• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಯುಕೆನಲ್ಲಿ ‘ಹರಿ ಹರ ವೀರ ಮಲ್ಲು’ ಪ್ರದರ್ಶನಕ್ಕೆ ಅಡ್ಡಿ: ಪವನ್ ಅಭಿಮಾನಿಗಳ ಉದ್ದಟತನಕ್ಕೆ ಥಿಯೇಟರ್‌ ಮಾಲೀಕರ ಖಂಡನೆ

Shwetha Mohan by Shwetha Mohan
in ಮನರಂಜನೆ, ವಿಜಯ ಟೈಮ್ಸ್‌
ಯುಕೆನಲ್ಲಿ ‘ಹರಿ ಹರ ವೀರ ಮಲ್ಲು’ ಪ್ರದರ್ಶನಕ್ಕೆ ಅಡ್ಡಿ: ಪವನ್ ಅಭಿಮಾನಿಗಳ ಉದ್ದಟತನಕ್ಕೆ ಥಿಯೇಟರ್‌ ಮಾಲೀಕರ ಖಂಡನೆ
0
SHARES
16
VIEWS
Share on FacebookShare on Twitter
  • ಪವನ್ ಅಭಿಮಾನಿಗಳ ಶಿಸ್ತಿಲ್ಲದ ವರ್ತನೆಗೆ ಯುಕೆ ಥಿಯೇಟರ್ ಮಾಲೀಕರ ಬೇಸರ
  • ಯುಕೆನಲ್ಲಿ ಅರ್ಧಕ್ಕೆ ನಿಂತ ಪವನ್ ಕಲ್ಯಾಣ್ ಚಿತ್ರ ಶೋ
  • ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

United Kingdom: ಆಂಧ್ರ ಪ್ರದೇಶದ ಡಿಸಿಎಂ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್(Pawan Kalyan) ನಟನೆಯ ಬಹುನಿರೀಕ್ಷಿತ ಚಲನಚಿತ್ರ ಹರಿ ಹರ ವೀರ ಮಲ್ಲು(Hari Hara Veera Mallu) ವಿಶ್ವದಾದ್ಯಂತ ಬಿಡುಗಡೆಗೊಂಡಿದೆ.

ಬಹು ದಿನಗಳ ಬಳಿಕ ತೆರೆಗೆ ಬಂದಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ ಸ್ಪಂದನೆ ಸಿಕ್ಕಿದ್ದು, ನಿರೀಕ್ಷೆಯಂತೆ ಯುನೈಟೆಡ್ ಕಿಂಗ್‌ಡಮ್‌ನಲ್ಲೂ ಅದ್ದೂರಿಯಾಗಿ ಬಿಡುಗಡೆಯಾಯಿತು.

ಆದರೆ, ಲಂಡನ್‌ನ(London) ಒಂದು ಥಿಯೇಟರ್‌ನಲ್ಲಿ ಉಂಟಾದ ಅವ್ಯವಸ್ಥೆ ಚಿತ್ರಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಪವನ್ ಕಲ್ಯಾಣ್ ಅಭಿಮಾನಿಗಳ ಬೃಹತ್ ಸಮೂಹ ಚಿತ್ರದ ಪ್ರದರ್ಶನ ಸಮಯದಲ್ಲಿ ಥಿಯೇಟರ್‌ನಲ್ಲಿ ಗಲಾಟೆ ನಡೆಸಿದ್ದು, ಪೇಪರ್‌ಗಳನ್ನ ಎಸೆಯುವುದು, ಜೋರಾಗಿ ಕೂಗುವುದು ಮತ್ತು ಕುರ್ಚಿಗಳ ಸುತ್ತ ಹಬ್ಬಾಡುವುದು ಮುಂತಾದ ವರ್ತನೆ ತೋರುವುದು ಆರಂಭಿಸಿದರು.

UK Theater owner angry
Arrogance of Pawan fans

ಈ ಹಂಗಾಮಾದಿಂದ ಚಿತ್ರಮಂದಿರದ ವಾತಾವರಣ ಸಂಪೂರ್ಣ ಕಿರಿಕಿರಿಯಾಗಿದ್ದು, ನಿರ್ವಾಹಕರು ಶೋ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಿದರು.

ಇನ್ನು ಥಿಯೇಟರ್ ಸಿಬ್ಬಂದಿ(Theater staff) ಶಿಸ್ತಿನ ಕೊರತೆಯಿಂದ ಬೇಸತ್ತು, ಕೆಲ ಅಭಿಮಾನಿಗಳಿಗೆ ಉಗ್ರ ಎಚ್ಚರಿಕೆ ನೀಡಿದ್ದಾರೆ. “ಈ ರೀತಿ ವರ್ತನೆ ಒಪ್ಪಲು ಸಾಧ್ಯವಿಲ್ಲ. ಥಿಯೇಟರ್‌ ಯಾವ ಸ್ಥಳದಲ್ಲಿದ್ದರೂ ಸಹ,

ಪ್ರವೇಶ ಹೊಂದಿದ ಪ್ರತಿಯೊಬ್ಬರು ಅತಿಥಿಗಳು. ಅವರು ಸಂಯಮದಿಂದ ನಡೆದುಕೊಳ್ಳಬೇಕು” ಎಂದು ಸ್ಥಳೀಯ ನಿರ್ವಾಹಕರು ತಿಳಿಸಿದ್ದಾರೆ.ಈ ಘಟನೆಯಿಂದ ಪವನ್ ಅಭಿಮಾನಿಗಳ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ(social networks) ಟೀಕೆಗಳು ಹರಿದುಬರುತ್ತಿವೆ.

