Maharashtra : ಮಹಾರಾಷ್ಟ್ರದಲ್ಲಿ(Maharashtra) ಔರಂಗಾಬಾದ್ ನಲ್ಲಿ(Aurangabad) ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಹೌದು, ಈತನ ಗ್ರಹಚಾರ ಕೆಟ್ಟಿತ್ತು ಅನಿಸುತ್ತೆ.

ಯಾಕಂದ್ರೆ ಒಬ್ಬಳನ್ನು ಕರೆದುಕೊಂಡು ಈ ಯುವಕ ಬಸ್ನಿಂದ ಇಳಿಯುವ ಸಂದರ್ಭದಲ್ಲಿ, ಬಸ್ ಸ್ಟ್ಯಾಂಡ್(Bus stand) ನಲ್ಲಿದ್ದ ಮತ್ತೊಬ್ಬ ಹುಡುಗಿ ಈತನನ್ನು ನೋಡಿದ್ದಾಳೆ.
ಅಲ್ಲಿಗೆ ಅವನ ಗ್ರಹಚಾರ ಬಿಡಿಸಿದ್ದಲ್ಲದೇ, ಈ ಹುಡುಗಿಯರೇ ಪರಸ್ಪರ ಜುಟ್ಟು ಹಿಡಿದುಕೊಂಡು ಬಸ್ ಸ್ಟ್ಯಾಂಡ್ ನಲ್ಲೇ ಜಗಳ ಮಾಡಿಕೊಂಡು, ಬಿದ್ದು ಹೊರಳಾಡಿದ್ದಾರೆ!
ಹೌದು, ಒಟ್ಟೊಟ್ಟಿಗೆ ಎರಡೆರಡು ಪ್ರೇಯಸಿಯರನ್ನು ಮೆಂಟೇನ್ ಮಾಡ್ತಿದ್ದ ಈ ಭೂಪ. ಅವಳಿಗೆ ಗೊತ್ತಾಗದ ಹಾಗೆ ಇವಳನ್ನು, ಇವಳಿಗೆ ಗೊತ್ತಾಗದ ಹಾಗೆ ಅವಳನ್ನು ಸಿನಿಮಾ ಪಾರ್ಕ್, ಶಾಪಿಂಗ್(Shopping) ಎಂದು ಕರೆದುಕೊಂಡು ಹೋಗುತ್ತಿದ್ದ.
ಆಗೆಲ್ಲ ಈ ಇಬ್ಬರ ಪ್ರೇಯಸಿಯರ ಮುದ್ದಿನ ಬಾಯ್‌ಫ್ರೆಂಡ್ ಎಲ್ಲೂ ಗುಟ್ಟು ಬಿಟ್ಟು ಕೊಡ್ತಿರಲಿಲ್ಲ.
ಇದನ್ನೂ ಓದಿ : https://vijayatimes.com/homeremedies-for-pimples/
ಈಗ ಅಚಾನಕ್ ಆಗಿ ಇಬ್ಬರು ಪ್ರೇಯಸಿಯರ ಕೈಗೂ ಸಿಕ್ಕಿಬಿದ್ದಿದ್ದ ಈತನಿಗಾಗಿ, 17 ವರ್ಷದ ಹುಡುಗಿಯರಿಬ್ಬರೂ ಕಿತ್ತಾಡಿಕೊಂಡಿದ್ದಾರೆ! ಹೌದು,
ಮಹಾರಾಷ್ಟ್ರದ ಬಸ್ ಸ್ಟ್ಯಾಂಡ್ ನಲ್ಲಿ ಒಬ್ಬ ಹುಡುಗಿ ತನ್ನ ಗೆಳೆಯನೊಂದಿಗೆ ಇನ್ನೊಬ್ಬ ಹುಡುಗಿಯನ್ನು ನೋಡಿ ಶಾಕ್ ಆಗಿದ್ದಾಳೆ.
ಕೊನೆಗೆ ಕೋಪ ನೆತ್ತಿಗೇರಿ ಇಬ್ಬರೂ ಹುಡುಗಿಯರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.
ಗೆಳತಿಯರ ಕೂಗಾಟ, ಕಿತ್ತಾಟ ಜಾಸ್ತಿಯಾಗುತ್ತಿದ್ದಂತೆ ಅಲ್ಲಿ ಜನ ಸೇರಿದ್ದಾರೆ, ಈ ವೇಳೆ ಪ್ರಿಯಕರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ರೀತಿ, ಪರಸ್ಪರ ಹುಡುಗಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ ಬೆಳಕಿಗೆ ಬಂದಿದ್ದು ಇದೇ ಮೊದಲೇನಲ್ಲ.
ಈ ಮೊದಲು ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈನಲ್ಲಿ (Chennai) ಇಬ್ಬರು ಕಾಲೇಜ್ ವಿದ್ಯಾರ್ಥಿನಿಯರು ನಡು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದರು. ಜಡೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.
ಅಣ್ಣಾ ಬಸ್ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು.

ಹಾಗೇ, ಹುಬ್ಬಳ್ಳಿಯಲ್ಲಿಯೂ (Hubbali) ಕೆಲ ವರ್ಷಗಳ ಹಿಂದೆ ಯುವತಿಯರ ಬೀದಿ ಜಗಳ ಜನರಿಗೆ ಪುಕ್ಕಟೆ ಮನರಂಜನೆ ನೀಡಿತ್ತು. ಮೂವರು ಯುವತಿಯರು ನಡುರಸ್ತೆಯಲ್ಲಿ ಬಡಿದಾಡಿಕೊಂಡಿದ್ದರು. ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ಎದುರು ಜಗಳ ನಡೆದಿತ್ತು.
ಯುವತಿಯರ ಕಾದಾಟವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ನೋಡುಗರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ವೈರಲ್ (Viral) ಮಾಡಿದ್ದರು.
ಇವರು ಕಾಲೇಜು ಯುವತಿಯರಾಗಿದ್ದು, ಬಾಯ್ ಫ್ರೆಂಡ್ ವಿಚಾರಕ್ಕೆ ಮಾರಾಮಾರಿ ನಡೆದಿದೆ ಎನ್ನುವುದು ಸ್ಥಳೀಯರ ಮಾತಾಗಿತ್ತು.
ಇದನ್ನೂ ಓದಿ : https://vijayatimes.com/farming-ideas-in-finger-tips/
ಬೆಂಗಳೂರಿನಲ್ಲಿಯೂ ಇತ್ತೀಚಿಗೆ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಪ್ರತಿಷ್ಟಿತ ಶಾಲಾ ವಿದ್ಯಾರ್ಥಿನಿಯರು ತಮ್ಮ ಬಾಯ್ ಫ್ರೆಂಡ್ ಗಾಗಿ ಪರಸ್ಪರ ಕಚ್ಚಾಡಿಕೊಂಡಿದ್ದರು.
ಹೀಗೇ ನಡುರಸ್ತೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಿತ್ತಾಡಿಕೊಳ್ಳುವ ಮಟ್ಟಿಗೆ ನಮ್ಮ ಹೆಣ್ಣುಮಕ್ಕಳು ಮುಂದುವರಿದಿದ್ದಾರೆ ಎಂದರೆ ನಮ್ಮ ಸಂಸ್ಕೃತಿ ಎಲ್ಲಿಗೆ ಹೋಗಿ ಮುಟ್ಟುತ್ತಿದೆ ಎನ್ನುವುದು ಕಳವಳಕರಿಯಾದ ಸಂಗತಿಯೇ ಸರಿ.
- ಪವಿತ್ರ