• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಉಡುಪಿಯಲ್ಲಿ ಗದ್ದುಗೆ ಗುದ್ದಾಟ! ಹಾಲಿ ಶಾಸಕರ ವಿರುದ್ಧವೇ ಎದ್ದಿದೆ ವಿರೋಧದ ಅಲೆ !

Pankaja by Pankaja
in ರಾಜಕೀಯ, ರಾಜ್ಯ
ಉಡುಪಿಯಲ್ಲಿ ಗದ್ದುಗೆ ಗುದ್ದಾಟ! ಹಾಲಿ ಶಾಸಕರ ವಿರುದ್ಧವೇ ಎದ್ದಿದೆ ವಿರೋಧದ ಅಲೆ !
0
SHARES
121
VIEWS
Share on FacebookShare on Twitter

Udupi : ಉಡುಪಿಯಲ್ಲಿ ಗದ್ದುಗೆ ಗುದ್ದಾಟ! ಯಾರಾಗ್ತಾರೆ MLA? ಉಡುಪಿ ಮಂದಿ ಬದಲಾವಣೆ ಬಯಸ್ತಿದ್ದಾರಾ?ಉಡುಪಿಯಲ್ಲಿ ಅರುಳುತ್ತಾ ಕಮಲ? ಕೈ ಕೇಕೇ ಹಾಕುತ್ತಾ? ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ (Udupi Assembly Constituency) ವಿಚಿತ್ರ ಪರಿಸ್ಥಿತಿ ಉದ್ಭವಿಸಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕನ ಗದ್ದುಗೆಗೇರಲು ಚುನಾವಣಾ ಕಣದಲ್ಲಿ ಆಕಾಂಕ್ಷಿಗಳ ದಂಡೇ ರೆಡಿಯಾಗಿದೆ.

udupi assembly election

ಅದ್ರಲ್ಲೂ ಬಿಜೆಪಿ (BJP) ಪಕ್ಷದಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಾದಾಟ ಮಾಡುತ್ತಿದ್ದಾರೆ. ರಘುಪತಿ ಭಟ್ರ ವಿರುದ್ಧ ವಿರೋಧಿ ಅಲೆ !

ಪ್ರಸ್ತುತ ಉಡುಪಿ ವಿಧಾನಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ರಘುಪತಿ ಭಟ್ರು ಕಳೆದ ಐದು ವರ್ಷ ಉಡುಪಿಯನ್ನು ಆಳಿದ್ದಾರೆ.

ಈ ಹಿಂದೆ 2003 ಹಾಗೂ 2008ರ ಚುನಾವಣೆಯನ್ನೂ ರಘುಪತಿ ಭಟ್ರು ಗೆದ್ದು ಬೀಗಿದ್ರು.

ಆದ್ರೆ 2013ರಲ್ಲಿ ಮಾತ್ರ ಪ್ರಮೋದ್‌ ಮದ್ವರಾಜ್‌ (Pramod Madhwaraj) ಅವರು ಕಾಂಗ್ರೆಸ್‌ ಶಾಸಕನಾಗಿ ಆಯ್ಕೆಯಾಗಿದ್ರು. ಆದ್ರೆ ಈ ಬಾರಿ ರಘುಪತಿ ಭಟ್ರು ಮತ್ತೆ ಚುನಾವಣಾ ಕಣಕ್ಕಿಳಿಯುತ್ತಾರಾ ಅನ್ನೋ ಅನುಮಾನ ಕಾಡಲಾರಂಭಿಸಿದೆ.

ಇದಕ್ಕೆ ಕಾರಣ ಇವರ ವಿರುದ್ಧ ಎದ್ದಿರುವ ವಿರೋಧಿ ಅಲೆ. ರಘುಪತಿ ಭಟ್ರ ಆಡಳಿತ ವೈಖರಿ ಸ್ಥಳೀಯ ಬಿಜೆಪಿ ಮಾತ್ರವಲ್ಲ ಜನರಲ್ಲೂ ಅಸಮಾಧಾನ ಸೃಷ್ಟಿಸಿದೆ.

