ನವ ದೆಹಲಿ : ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿದಂತೆ ಏಳು ಮಂದಿ ಬ್ರಿಜ್‌ಭೂಷಣ್ (twist for brijbhushan case) ವಿರುದ್ಧ ದೆಹಲಿ(Delhi) ಪೊಲೀಸರಿಗೆ ದೂರು ನೀಡಿದ್ದರು.
ಅಪ್ರಾಪ್ತೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಬ್ರಿಜ್ ವಿರುದ್ಧ ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದರು. ನಂತರ ಮೇ 10 ರಂದು ಮ್ಯಾಜಿಸ್ಟ್ರೇಟ್‌ಗೆ ಅಪ್ರಾಪ್ತೆಯ ಹೇಳಿಕೆಯನ್ನು ಸಲ್ಲಿಸಲಾಯಿತು.
ಅಪ್ರಾಪ್ತ ಬಾಲಕಿಯ ತಂದೆ ಕೂಡ ಬ್ರಿಜ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಹೇಳಿಕೆ (twist for brijbhushan case) ದಾಖಲಿಸಿದ್ದರು.
ಆದರೆ ಅಪ್ರಾಪ್ತೆಯ ತಂದೆ ಜೂನ್ 5 ರಂದು ಮತ್ತೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ತಮ್ಮ ಕಥೆಯನ್ನು ಬದಲಾಯಿಸಿದರು, ಬ್ರಿಜ್‌ಭೂಷಣ್ ಆಯ್ಕೆ ವಿಚಾರಣೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಆದ್ದರಿಂದ ಕೋಪದಿಂದ ಸುಳ್ಳು ಹೇಳಿಕೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ನನ್ನ ಹಿಂದಿನ ಹೇಳಿಕೆಯಲ್ಲಿ ಕೆಲವು ಸುಳ್ಳುಗಳಿವೆ. ಹಾಗಾಗಿ ಹೇಳಿಕೆ ಬದಲಾಯಿಸಿದ್ದೇನೆ. ಆದರೆ ದೂರು ಹಿಂಪಡೆದಿರಲಿಲ್ಲ. ನನ್ನ ಮಗಳು ತುಂಬಾ ತೊಂದರೆಗೀಡಾಗಿದ್ದಾಳೆ.
ಆದರೆ ಎಫ್‌ಐಆರ್‌ನಲ್ಲಿ (FIR) ದಾಖಲಾಗಿರುವುದು ಎಲ್ಲವೂ ಸತ್ಯವಲ್ಲ.ನನಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ. ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದ ಅವರು,
ತಮ್ಮ ಹೇಳಿಕೆಯನ್ನು ಬದಲಾಯಿಸುವಂತೆ ಯಾರಿಂದಲೂ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್
ಇತ್ತೀಚೆಗಷ್ಟೇ ದೂರಿನಲ್ಲಿ ಅಪ್ರಾಪ್ತೆ ಉಲ್ಲೇಖಿಸಿರುವ ಮಾಹಿತಿಯನ್ನು ಮಾಧ್ಯಮಗಳು ಬಹಿರಂಗಪಡಿಸಿವೆ. ಫೋಟೋ ಕ್ಲಿಕ್ಕಿಸುವ ನೆಪದಲ್ಲಿ , ಬ್ರಿಜ್ ತನ್ನ ಭುಜ ಮತ್ತು ಎದೆಯ ಮೇಲೆ ಕೈಯಿಟ್ಟು ಅವಳನ್ನು ಬಿಗಿಯಾಗಿ ತಬ್ಬಿ
ಕೊಂದಿದ್ದರು. ಆದರೆ ನಾನು ಶಾರೀರಿಕ ಸಂಬಂಧಗಳನ್ನು ದೃಢವಾಗಿ ವಿರೋಧಿಸಿದ್ದೆ ಮತ್ತು ಮತ್ತು ತನ್ನನ್ನು ಹಿಂಬಾಲಿಸದಂತೆ ಕೂಡ ಎಚ್ಚರಿಸಿದ್ದೆ’ ಎಂದು ಹೇಳಿಕೆ ನೀಡಿದ್ದರು.
ಶೀಘ್ರ ಚಾರ್ಜ್ಶೀಟ್:
ದೆಹಲಿ ಪೊಲೀಸರು ಬ್ರಿಜ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ಕೋರ್ಚ್‌ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಸದ್ಯಕ್ಕೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು,
180ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ತಿಂಗಳೊಳಗೆ ಭಾರತೀಯ ಕುಸ್ತಿ ಒಕ್ಕೂಟಕ್ಕೆ (Indian wrestling Federation) ಚುನಾವಣೆ ನಡೆಯಲಿದೆ. 12 ವರ್ಷಗಳಿಂದ ಅಧಿಕಾರದಲ್ಲಿರುವ ಬ್ರಿಜಭೂಷಣ್ ಅವರು ಚುನಾವಣೆಯಲ್ಲಿ ನಿಲ್ಲುವ ಅರ್ಹತೆ ಹೊಂದಿಲ್ಲ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Takur) ಅವರೊಂದಿಗಿನ ಸಭೆಯಲ್ಲಿ ಬ್ರಿಜ್ ಕುಟುಂಬದ ಸದಸ್ಯರಲ್ಲಿ ಯಾರೂ ಸ್ಪರ್ಧಿಸುವಂತಿಲ್ಲ ಎಂದು ಷರತ್ತು ವಿಧಿಸಿದರು. ಇದಕ್ಕೆ ಕಾರಣ ಗೊತ್ತಾಗಿದೆ. ಬ್ರಿಜ್ ಕುಟುಂಬವು
ಕುಸ್ತಿ ಫೆಡರೇಶನ್‌ನಲ್ಲಿ ಬ್ರಿಜ್ ಕುಟುಂಬವು ಸುದೀರ್ಘ ಇತಿಹಾಸವನ್ನು ಹೊಂದಿದೆ.
ಇದನ್ನೂ ಓದಿ : ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
ಇತ್ತೀಚೆಗೆ ಒಲಿಂಪಿಕ್ಸ್ ಸಂಸ್ಥೆಯು ಕುಸ್ತಿ ಫೆಡರೇಶನ್‌ನ ಆಡಳಿತವನ್ನು ತಾತ್ಕಾಲಿಕ ಸಮಿತಿಗೆ ಒಪ್ಪಿಸಬೇಕಿತ್ತು ಅಲ್ಲಿಯವರೆಗೂ ಬ್ರಿಜ್ ಪುತ್ರ ಕರಣ್ ಭೂಷಣ್ ಡಬ್ಲ್ಯುಎಫ್‌ಐನ (WFI) ಉಪಾಧ್ಯಕ್ಷರಾಗಿದ್ದರು.
ಅಷ್ಟೇ ಅಲ್ಲದೆ ಅಳಿಯ ವಿಶಾಲ್ ಸಿಂಗ್ ಬಿಹಾರ(Bihar) ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇನ್ನೊರ್ವ ಅಳಿಯ ಆದಿತ್ಯ ಪ್ರತಾಪ್ ಸಿಂಗ್ ಜಂಟಿ ಕಾರ್ಯದರ್ಶಿಯಾಗಿದ್ದಾರೆ.
ರಶ್ಮಿತಾ ಅನೀಶ್