• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ರಾಜ್ಯದಲ್ಲಿ 993 ಅನಧಿಕೃತ ಶಾಲೆಗಳ ಹಾವಳಿ: ಪೋಷಕರಲ್ಲಿ ಹೆಚ್ಚಿದ ಆತಂಕ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ರಾಜ್ಯದಲ್ಲಿ 993 ಅನಧಿಕೃತ ಶಾಲೆಗಳ ಹಾವಳಿ: ಪೋಷಕರಲ್ಲಿ ಹೆಚ್ಚಿದ ಆತಂಕ
0
SHARES
16
VIEWS
Share on FacebookShare on Twitter
  • ರಾಜ್ಯದಲ್ಲಿದೆ 364 ಮಾನ್ಯತೆ ಪಡೆಯದ ಶಾಲೆಗಳು
  • ಅನಧಿಕೃತ ಶಾಲೆಗಳ ಹಾವಳಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ನಿಯಂತ್ರಣದ ಕೊರತೆ
  • ಶಿಕ್ಷಣ ನೀತಿ ವರದಿ ಶುಲ್ಕ ನಿಯಂತ್ರಣಕ್ಕಾಗಿ ನೂತನ ಬೇಡಿಕೆ

Bengaluru: ರಾಜ್ಯದಲ್ಲಿ ಅನಧಿಕೃತ ಶಾಲೆಗಳ(Unofficial school) ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಪೋಷಕರಿಗೂ ಸರ್ಕಾರಕ್ಕೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 993 ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಬಹಿರಂಗವಾಗಿದೆ.

ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಅಧಿಕೃತ ಅನುಮತಿ ಇಲ್ಲದಿದ್ದರೂ, ಅನೇಕ ಶಾಲೆಗಳು ತಮ್ಮದೇ ರೀತಿಯಲ್ಲಿ

ವಿದ್ಯಾರ್ಥಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿವೆ. “ನಮ್ಮಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ” ಎಂದು ಆಕರ್ಷಕವಾಗಿ ಹೇಳಿ ಪೋಷಕರನ್ನು ನಂಬಿಸಲು ಯತ್ನಿಸುತ್ತಿವೆ.

ಆದರೆ ಹಿನ್ನಲೆಯಲ್ಲಿ ಪರವಾನಗಿ ಸಮಸ್ಯೆ ಇರುವುದು ಪೋಷಕರನ್ನು ಆತಂಕಕ್ಕೊಳಪಡಿಸಿದೆ. ಶಾಲೆಗಳ ಹೆಸರುಗಳನ್ನು ಸರ್ಕಾರ ಬಹಿರಂಗಪಡಿಸದಿರುವುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.

ಇದರ ವಿರುದ್ಧ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ (Federation of Private School Educational Institutions) ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರವೇ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲು ಹಿಂಜರಿಯುತ್ತಿರುವುದು ಪಾರದರ್ಶಕತೆಯ ಕೊರತೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

unauthorized schools in state
ಪೋಷಕರ ಹಿತಾಸಕ್ತಿಗಾಗಿ ತಕ್ಷಣವೇ ಅನಧಿಕೃತ ಶಾಲೆಗಳ ಹೆಸರುಗಳನ್ನು ಪ್ರಕಟಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.ಅನಧಿಕೃತ ಶಾಲೆಗಳ ವಿಭಜನೆ

ಅಧಿಕೃತ ಅಂಕಿಅಂಶಗಳ ಪ್ರಕಾರ:

  • ನೋಂದಣಿ ಪಡೆಯದಿರುವ ಶಾಲೆಗಳು – 27
  • ಉನ್ನತೀಕರಣಗೊಂಡ ಶಾಲೆಗಳು – 21
  • ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯ ಬೋಧನೆ ನಡೆಸುವವು – 89
  • ಅನಧಿಕೃತ ಮಾಧ್ಯಮಗಳು – 19
  • ಹೆಚ್ಚುವರಿ ವಿಭಾಗಗಳನ್ನು ಹೊಂದಿರುವವು – 46
  • ಅನುಮತಿ ಪಡೆಯದೇ ಸ್ಥಳಾಂತರಗೊಂಡಿರುವವು – 247
  • ಒಂದೇ ಕಡೆ ಎರಡು ಪಠ್ಯಕ್ರಮ ಬೋಧನೆ ಮಾಡುವವು – 79
  • ರಾಜ್ಯ ಪಠ್ಯಕ್ರಮ ಅನುಮತಿ ಪಡೆದು ಬೇರೆ ಪಠ್ಯ ಪುಸ್ತಕ ಬಳಸುವವು – 101
  • ಮಾನ್ಯತೆ ಪಡೆಯದೇ ಕಾರ್ಯನಿರ್ವಹಿಸುತ್ತಿರುವವು – 364

ಈ ಅಂಕಿಅಂಶಗಳು ಶಿಕ್ಷಣ ಕ್ಷೇತ್ರದಲ್ಲಿ ನಿಯಮ ಪಾಲನೆ ಎಷ್ಟು ಕಡೆಗಣನೆಯಾಗಿದೆ ಎಂಬುದನ್ನು ತೋರಿಸುತ್ತವೆ. ಸಾಮಾನ್ಯವಾಗಿ ಪ್ರತಿವರ್ಷ ಶಾಲಾ ಆರಂಭಕ್ಕೂ ಮುಂಚಿತವಾಗಿ

ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಎರಡು ತಿಂಗಳ ನಂತರ ಮಾತ್ರ ಸರ್ಕಾರ ಪಟ್ಟಿ ಹೊರತಂದಿದೆ.