ಇದನ್ನೂ ಓದಿ : https://vijayatimes.com/karnataka-assembly-election2023/

ಅಕ್ರಮ ಮರಳುಗಾರಿಕೆ, ಕಲ್ಲುಗಣಿಗಾರಿಕೆ, ಇಸ್ಪೀಟ್‌ ದಂಧೆ, ಮಟ್ಕಾ, ಡ್ರಗ್ಸ್‌ ಮುಂತಾದ ಮಾಫಿಯಾವನ್ನು ಮಟ್ಟ ಹಾಕುವಲ್ಲಿ ಶಾಸಕರು ವಿಫಲರಾಗಿದ್ದಲ್ಲದೆ, ಅವರಿಗೆ ಬೆಂಬಲ ಕೊಟ್ರು ಅನ್ನೋ ಆರೋಪ ಜನರದ್ದು.

ರಘುಪತಿ ಭಟ್ರು (Raghupathi Bhatru) ಆಳ್ವಿಕೆಯಲ್ಲಿ ಉಡುಪಿ ಸರ್ಕಾರಿ ಕಚೇರಿಗಳು ಅಕ್ರಮಗಳ ಆಗರವಾಯಿತು. ಭ್ರಷ್ಟ ಅಧಿಕಾರಿ ಆರ್ಭಟಕ್ಕೆ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ,

udupi assembly election


ಭಟ್ರ ಪೋಗ್ರೆಸ್‌ ರಿಪೋರ್ಟ್‌ ಹೇಗಿದೆ? : ರಘುಪತಿ ಭಟ್ರು ಕಳೆದ ಬಾರಿ ಮೋದಿ ಅಲೆ ಹಾಗೂ ಕರಾವಳಿಯಲ್ಲಿರುವ ಹಿಂದುತ್ವದ ವ್ಯಾಮೋಹದಿಂದ ಸುಲಭವಾಗಿ (udupi assembly election) ಗೆದ್ದು ಗದ್ದುಗೆಗೇರಿದ್ರು.

ಹಾಗಾಗಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿ, ಕೇವಲ ಹಿಜಾಬ್‌, ಹಿಂದೂ, ಮುಸ್ಲಿಂ ವಿಷಯವನ್ನು ಮುಂದಿಟ್ಟುಕೊಂಡು ಜನರ ಭಾವನೆಗಳನ್ನು ಕೆರಳಿಸಿದ್ದಾರೆ, ಅಲ್ಲದೆ ರಘುಪತಿ ಭಟ್ರು ಇನ್ನೂ ಅನೇಕ ವಿವಾದಗಳಿಗೆ ಗುರಿಯಾಗಿದ್ರು.


ಉಡುಪಿ ಶಾಸಕರ ಪ್ರೋಗ್ರೆಸ್‌ ಕಾರ್ಡ್‌ :
ರಸ್ತೆ – 80%
ನೀರು – 60%
ಆರೋಗ್ಯ – 50%
ಶಿಕ್ಷಣ – 40%
ಉದ್ಯೋಗ – 30%
ಜನಸ್ಪಂದನೆ – 30 %

udupi assembly election


ಇದನ್ನೂ ಓದಿ : https://vijayatimes.com/hd-revanna-statement/

ಒಟ್ಟಾರೆ ನೋಡುವುದಾದ್ರೆ ಉಡುಪಿ ಶಾಸಕರು ಮಾಡಿರುವ ಪ್ರಗತಿ ಕಾರ್ಯಗಳು ಜನರಿಗೆ ಏನೇನೂ ತೃಪ್ತಿ ನೀಡಿಲ್ಲ.

ರಘುಪತಿ ಭಟ್ರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್‌ಗೂ (High Command) ಅಸಮಾಧಾನ ಇದೆ. ಹಾಗಾಗಿ ಬಿಜೆಪಿ ಇಲ್ಲಿ ಬೇರೆ ಪ್ರಬಲ ನಾಯಕನನ್ನು ಕಣಕ್ಕಿಳಿಸಲಿದೆ ಅನ್ನೋ (udupi assembly election) ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ.

ಈ ಪೈಕಿ ಉಡುಪಿ ನಗರಸಭಾ ಅಧ್ಯಕ್ಷರಾಗಿದ್ದ ವಿಜಯ್‌ ಕೊಡವೂರ್ ಅವರ ಹೆಸರು ಮೇಲ್ಪಂಕ್ತಿಯಲ್ಲಿದೆ.

