Politics : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಧರಿಸಿದ್ದ ದುಬಾರಿ ಟಿ-ಶರ್ಟ್ ಬಿಜೆಪಿಯ ಟೀಕೆಗೆ ಗುರಿಯಾಗಿದೆ.
ಸುಮಾರು 41,000 ರೂ. ಬೆಲೆಬಾಳುತ್ತದೆ ಎನ್ನಲಾಗಿರುವ ಬಾಬೆರಿ ಟಿ- ಶರ್ಟ್ ವಿಚಾರವಾಗಿ ಬಿಜೆಪಿ(BJP) ವಾಗ್ದಾಳಿ ನಡೆಸಿದೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಪ್ರಧಾನಿ ಅವರು ಧರಿಸುವ ಸೂಟ್ ಬೆಲೆ 10 ಲಕ್ಷ ರೂ. ಬೆಲೆಬಾಳುತ್ತದೆ ಎಂದು ಆರೋಪಿಸಿದೆ.
ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟರ್(Tweet war) ವಾರ್ ಆರಂಭವಾಗಿದೆ.
ದೇಶವನ್ನು ಒಗ್ಗೂಡಿಸುವ ‘ಭಾರತ್ ಜೋಡೋ ಯಾತ್ರೆ’(Bharat Jodo Yathra) ನಡೆಸುತ್ತಿರುವ ರಾಹುಲ್ ಗಾಂಧಿ ಅವರು,
ಇದನ್ನೂ ಓದಿ : https://vijayatimes.com/cashew-fruit-feni/
ತಮ್ಮ ಯಾತ್ರೆಯ ಉದ್ಘಾಟನೆ ಸಂದರ್ಭದಲ್ಲಿ ಧರಿಸಿದ್ದ ಬಾಬೆರಿ ಬ್ರ್ಯಾಂಡ್‌ನ ಟಿ-ಶರ್ಟ್ ಬೆಲೆ ಮುಂದಿಟ್ಟುಕೊಂಡು ಟೀಕಾಪ್ರಹಾರ ನಡೆಸಿದೆ.
ಬಿಳಿ ಬಣ್ಣದ ಬಾಬೆರಿ ಟಿ-ಶರ್ಟ್‌ನಲ್ಲಿರುವ ರಾಹುಲ್ ಗಾಂಧಿ ಅವರ ಫೋಟೋದ ಜತೆ, ಆನ್‌ಲೈನ್‌ನಲ್ಲಿ ಈ ಬ್ರ್ಯಾಂಡ್ ಟಿ ಶರ್ಟ್‌ಗೆ ಇರುವ ಬೆಲೆಯ ಫೋಟೋವನ್ನು ಬಿಜೆಪಿ ಹಂಚಿಕೊಂಡಿದೆ.
‘ಭಾರತ್ ದೇಖೋ’ ಎಂಬ ಕ್ಯಾಪ್ಷನ್ ನೀಡಿದ್ದು, ಇದು ‘ಭಾರತ್ ಜೋಡೋ’ ಯಾತ್ರೆಯನ್ನು ಟೀಕಿಸಿದಂತಿದೆ.

ಇನ್ನು, ಕಾಂಗ್ರೆಸ್ ಕೂಡ ಬಿಜೆಪಿಗೆ ತಿರುಗೇಟು ನೀಡಿದ್ದು, “ಪ್ರಧಾನಿ ನರೇಂದ್ರ ಮೋದಿಯವರ ಸೂಟ್‌ನ ಬೆಲೆ 10 ಲಕ್ಷ ರೂಪಾಯಿ” ಎಂದು ಹೇಳಿದೆ. “ಏಯ್ ನಿನಗೆ ಹೆದರಿಕೆಯಾ?
‘ಭಾರತ್ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನಸಮೂಹವನ್ನು ನೋಡಿ? ಸಮಸ್ಯೆಯ ಬಗ್ಗೆ ಮಾತನಾಡಿ, ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ.
ನಾವು ಬಟ್ಟೆಯ ಬಗ್ಗೆ ಚರ್ಚಿಸಬೇಕಾದರೆ, ಮೋದಿ ಜಿ ಅವರ 10 ಲಕ್ಷ ಬೆಲೆಯ ಸೂಟ್ ಮತ್ತು 1.5 ಲಕ್ಷ ಬೆಲೆಯ ಕನ್ನಡಕದ ಬಗ್ಗೆಯೂ ಮಾತನಾಡಲಾಗುತ್ತದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಹಿಂದೆಯೂ ಬಿಜೆಪಿ, ರಾಹುಲ್ ಗಾಂಧಿ ಅವರು ಧರಿಸುವ ದುಬಾರಿ ಟೀ-ಶರ್ಟ್ ಬಗ್ಗೆ ಚಕಾರ ಎತ್ತಿತ್ತು.
