Belgaum: ಬಸ್ ಕಂಡಕ್ಟರ್ (Bus conductor) ಕನ್ನಡದಲ್ಲಿ ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮರಾಠಿ ಪುಂಡರು ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ (Big twist) ಎದುರಾಗಿದೆ, ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ (Against the conductor) POCSO ಪ್ರಕರಣ ದಾಖಲಿಸಲಾಗಿದೆ.ಬೆಳಗಾವಿ ಜಿಲ್ಲೆಯ ಸುಳೇಬಾವಿ ಗ್ರಾಮದ ಹೊರವಲಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ (KSRTC Bus Conductor) ಕನ್ನಡದಲ್ಲಿ ಆಧಾರ್ ಕಾರ್ಡ್ (Aadhaar Card) ಕೇಳಿದ್ದಕ್ಕೆ ಮರಾಠಿ ಪುಂಡರು ಹಲ್ಲೆ ನಡೆಸಿರುವ ಘಟನೆಗೆ ಟ್ವಿಸ್ಟ್ ದೊರೆತಿದೆ.

ನಿರ್ವಾಹಕ ಮಹಾದೇವಪ್ಪ ವಿರುದ್ದವೇ ಪೋಕ್ಸೋ ಕಾಯ್ದೆಯಡಿ (Under the POCSO Act) ದೂರು ದಾಖಲಾಗಿದೆ. ಬಸ್ ನಲ್ಲಿ ಕೆಟ್ಟ ದೃಷ್ಟಿಯಿಂದ ನೋಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಧು ನಿರ್ವಾಹಕ ಮಹಾದೇವಪ್ಪ ವಿರುದ್ದ ಬಾಲಕಿ ದೂರು (Complaint) ನೀಡಿದ್ದಾಳೆ.ಕನ್ನಡ ಮಾತನಾಡಿ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮಹಾದೇವ್ ಆರೋಪಿಸಿದ್ದರು. ಆ ದೂರನ್ನಾಧರಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಈ ಪ್ರಕರಣ ಎಲ್ಲೆಡೆ ಸುದ್ಧಿಯಾದ (The case became news everywhere) ಮೇಲೆ ಬಾಲಕಿ ನಿರ್ವಾಹಕನ ಮೇಲೆ ದೂರು ನೀಡಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಕನ್ನಡಪರ ಸಂಘಟನೆಗಳು ಇದರ ಕುರಿತು ಹೋರಾಟ ನಡೆಸುತ್ತಿದ್ದಾರೆ.
ಇನ್ನು ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಕಂಡಕ್ಟರ್ ಮಹಾದೇವ್ (Conductor Mahadev) ನನಗೆ ದೂರು ನೀಡಿರುವ ವಯಸ್ಸಿನ ಹುಡುಗಿಯ ವಯಸಿನಷ್ಟೆ ಮಗಳಿದ್ದಾಳೆ,ಕೇಸಿನ ದಿಕ್ಕು ತಪ್ಪಿಸಲು ಈ ತರಹದ ಸುಳ್ಳು ಕೇಸ್ (False case) ದಾಖಲು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪಂಥಬಾಳೇಕುಂದ್ರಿ ಗ್ರಾಮದ ಬಳಿಯ ಬೆಳಗಾವಿ-ಬಾಗಲಕೋಟೆ ರಸ್ತೆ (Belgaum-Bagalakot Road) ತಡೆದು ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ ನಡೆಸಿತು. ಎಂಇಎಸ್ ಪುಂಡರ ವಿರುದ್ಧ ಧಿಕ್ಕಾರ ಕೂಗಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.