ವಿಜಯಕೊಡವೂರ್‌ ಅವರು ಸಂಘಪರಿವಾರದ ಸಕ್ರೀಯ ಹಾಗೂ ಮುಂಚೂಣಿಯಲ್ಲಿರುವ ಕಾರ್ಯಕರ್ತ, ತಮಗೆ ಅವಕಾಶ ಸಿಕ್ಕರೆ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಿದ್ಧನಿದ್ದನಿದ್ದೇನೆ ಎನ್ನುತ್ತಾರೆ ವಿಜಯ್‌ ಕೊಡವೂರ್‌.

congress

ಇನ್ನು ಕಾಂಗ್ರೆಸ್‌ಗೆ (Congress) ಗುಡ್‌ ಬೈ ಹೇಳಿ ಬಿಜೆಪಿ ಸೇರಿರುವ ಪ್ರಮೋದ್‌ ಮದ್ವರಾಜ್‌ ಅವರೂ ಸಹ ತಾನೂ ಎಂಎಲ್‌ಎ ಟಿಕೆಟ್‌ ಆಕಾಂಕ್ಷಿ ಅಂತ ಘೋಷಿಸಿಕೊಂಡಿದ್ದಾರೆ.

ಇವರ ಜೊತೆ ಜೊತಗೆ ಬಿಜೆಪಿ ಟಿಕೆಟ್‌ಗಾಗಿ ಗಣೇಶ್‌ ನಾಯಕ್‌, ಯಶಪಾಲ್‌ ಸುವರ್ಣ, ಉದಯಕುಮಾರ್‌ ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ, ದಿನಕರ್‌ ಶೆಟ್ಟಿ ಹೀಗೆ ಅನೇಕರು ತೆರೆಮರೆಯ ಕಸರತ್ತು ಮಾಡುತ್ತಿದ್ದಾರೆ.


ಕೈ ಮತ್ತೆ ಚಮತ್ಕಾರ ಮಾಡುತ್ತಾ? :

ಉಡುಪಿ ಕ್ಷೇತ್ರವನ್ನು ತನ್ನ ಮುಷ್ಠಿಯೊಳಗೆ ಸೇರಿಸಬೇಕು ಅಂತ ಕಾಂಗ್ರೆಸ್‌ ಭಾರೀ ಪ್ರಯತ್ನ ಮಾಡುತ್ತಿದೆ.

ದುರಂತ ಅಂದ್ರೆ ಉಡುಪಿಯಲ್ಲಿ ಬಿಜೆಪಿಯ ಸ್ಪರ್ಧೆಯನ್ನು ಸಮಬಲದಿಂದ ಎದುರಿಸುವ ಶಕ್ತಿ ಹೊಂದಿರುವ ನಾಯಕರೇ ಕಾಣಿಸುತ್ತಿಲ್ಲ.

ಆದ್ರೂ ಅಭಿವೃದ್ಧಿ ಹಾಗೂ ಸಾಮರಸ್ಯದ ಮಂತ್ರವನ್ನು ಮುಂದಿಟ್ಟು ಕಾಂಗ್ರೆಸ್‌ ಮತಬೇಟೆ ಪ್ರಾರಂಭಿಸಿದೆ.

ಇದನ್ನೂ ಓದಿ : https://vijayatimes.com/karnataka-assembly-election2023/

ಉಡುಪಿಯಲ್ಲಿ ಇನ್ನೂ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿಲ್ಲ. ಅದ್ರೆ ಕಣದಲ್ಲಿ ಪ್ರಸಾದ್ ಕಾಂಚನ್‌,

ರಮೇಶ್ ಕಾಂಚನ್‌, ಕೃಷ್ಛಮೂರ್ತಿಯವರು ಇದ್ದಾರೆ, ಇವರ ಪೈಕಿ ಪ್ರಸಾದ್‌ ಕಾಂಚನ್‌ ಟಿಕೆಟ್‌ ಸಿಗುತ್ತೆ ಅನ್ನೋ ಉತ್ಸಾಹದಲ್ಲಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.

