Anekal: ಇಂದಿನ ಶಿಕ್ಷಣ ಕ್ಷೇತ್ರದಲ್ಲಿ (Education Sector) ಯಾವ ರೀತಿಯ ಘಟನೆಗಳು ನಡೆಯುತ್ತವೆ ಎಂಬುವುದನ್ನು ಊಹಿಸುವುದು ಕೂಡಾ ಕಷ್ಟ ಎನ್ನುವ ಪರಿಸ್ಥಿತಿ ಇಂದು ಎದುರಾಗಿದೆ. ಅದರಂತೆಯೇ ಊಹೆಗೂ (UKG student failed) ನಿಲುಕದ ಒಂದು ಘಟನೆ ನಡೆದಿದದೆ.
ಯುಕೆಜಿ (UKG) ಓದುತ್ತಿದ್ದ ಮಗುವನ್ನು (Children) ಫೇಲ್ ಮಾಡಲಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬ್ಲೇ ಬೇಕು ಯಾಕೆಂದರೆ ಇದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ(Electronic City) ಆನೇಕಲ್ನಲ್ಲಿ ನಡೆದ ನಿಜವಾದ ಘಟನೆ.
ಖಾಸಗಿ ಶಾಲೆಗಳಿಗೆ ಪೋಷಕರು ಲಕ್ಷ ಲಕ್ಷ ದೇಣಿಗೆ ಕೊಟ್ಟು ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಿದರೂ ಕೂಡ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷನ ಸಿಗುತ್ತಿಲ್ಲ ಎಂಬುವುದು ಹೆಚ್ಚಿನ ಪೋಷಕರ ಅಳಲಾಗಿದೆ.
ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ.
ಆದರೆ ಶಿಕ್ಷಣ ಎಂದರೇನು ಎಂದು ಸಂಪೂರ್ಣವಾಗಿ ಅರಿಯದ ,ಏನೂ ತಿಳಿಯದ ಮಗುವನ್ನು ಫೇಲ್(Fail) ಮಾಡಲಾಗಿದೆ ಎಂಬುವು ನಿಜಕ್ಕೂ ನಾಚಿಕೆಗೇಡಿನ ವಿಷಯ.
ಈ ವಿಷಯವು ಭಾರೀ ಚರ್ಚೆಯಾಗುತ್ತಿದ್ದಂತೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್(Suresh Kumar) ಈ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ(St Joseph Chaminade Academy) ನಡೆದಿದೆ ಎನ್ನುವುದಕ್ಕಿಂತ ಎಡವಟ್ಟು ನಡೆದಿದೆ ಎನ್ನಬಹುದು.
ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆ ಮಗುವಿನ ಹೆಸರು ಬಿ.ನಂದಿನಿ(B Nandini).ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ಟೀಟ್‌ಗಳ ಸರಮಾಲೆಯೇ ಆರಂಭವಾಗಿದೆ.
ಆ ಮಗುವಿನ ಪೋಷಕರಿಗೂ ಕೂಡ ಯಾವ ರೀತಿ ಪ್ರತಿಕ್ರೀಯೆ ನೀಡಬೇಕೆಂದು ತಿಳಿಯದಾಗಿತ್ತು.
ಇದನ್ನೂ ಓದಿ: ಉದ್ಯೋಗವಕಾಶ: ರಾಜ್ಯ ಕಂದಾಯ ಇಲಾಖೆಯಲ್ಲಿ 2000 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಿಜವಾಗಲೂ ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರ
ಸೆಂಟ್ ಜೋಸೆಪ್ ಚಾರ್ಮಿನೆಡ್ ಶಾಲೆಗೆ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜಯಲಕ್ಷ್ಮಿ(Jayalakshmi) ನೋಟೀಸ್ ಜಾರಿಮಾಡಿದ್ದಾರೆ. ಇದು ಶಿಕ್ಷಣ ಇಲಾಖೆಗೆ ಮುಜುಗರ ತರುವಂತ ವಿಚಾರವಾಗಿದೆ.
ಹಾಗಾಗಿ ಸಂಪೂರ್ಣ ಲಿಖಿತ ವಿವರಣೆಯನ್ನು ನೀಡಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ತಪ್ಪಿದ್ದಲ್ಲಿ ನಿಮ್ಮ ಶಾಲೆಗೆ ನೀಡಿರುವಂತಹ ಅನುಮತಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ(Social Media) ಯುಕೆಜಿ ಮಗುವನ್ನು ಯಾಕೆ ಅನುತ್ತೀರ್ಣ ಮಾಡಿದ್ದೀರಿ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಶಾಲಾ ನಿಯಮಾನುಸಾರವಾಗಿ 9ನೇ ತರಗತಿಯವರೆಗೆ ಅನುತ್ತೀರ್ಣ ಮಾಡುವಂತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿರುವಾಗ ಈ ಶಾಲೆಯವರಿಗೆ ತಿಳಿದಿರಲಿಲ್ಲವೇ?
ಈ ಕುರಿತು ಕ್ರಮಕೈಗೊಂಡ ಶಿಕ್ಷಣ ಅಧಿಕಾರಿ
ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್,ಆನೇಕಲ್ ತಾಲೂಕು ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದೇನೆ ,ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ವ್ಯಂಗ್ಯವಾಗಿ ಟ್ವೀಟ್(Tweet) ಮಾಡಿದ್ದಾರೆ.
ಆ್ಯಪ್‌ನಿಂದ ಉಂಟಾಯ್ತಾ ಗೊಂದಲ?
ಇದರ ಕುರಿತು ವಿಚಾರಣೆಯಾದಾಗ ಆ್ಯಪ್(App) ದೋಷದಿಂದ ಪೋಷಕರು ಮತ್ತು ಮಕ್ಕಳಲ್ಲಿ ಗೊಂದಲ ಉಂಟಾಗಿದೆ ವಿದ್ಯಾರ್ಥಿನಿಯನ್ನು ಫೇಲ್ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.
ದೋಷ ಪೂರಿತ ಈ ಆ್ಯಪ್ ಅನ್ನು ಇನ್ನು ಮುಂದೆ ನೀಷೇಧ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಿರು ಪರೀಕ್ಷೆ ರೈಮ್ಸ್ ವಿಷಯದಲ್ಲಿ ಕಡಿಮೆ ಅಂಕ ಪಡೆದಿರುವ ಬಗ್ಗೆ ಪೋಗ್ರೆಸ್ ರಿಪೋರ್ಟ್ ನಲ್ಲಿ ಉಲ್ಲೆಖ ಮಾಡಲಾಗಿದೆ ಅಷ್ಟೇ ಎಂದು ತಿಳಿಸಿದ್ದಾರೆ. ಟೀಚ್ ಮೆಟ್ ಆ್ಯಪ್(Teach Met App) ಶಿಕ್ಷಣ ಸಂಯೋಜಕ ದತ್ತಗುರು ನಿಷೇಧಕ್ಕೆ ಸೂಚನೆಯನ್ನು ಸಹ ನೀಡಿದ್ದಾರೆ.
- ರಶ್ಮಿತಾ ಅನೀಶ್