ಅದೂ ಯಾವ ಶಾಲೆಗಳು ಅನಧಿಕೃತ ಎಂಬುದನ್ನು ಸ್ಪಷ್ಟಪಡಿಸದೇ ಬಿಟ್ಟಿದೆ. ಇದರಿಂದಾಗಿ ವಿಶೇಷವಾಗಿ ಬೆಂಗಳೂರು ನಗರದಲ್ಲಿರುವ ಶಾಲೆಗಳ ಬಗ್ಗೆ ಶಂಕೆ ಹೆಚ್ಚಾಗಿದೆ.

ಸರ್ಕಾರದ ಶಿಕ್ಷಣ ನೀತಿ ವರದಿ (SEP) ಕುರಿತು ಖಾಸಗಿ ಶಾಲಾ ಒಕ್ಕೂಟ(Private School Union) ಭಾಗಶಃ ಒಪ್ಪಿಗೆ ಸೂಚಿಸಿದೆ. ಕೆಲವು ಅಂಶಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಬಹುತೇಕ ಸಲಹೆಗಳನ್ನು ಸ್ವೀಕರಿಸಿದೆ.

ವಿಶೇಷವಾಗಿ ಶುಲ್ಕ ನಿಯಂತ್ರಣ ಕುರಿತು ಒಕ್ಕೂಟ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಸ್ತುತ ಇರುವ ಫೀಸ್ ಕಂಟ್ರೋಲ್ ಕಮಿಟಿ(Fee Control Committee) ಬದಲಿಗೆ ಫೀಸ್ ಡಿಟರ್ಮಿನೇಷನ್ ಕಮಿಟಿ(Fee Determination Committee) ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಇದರಿಂದ ಪೋಷಕರಿಗೂ ಲಾಭವಾಗುವುದರ ಜೊತೆಗೆ ಬೇರೆ ರಾಜ್ಯಗಳಿಂದ ಬಂದು ಶಾಲೆ ಆರಂಭಿಸಿ ಅನವಶ್ಯಕ ಶುಲ್ಕ ವಸೂಲಿ ಮಾಡುವ ಅಕ್ರಮಕ್ಕೂ ತಡೆ ಬೀಳಬಹುದು.

ಇನ್ನು ರಾಜ್ಯ ಸರ್ಕಾರ(State Govt) ಅನಧಿಕೃತ ಶಾಲೆಗಳ ಪೂರ್ಣ ಪಟ್ಟಿ ಹೆಸರು ಸಹಿತವಾಗಿ ಬಿಡುಗಡೆ ಮಾಡುವುದೇ ಮುಖ್ಯ ಪ್ರಶ್ನೆ. ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸ್ಪಷ್ಟ ಮಾಹಿತಿಯನ್ನು ಬಯಸುತ್ತಿದ್ದಾರೆ.

ಖಾಸಗಿ ಶಾಲೆಗಳೂ ತಮ್ಮ ಮಾನ್ಯತೆಯನ್ನು ಕಾಪಾಡಿಕೊಳ್ಳಲು ಸರ್ಕಾರದ ನಿರ್ಧಾರದ ಕಡೆ ಕಣ್ಣಿಟ್ಟಿವೆ.ಒಟ್ಟಿನಲ್ಲಿ, 993 ಅನಧಿಕೃತ ಶಾಲೆಗಳ ಉಪಸ್ಥಿತಿ ಶಿಕ್ಷಣ ಕ್ಷೇತ್ರಕ್ಕೆ(Education sector) ದೊಡ್ಡ ಎಚ್ಚರಿಕೆಯ ಸಂದೇಶವಾಗಿದೆ.

ಇದನ್ನು ಓದಿ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 500 ಹುದ್ದೆಗಳ ನೇಮಕಾತಿ

ಸರ್ಕಾರ ಶೀಘ್ರದಲ್ಲೇ ಪಾರದರ್ಶಕ ಮಾಹಿತಿಯನ್ನು ಹೊರಡಿಸಿದರೆ ಪೋಷಕರಿಗೂ, ಶಾಲೆಗಳಿಗೂ ನಿಟ್ಟುಸಿರು ಬರುವ ಸಾಧ್ಯತೆ ಇದೆ.

Tags: Education sectorPrivate SchoolSEPState GovtUnofficial school

Related News

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು
ಆರೋಗ್ಯ

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು

October 7, 2026
ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ

October 7, 2026
ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
ಪ್ರಮುಖ ಸುದ್ದಿ

ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ

October 7, 2026
ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್
ಪ್ರಮುಖ ಸುದ್ದಿ

ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್

October 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.