Tungabhadra Dam Gate Collapse Kannada News
Koppala: ಕೊಪ್ಪಳ (Koppala) ಜಿಲ್ಲೆಯಲ್ಲಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಇದರಿಂದ ನೀರು ಪೋಲಾಗುತ್ತಿದೆ. ಇದರ ನಡುವೆ ಇಂದು ಕೂಡ ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ತುಂಗಭದ್ರಾ ಬೋರ್ಡ್ (Board) ಜಿಲ್ಲಾಡಳಿತ ಸೂಚನೆ ಕೊಟ್ಟಿದ್ದು, ನದಿ ಸಮೀಪಕ್ಕೆ ಮಕ್ಕಳನ್ನು, ಜಾನುವಾರುಗಳು ಹೋಗದಂತೆ ಎಚ್ಚರವಹಿಸಿ ಹಾಗೂ ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿರುವುದರಿಂದ ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಟಿಬಿ ಡ್ಯಾಮ್ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಯಾರೂ ಕೂಡ ನದಿ ಪಾತ್ರಕ್ಕೆ ಹೋಗದಂತೆ ಟಿಬಿ ಡ್ಯಾಮ್ (TB Dam) ಕೆಳಭಾಗದ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಕಾರಟಗಿ ತಾಲೂಕಿನ ಗ್ರಾಮಗಳ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ನಿನ್ನೆಯಿಂದ ಈವರಗೆ 13 ಟಿಎಂಸಿ (TMC) ನೀರು ಡ್ಯಾಂ ನಿಂದ ಖಾಲಿ ಮಾಡಲಾಗಿದೆ.
ಡ್ಯಾಂ ಸುತ್ತಮುತ್ತ ಪ್ರವಾಸಿಗರ ಸಂಚಾರ ನಿಷೇಧ
ಡ್ಯಾಂ ಸುತ್ತಮುತ್ತಲಿನ ಪ್ರದೇಶಕ್ಕೆ ಜನ ಸಂಚಾರ ನಿಷೇಧ ಮಾಡಲಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಅವರ ಸೂಚನೆಯಂತೆ ವಿಜಯನಗರ ಜಿಲ್ಲಾಧಿಕಾರಿ ಎಂಎಸ್ ದಿವಾಕರ ಆದೇಶ ಹೊರಡಿಸಿದ್ದಾರೆ. ತುಂಗಭದ್ರಾ ಸೇತುವೆ ನೋಡಲು ಅಪಾರ ಪ್ರಮಾಣದ ಪ್ರವಾಸಿಗರು ಮತ್ತು ಜನ ಬರುವುದರಿಂದ ಮತ್ತು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರ ಬಿಡುವ ಹಿನ್ನಲೆ ಡ್ಯಾಂ ಸುತ್ತಮುತ್ತ ಜನ ಸಂಚಾರ ನಿಷೇಧ ಹೇರಲಾಗಿದೆ.
ಇನ್ನು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರು ಸಚಿವ ಜಮೀರ್ ಅಹ್ಮದ್ ಜೊತೆ ಬಾಗಿನ ಅರ್ಪಿಸಬೇಕಿತ್ತು. ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೂ ಮುನ್ನವೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿ ಮಹಾ ಅವಘಡ ಸಂಭವಿಸಿರುವುದರಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ರದ್ದು ಮಾಡಲಾಗಿದೆ. ಜಲಾಶಯದಿಂದ ಇದೀಗ 50-60 ಟಿಎಂಸಿ ನೀರು ರಿಲೀಸ್ ಮಾಡಲೇಬೇಕಿದೆ. ಇಲ್ಲದಿದ್ದರೆ ಗೇಟ್ ದುರಸ್ತಿ ಕಾರ್ಯ ಸಾಧ್ಯನೇ ಇಲ್ಲ. ಒಂದು ವೇಳೆ ಒಂದೇ ಗೇಟ್ ನಿಂದ ನೀರು ಹೊರಗೆ ಬಂದ್ರೆ ಇನ್ನುಳಿದ ಗೇಟ್ ಗಳಿಗೂ ಹಾನಿಯಾಗುತ್ತೆ. ಗೇಟ್ ಪ್ರೆಸರ್ ತಪ್ಪಿಸಲು 28 ಗೇಟ್ ಗಳ ಮೂಲಕ ನೀರು ರಿಲೀಸ್ ಮಾಡಲಾಗಿದೆ.
ಟಿಬಿ ಜಲಾಶಯಕ್ಕೆ ಇಂದು ಭೇಟಿ ನೀಡಲಿರುವ ವಿಜಯೇಂದ್ರ
ಟಿಬಿ ಜಲಾಶಯಕ್ಕೆ ಇಂದು ಮಧ್ಯಾಹ್ನ ಬಿ.ವೈ.ವಿಜಯೇಂದ್ರ (B Y Vijayendra) ಭೇಟಿ ನೀಡಲಿದ್ದಾರೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದು ವಿಪಕ್ಷಗಳೂ ಕಿಡಿಕಾರುತ್ತಿವೆ. ಮಾಜಿ ಸಿಎಂ ಬೊಮ್ಮಾಯಿ & ವಿಪಕ್ಷ ನಾಯಕ ಅಶೋಕ್ (Ashok) ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
The 19th crust gate of Tungabhadra Dam in Koppala district has been washed away and water is leaking. Meanwhile, 1.5 lakh cusecs of water is being released from the reservoir to the river even today. So the people of the riverbed have been advised to be careful.
The Tungabhadra Board (Board) district administration has instructed not to enter the river for any reason, and the district administration has warned that children and cattle should not go near the river and the people living in the river should be safe as the dam water is being drained into the river. Huge amount of water has been released from TB Dam. Villagers of Koppala Taluk, Gangavati Taluk, Karatagi Taluk downstream of TB Dam have been instructed not to go into the river basin. Since yesterday, 13 TMC water has been released from the dam.
Traffic ban for tourists around the dam
Traffic has been banned in the area around the dam, as per the instructions of DCM DK Shivakumar, Vijayanagar District Collector MS Diwakar has issued an order. Due to huge number of tourists and people coming to see the Tungabhadra Bridge and around the Hinale Dam which releases more than one lakh cusecs of water, traffic ban has been imposed.
Tomorrow, Chief Minister Siddaramaiah was supposed to shake hands with Minister Jameer Ahmed. The Bagin Arpana program has been canceled as the crust gate has washed away before the Bagin Arpana program. 50-60 TMC of water has to be released from the reservoir now. Otherwise the gate repair work is not possible. If water comes out of one gate, the other gates will also be damaged. Water is released through 28 gates to avoid gate pressure.
Vijayendra to visit TB reservoir today
B Y Vijayendra will visit TB reservoir this afternoon. The crust gate of the Tungabhadra reservoir has been washed away and the opposition is also on fire. Former CM Bommai & Leader of Opposition Ashok will also visit and inspect.