Visit Channel

`ಮಹಾ’ಹೈಡ್ರಾಮಾ : ಏನಾಗಲಿದೆ ಸರ್ಕಾರದ ಭವಿಷ್ಯ? ಅಂಕಿ-ಅಂಶಗಳ ವಿವರ ಹೀಗಿದೆ!

Shivsena

ಮಹಾರಾಷ್ಟ್ರದಲ್ಲಿ(Maharashtra) ಉದ್ದವ್ ಠಾಕ್ರೆ(Uddhav Thackrey) ನೇತೃತ್ವದ ‘ಮಹಾ ವಿಕಾಸ್ ಅಘಾಡಿ’(Maha Vikas Aghadi) ಸರ್ಕಾರ ಪತನವಾಗುವ ದಿಕ್ಕಿನತ್ತ ಸಾಗುತ್ತಿದೆ. ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಪಕ್ಷಗಳ ಈ ಮೈತ್ರಿಕೂಟ ಅಲ್ಪಮತಕ್ಕೆ ಕುಸಿಯುವ ಬೀತಿಯಲ್ಲಿದೆ. ಶಿವಸೇನೆ ನಾಯಕ ಏಕನಾಥ್ ಶಿಂಧೆ(Eknath Shinde) ನೇತೃತ್ವದಲ್ಲಿ ಸುಮಾರು 33 ಶಾಸಕರು(MLA) ಬಂಡಾಯವೆದ್ದಿದ್ದಾರೆ. ಹೀಗಾಗಿ ಸರ್ಕಾರದ ಭವಿಷ್ಯ ಅತಂತ್ರವಾಗಿದೆ. ಮಹಾರಾಷ್ಟ್ರ ರಾಜಕೀಯದಲ್ಲಿ(Maharashtra Politics) ಮುಂದೆ ಏನಾಗಲಿದೆ ಎಂಬುದರ ಅಂಕಿಅಂಶಗಳ ಸಾಧ್ಯತೆ ಇಲ್ಲಿದೆ ನೋಡಿ.

CM

ಪಕ್ಷಗಳ ಬಲಾಬಲ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಬ್ಬ ಶಾಸಕ ನಿಧನ ಆಗಿರುವ ಕಾರಣ 288 ಇದ್ದ ಸಂಖ್ಯಾಬಲ 287ಕ್ಕೆ ಕುಸಿದಿದೆ. ಹೀಗಾಗಿ ಸರಳ ಬಹುಮತಕ್ಕೆ 144 ಸದಸ್ಯರ ಮತ ಬೇಕು. ಬಿಜೆಪಿ 135 ಸದಸ್ಯರ ಬಲ ಹೊಂದಿದ್ದರೆ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲ 152. ಆದರೆ ಇದೀಗ ಪಕ್ಷೇತರರು ಸೇರಿದಂತೆ ಸುಮಾರು 33 ಶಾಸಕರು ಬಂಡಾಯವೆದ್ದಿರುವ ಕಾರಣ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲ 114ಕ್ಕೆ ಕುಸಿದಿದೆ.

ಸಾಧ್ಯತೆ – 1
33 ಬಂಡಾಯ ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ 119 ಮತ ದೊರೆಯುತ್ತದೆ. 144ರ ಸರಳ ಬಹುಮತ ಪಡೆಯದೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನ ಹೊಂದುತ್ತದೆ.

Shivsena

ಸಾಧ್ಯತೆ 2
ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ 33 ಶಾಸಕರಿಗೆ ಅನರ್ಹತೆ ಬೀತಿ ಇರುತ್ತದೆ. ಹೀಗಾಗಿ ಅವರೆಲ್ಲರೂ ರಾಜೀನಾಮೆ ನೀಡಬಹುದು. ಆಗ ಸದನದ ಬಲ 287ರಿಂದ 254ಕ್ಕೆ ಇಳಿಯುತ್ತದೆ. ಸರಳ ಬಹುಮತಕ್ಕೆ 127 ಮತ ಬೇಕಾಗುತ್ತದೆ. ಆಗ 135 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಅಧಿಕಾರ ಸಿಗಲಿದೆ.

ಸಾಧ್ಯತೆ 3
ಬಂಡಾಯ ಶಾಸಕರು ಪಕ್ಷಾಂತರ ಮಾಡಲು ಮುಂದಾಗಿದ್ದಾರೆ. ಪಕ್ಷಾಂತರಕ್ಕೆ 55 ಶಿವಸೇನೆ ಸದಸ್ಯರ ಪೈಕಿ 37 ಶಾಸಕರ ಬೆಂಬಲ ಬೇಕಾಗುತ್ತದೆ. 37 ಶಾಸಕರು ಬೆಂಬಲ ನೀಡಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಅನರ್ಹತೆ ಭೀತಿಯೂ ಇರುವುದಿಲ್ಲ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಒಂದು ಪಕ್ಷದ 3ನೇ ಎರಡು ಭಾಗದಷ್ಟು ಶಾಸಕರು ಪಕ್ಷ ತೊರೆದಲ್ಲಿ ಅದು ಪಕ್ಷಾಂತರವಾಗುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.