ಈ ಸಂಬಂಧ ವಿಡಿಯೋಗಳು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಒಬ್ಬ ನೆಟ್ಟಿಗ “ದಕ್ಷಿಣ ಭಾರತೀಯ ಸಂಭ್ರಮಾಚರಣೆಯ ಶೈಲಿಯು ಯುಕೆ ಸಂಸ್ಕೃತಿಗೆ ಹೊಂದಿಕೆಯಾಗದು.

ಚಿತ್ರಮಂದಿರದೊಳಗೆ ಕಸ ಎಸೆಯುವುದು, ಗಲಾಟೆ ಮಾಡುವುದು ಕೆಟ್ಟವರ್ತನೆ ” ಎಂದು ಪೋಸ್ಟ್ ಮಾಡಿದ್ದಾರೆ.

ಈ ಘಟನೆ ಪವನ್ ಕಲ್ಯಾಣ್ ಅವರ ಚಲನಚಿತ್ರದ ಅಭಿಮಾನಿಗಳಿಗೆ ಕೆಟ್ಟ ಹೆಸರು ತಂದಿದೆ . ವಿಭಿನ್ನ ರಾಷ್ಟ್ರಗಳಲ್ಲಿ ನಡೆಯುವ ಚಿತ್ರ ಪ್ರದರ್ಶನಗಳ ಸಮಯದಲ್ಲಿ ಸ್ಥಳೀಯ ನಿಯಮ,

ಸಂಸ್ಕೃತಿಗಳನ್ನು ಗೌರವಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಪವನ್ ಕಲ್ಯಾಣ್ ಅವರು ಜನಸೇನೆ ನಾಯಕನಾಗಿ ಶಿಸ್ತಿನ ಪ್ರತೀಕವಾಗಿ ಗುರುತಿಸಲ್ಪಟ್ಟಿದ್ದಾರೆ.

ಆದರೆ ಅವರ ಅಭಿಮಾನಿಗಳಿಂದ ಈ ರೀತಿಯ ಅಹಿತಕರ ಘಟನೆಗಳು ಸಂಭವಿಸುತ್ತಿದ್ದರೆ, ಅದು ಅವರ ಪಾತ್ರಕ್ಕೂ ಧಕ್ಕೆ ತರಬಹುದು.

ಯುಕೆ ಚಿತ್ರದ ಡಿಸ್ಟ್ರಿಬ್ಯೂಟರ್‌ಗಳು ಹಾಗೂ ಥಿಯೇಟರ್ ಮಾಲೀಕರು(Theater owner) ಮುಂದಿನ ದಿನಗಳಲ್ಲಿ ಪವನ್ ಸಿನಿಮಾಗಳ ಪ್ರದರ್ಶನ ಕಾಣುವುದೇ ಅನುಮಾನ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಇದೊಂದು ಎಚ್ಚರಿಕೆ ಕೂಡ ಆಗಿದ್ದು ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನು ಗೌರವಿಸುವಂತೆಯೇ, ಸಾರ್ವಜನಿಕ ಸ್ಥಳದಲ್ಲಿ ಸಂಯಮದಿಂದ ವರ್ತಿಸಬೇಕಿದೆ.

ಇದನ್ನು ಓದಿ : ಹೊಸ ಭವಿಷ್ಯ ನಿರ್ಮಾಣಕ್ಕೆ ಕೈ ಜೋಡಿಸಿದ ಭಾರತ-ಬ್ರಿಟನ್: ಉದ್ಯೋಗ ಸೃಷ್ಟಿ, ಬೆಲೆ ಇಳಿಕೆಯ ಭರವಸೆ ನೀಡಿದ ಮುಕ್ತ ವ್ಯಾಪಾರ ಒಪ್ಪಂದ

ಈ ರೀತಿಯ ಘಟನೆಗಳು ಮುಂದಿನ ಪ್ರದರ್ಶನಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದು ಸ್ಪಷ್ಟವಾಗಿದೆ.

Tags: Hari Hara Veera MalluLondonmoviePawan KalyanUnited Kingdomvijaya times

Related News

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಮುಖ ಸುದ್ದಿ

ತಟ್ಟೆ ಬಡಿಯಿರಿ ಇಂದ ಬಂಗಾರ ತ್ಯಜಿಸಿ : ಇದು ಮೋದಿ ಮ್ಯಾಜಿಕ್ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ

May 16, 2026
ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ
ಪ್ರಮುಖ ಸುದ್ದಿ

ಸರ್ಕಾರದ ವಿರುದ್ಧ ಕಿಡಿ ಕಾರಿದ ಸಾರಿಗೆ ನೌಕರರು: ಮೇ 19ಕ್ಕೆ ಬಸ್ ಬಂದ್,ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ

May 16, 2026
ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ
ದೇಶ-ವಿದೇಶ

ಬೈನಾನ್ಸ್‌ನಲ್ಲಿ ಕ್ರಿಪ್ಟೋ ಸುರಕ್ಷತೆ: ಹ್ಯಾಕರ್‌ಗಳಿಂದ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಈ 7 ಕ್ರಮಗಳ ಪಾಲಿಸಿ

May 16, 2026
ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್
ದೇಶ-ವಿದೇಶ

ಮಧ್ಯಪ್ರಾಚ್ಯ ಉದ್ವಿಗ್ನತೆ: ಅಮೆರಿಕ ವಿಶ್ವಾಸಾರ್ಹವಲ್ಲ, ಭಾರತದಿಂದ ಮಾತ್ರ ಶಾಂತಿ ಸಾಧ್ಯ ಎಂದ ಇರಾನ್

May 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.