ಯ ವಿನಯ್, ನಾನು ವಿಶ್ವವಿದ್ಯಾಲಯದ 6ನೇ ಸಿಂಡಿಕೇಟ್ ಸಭೆಯಲ್ಲಿ ವೀರ್‌ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ್ದು,
