Tungabhadra Dam Gate Cut Case: Installation of temporary gate today evening
Koppala: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪೋಲಾಗುತ್ತಿರುವ ಕಾರಣ ಇಂದು (ಮಂಗಳವಾರ) ಸಂಜೆಯಿಂದ ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್ ಮಂಡಳಿ ನಿರ್ಧಾರ ಕೈಗೊಂಡಿದೆ.
ಜಲಾಯಶಯದ ನೀರು ಖಾಲಿಯಾಗುವ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಯತ್ನಿಸಲಾಗುತ್ತಿದ್ದು, ನೀರಿನಲ್ಲೇ ಗೇಟ್ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ. ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದೆ. ನಾರಾಯಣ ಇಂಜಿನಿಯರ್ಸ್ (Narayana Engineers), ಹಿಂದೂಸ್ತಾನ್ ಇಂಜಿನಿಯರ್ಸ್, ಜಿಂದಾಲ್ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.
ಎರಡು ದಿನಗಳಲ್ಲಿ 15 ಟಿಎಂಸಿ ನೀರು ಪೋಲು
ಕೊಪ್ಪಳ (Koppala) ತಾಲೂಕಿನ ಮುಶಿರಾಬಾದ್ ಬಳಿಯಿರುವ ತುಂಗಭದ್ರಾ ಡ್ಯಾಮ್ನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಇಂದಿಗೆ ಎರಡು ದಿನಗಳು ಕಳೆದಿದ್ದು, ಎರಡು ದಿನದಲ್ಲಿ 14 ಟಿಎಂಸಿ ನೀರು ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ (August) 10ರಂದು ಡ್ಯಾಮ್ನಲ್ಲಿ ಬರೋಬ್ಬರಿ 105 ಟಿಎಂಸಿ ನೀರು ಸಂಗ್ರಹವಿತ್ತು. ಈ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಡ್ಯಾಂನಲ್ಲಿ 91.979 ಟಿಎಂಸಿ ನೀರು ಸಂಗ್ರಹ ಇದೆ.
ಡ್ಯಾಮ್ನಿಂದ ನದಿಗೆ 1.14 ಲಕ್ಷ ಕ್ಯೂಸೆಕ್ ನೀರಿನ ಹೊರ ಹರಿವು ಇದ್ದು, ಸದ್ಯ 36 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಕೆನಲ್ಗಳಿಗೆ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಮಾಹಿತಿಯನ್ನು ಜಲಾಶಯ ಮಂಡಳಿ ನೀಡಿದೆ.
ಇಂದು ಸಿಎಂ ಸಿದ್ದರಾಮಯ್ಯ ಭೇಟಿ
ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಲಿದ್ದು, ನಿಗದಿಯಂತೆ ಸಿಎಂ ಟಿಬಿ ಡ್ಯಾಮ್ಗೆ ಬಾಗಿನ ಅರ್ಪಿಸಬೇಕಿತ್ತು. ಆದರೆ ಟಿಬಿ ಡ್ಯಾಮ್ ಪರಿಶೀಲನೆಗೆ ಆಗಮಿಸಲಿದ್ದಾರೆ. ಕೊಪ್ಪಳ ತಾಲೂಕಿನ ಗಿಣಗೇರಾ ಏರ್ಸ್ಟ್ರಿಪ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ಸಿಎಂ, ಮಧ್ಯಾಹ್ನ 12.30ಕ್ಕೆ ಟಿಬಿ ಡ್ಯಾಮ್ಗೆ ಭೇಟಿ ನೀಡಲಿದ್ದಾರೆ. ಡ್ಯಾಮ್ ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
Tungabhadra Dam Gate Chain Cut Kannada trending
Since the 19th crust gate of Tungabhadra Dam is leaking, the Tungabhadra Dam Board has decided to install a temporary gate from today (Tuesday) evening.
Attempts are being made to install a temporary gate before the water in the reservoir runs out, and a team of experts will attempt to install a temporary gate by lowering the gate in the water itself. A temporary new gate has been prepared at Hospet and Hosalli. The gate installation work will be done by the team of Narayana Engineers, Hindustan Engineers and Jindal Engineers.
15 TMC of water was wasted in two days
Today, two days have passed since the 19th crust gate of Tungabhadra Dam near Mushirabad in Koppala taluk broke and 14 TMC of water has flowed out in two days. On August 10, there was a total of 105 TMC of water stored in the dam. This reservoir has a water storage capacity of 105.788 TMC. At present there is 91.979 TMC water storage in the dam.
There is an outflow of 1.14 lakh cusecs of water from the dam to the river, and currently there is an inflow of 36 thousand cusecs of water. The reservoir board has given the information that 10 thousand cusecs of water has been released to the kennels.
Visit CM Siddaramaiah today
Today, CM Siddaramaiah will visit Tungabhadra reservoir and as scheduled, CM was supposed to pay tribute to TB Dam. But TB will come for dam inspection. The CM will arrive at Ginagera Airstrip in Koppal taluk by a special flight from Bangalore and will visit the TB Dam at 12.30 pm. He will hold a meeting with the officials after inspecting the dam.