ಕಳೆದ ಎರಡು ದಿನಗಳಿಂದ ಉಕ್ರೇನ್-ರಷ್ಯಾ ಸಂಘರ್ಷದಿಂದ ಸಂಚಲನ ಸೃಷ್ಠಿಯಾಗಿದ್ದು, ರಷ್ಯಾ ಸೈನ್ಯವು ಉಕ್ರೇನ್ ನ ರಾಜಧಾನಿ ಕೀವ್ ಆಕ್ರಮಣ ಮಾಡಿದೆ. ಈ ಆತಂಕದ ನಡುವೆ ಉಕ್ರೇನ್ ವಿದೇಶಾಂಗ ಸಚಿವಾಲಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಧ್ಯಸ್ಥಿಕೆ ವಯಿಸಲು ಮನವಿ ಮಾಡಿಕೊಂಡಿದೆ. ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಹಲವು ರಾಷ್ಟ್ರಗಳು ಅಮೇರಿಕಾ, ಯುರೋಪಿಯನ್ ಯುನಿಯನ್ , ನ್ಯಾಟೋ ರಾಷ್ಟ್ರಗಳು ಸೇರಿದಂತೆ ರಷ್ಯಾದ ವಿರುದ್ದ ವ್ಯಾಪಾರ ನಿರ್ಬಂಧಗಳನ್ನು ಹೇರಿದ್ದು ಚೀನಾ ರಷ್ಯಾದ ಬೆಂಬಲವಾಗಿ ನಿಂತಿದೆ. ನ್ಯಾಟೋ ಸದಸ್ಯ ರಾಷ್ಟ್ರಗಳನ್ನು ನಂಬಿದ್ದ ಉಕ್ರೇನ್ ಇದೀಗ ನ್ಯಾಟೋ ಮಾತುಕತೆಗಳಲ್ಲಿ ಸೀಮಿತವಾಗಿದೆ.

ಕಳೆದ ರಾತ್ರಿ ಸೈನಿಕರೊಂದಿಗೆ ಕಾಣಿಸಿಕೊಂಡ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೇಶದ ಜನರಿಗೆ ವಿಡಿಯೋ ಸಂದೇಶದ ಮೂಲಕ, ನಮ್ಮ ದೇಶದ ಉಳಿವಿಗಾಗಿ ಹೋರಾಡಬೇಕಿದೆ ಯುದ್ದಕ್ಕೆ ತಯಾರಾಗಿರಿ ಎಂದು ಉಕ್ರೇನ್ ರಾಜಧಾನಿಯ ಅಧ್ಯಕ್ಷ ಭವನದ ಹೊರಗೆ ನಾನು ಇಲ್ಲಿಯೇ ಇರುತ್ತೇನೆ ನನ್ನ ದೇಶದ ಉಳಿವಿಗೆ ಮೊದಲು ನನ್ನ ಬಲಿಯಾಗಲಿ ನಂತರ ನನ್ನ ಕುಟುಂಬ, ನಂತರ ನನ್ನ ದೇಶದ ಪ್ರಜೆ ಎಂದು ಹೇಳಿದ್ದಾರೆ.

ಈ ಹಿಂದೆ ಅಮೇರಿಕಾ ಉಕ್ರೇನ್ ಅಧ್ಯಕ್ಷರಿಗೆ ನೀವು ಅಮೇರಿಕಾ ಬಂದರೆ ಆಶ್ರಯ ನೀಡುವುದಾಗಿ ಹೇಳಿತ್ತು. ಇದನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ ಈ ಮೇಲಿನ ಮಾತುಗಳನ್ನು ಹೇಳಿದ್ದಾರೆ. ಸದ್ಯಕ್ಕೆ ಉಕ್ರೇನ್ ಉದ್ವಿಗ್ನ ಪರಿಸ್ಥಿತಿಯಲ್ಲಿದ್ದು ತನ್ನ ದೇಶದ ಪ್ರಜೆಗಳಿಗೆಲ್ಲಾ ಮಾದರಿ ಯುದ್ದ ಮತ್ತು ಅಸ್ತ್ರಪ್ರಯೋಗ ತರಬೇತಿಯನ್ನು ನೀಡುತ್ತಿದೆ. ಯುಟ್ಯೂಬ್ ಮತ್ತು ಸೋಸಿಯಲ್ ಮಿಡಿಯಾ ಮೂಲಕ ಉಕ್ರೇನ್ ಸೈನ್ಯ ಪ್ರಜೆಗಳಿಗೆ ಮಾಹಿತಿಯನ್ನು ನೀಡುತ್ತಿದೆ.