ಇಲ್ಲಿ ಉಳಿದ ಪಕ್ಷಗಳತ್ತ ಜನರ ಒಲವು ಅಷ್ಟೊಂದು ಇಲ್ಲ. ಅವರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇದೆ.

ಜಾತಿ ಲೆಕ್ಕಾಚಾರ ಹೇಗಿದೆ? :

ಇನ್ನು ಉಡುಪಿ ಕ್ಷೇತ್ರದ ಜಾತಿಲೆಕ್ಕಾಚಾರ ನೋಡುವುದಾದ್ರೆ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,95,000 ಮತದಾರರಿದ್ದಾರೆ.
ಜಾತಿವಾರು ಲೆಕ್ಕಾಚಾರ (ಸರಾಸರಿ)
ಬಿಲ್ಲವರು 75,000
ಮೊಗವೀರರು 48,000
ಬಂಟ್ಸ್ 45,000
ಮುಸ್ಲಿಂ 19,000
ಬ್ರಾಹ್ಮಣರು 38,000
ಎಸ್ ಸಿ -ಎಸ್ ಟಿ 36,000
ಕ್ರೈಸ್ತರು 18,000
ಇತರು 16000

ಇದನ್ನೂ ಓದಿ : https://vijayatimes.com/bjp-strategy-in-mysore/


ಜಾತಿ ಲೆಕ್ಕಾಚಾರದಲ್ಲಿ ಬಿಲ್ಲವರ ಮತ ಅತ್ಯಂತ ಪ್ರಮುಖವಾಗುತ್ತೆ. ಅದರ ಜೊತೆ ಬ್ರಾಹ್ಮಣರು, ಮೊಗವೀರರು, ಬಂಟ್ಸ್‌ ಮತಗಳು ನಿರ್ಣಾಯಕವಾಗುತ್ತೆ.

ಆದ್ರೆ ಉಡುಪಿ ಜನತೆ ಈ ಬಾರಿಯೂ ಹಿಂದುತ್ವ ಹಾಗೂ ಮೋದಿ ಮುಖ ನೋಡಿ ಮತ ಹಾಕ್ತಾರಾ ಅಥವಾ ಅಭಿವೃದ್ಧಿ, ಸಾಮರಸ್ಯ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮಣೆ ಹಾಕ್ತಾರಾ? ನೋಡೋಣ

Tags: bjpCongressKarnatakapolitical

Related News

ಜೂನ್ 2 ರಿಂದ 11ರ ವರೆಗೆ ಲಾಲ್​ಬಾಗ್​ನಲ್ಲಿ ನಡೆಯಲಿದೆ ವಾರ್ಷಿಕ ಮಾವು ಮೇಳ
ಪ್ರಮುಖ ಸುದ್ದಿ

ಜೂನ್ 2 ರಿಂದ 11ರ ವರೆಗೆ ಲಾಲ್​ಬಾಗ್​ನಲ್ಲಿ ನಡೆಯಲಿದೆ ವಾರ್ಷಿಕ ಮಾವು ಮೇಳ

May 31, 2023
ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC
Vijaya Time

ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

May 31, 2023
ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರ ಹೀನರಿಗೆ ಹೇಳುವುದು ಇಷ್ಟೇ – ಎಚ್ಡಿಕೆ
Vijaya Time

ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರ ಹೀನರಿಗೆ ಹೇಳುವುದು ಇಷ್ಟೇ – ಎಚ್ಡಿಕೆ

May 31, 2023
ಇಂದು ಬೆಳಿಗ್ಗೆ ಕರ್ನಾಟಕದಾದ್ಯಂತ ಲೋಕಾಯುಕ್ತ ದಾಳಿ: ಅನೇಕ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಯಲ್ಲಿ ದಾಖಲೆ ಪರಿಶೀಲನೆ
Vijaya Time

ಇಂದು ಬೆಳಿಗ್ಗೆ ಕರ್ನಾಟಕದಾದ್ಯಂತ ಲೋಕಾಯುಕ್ತ ದಾಳಿ: ಅನೇಕ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಯಲ್ಲಿ ದಾಖಲೆ ಪರಿಶೀಲನೆ

May 31, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.