ಮೇ ತಿಂಗಳಲ್ಲಿ ನಿರುದ್ಯೋಗ (unemployment increase in India) ದರ ಏರಿಕೆ: ಭಾರತದ ಉದ್ಯೋಗ ಕ್ಷೇತ್ರಕ್ಕೆ ಹೊಸ ಎಚ್ಚರಿಕೆ
ಗ್ರಾಮೀಣ ಭಾರತದಲ್ಲಿ ಉದ್ಯೋಗ ಅವಕಾಶಗಳ ಕೊರತೆ ಹೆಚ್ಚಳ; ಐಟಿ ಕ್ಷೇತ್ರದಲ್ಲಿಯೂ ಬೇಡಿಕೆ ಇಳಿಕೆ
ದುರ್ಬಲಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆ: ಯುವಜನರ ಭವಿಷ್ಯದ ಮೇಲೆ ಹೆಚ್ಚುತ್ತಿರುವ ಅನಿಶ್ಚಿತತೆ.
New Delhi: ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಮತ್ತೆ ಗಂಭೀರ (unemployment increase in India) ಸ್ವರೂಪ ಪಡೆದುಕೊಳ್ಳುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಅಂಕಿಅಂಶ ಕಚೇರಿ (NSO)ಯ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ (PLFS) ವರದಿ ಪ್ರಕಾರ, 2026ರ ಮೇ ತಿಂಗಳಲ್ಲಿ ದೇಶದ ನಿರುದ್ಯೋಗ ದರವು 5.5 ಶೇಕಡಾಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಇದು 5.2 ಶೇಕಡಾ ಇತ್ತು.

ಕಳೆದ 11 ತಿಂಗಳಲ್ಲೇ ಇದು ಅತ್ಯಧಿಕ ಮಟ್ಟವಾಗಿದ್ದು, ಉದ್ಯೋಗಾವಕಾಶಗಳ ಕುಸಿತದ ಬಗ್ಗೆ ಹೊಸ ಆತಂಕಗಳನ್ನು ಹುಟ್ಟಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅವಕಾಶಗಳು ದುರ್ಬಲಗೊಂಡಿರುವುದು ಈ ಏರಿಕೆಗೆ ಪ್ರಮುಖ ಕಾರಣವಾಗಿದೆ.
ನಗರ ಪ್ರದೇಶಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಸುಧಾರಣೆ ಕಂಡುಬಂದಿದ್ದರೂ, ಒಟ್ಟಾರೆ ಕಾರ್ಮಿಕ (unemployment increase in India) ಮಾರುಕಟ್ಟೆ ಒತ್ತಡಕ್ಕೆ ಒಳಗಾಗಿರುವುದು ಸ್ಪಷ್ಟವಾಗಿದೆ. ಈ ಬೆಳವಣಿಗೆ ದೇಶದ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆ ಹೆಚ್ಚು ತೀವ್ರವಾಗಿದೆ. ಗ್ರಾಮೀಣ ಪುರುಷರ ನಿರುದ್ಯೋಗ ದರ ಏಪ್ರಿಲ್ ತಿಂಗಳ 4.7 ಶೇಕಡಾದಿಂದ ಮೇ ತಿಂಗಳಲ್ಲಿ 5.2 ಶೇಕಡಾಕ್ಕೆ ಏರಿಕೆಯಾಗಿದೆ. ಮಹಿಳೆಯರ ನಿರುದ್ಯೋಗ ದರವೂ 5.4 ಶೇಕಡಾದಿಂದ 5.6 ಶೇಕಡಾಕ್ಕೆ ಏರಿಕೆಯಾಗಿದೆ.
ನಗರ ಪ್ರದೇಶಗಳಲ್ಲಿ ಪುರುಷರ ನಿರುದ್ಯೋಗ ದರ 5.9 ಶೇಕಡಾದಲ್ಲೇ ಸ್ಥಿರವಾಗಿದ್ದರೆ, ಮಹಿಳೆಯರ ನಿರುದ್ಯೋಗ ದರ 8.5 ಶೇಕಡಾದಿಂದ 8.2 ಶೇಕಡಾಕ್ಕೆ ಸ್ವಲ್ಪ ಇಳಿಕೆಯಾಗಿದೆ.
ಆದರೆ ಈ ಅಂಕಿಅಂಶಗಳು ಒಟ್ಟಾರೆ ಪರಿಸ್ಥಿತಿ ಸುಧಾರಿಸಿದೆ ಎಂಬುದನ್ನು ಸೂಚಿಸುವುದಿಲ್ಲ. ಉದ್ಯೋಗ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದ್ದು, ಹೆಚ್ಚಿನ ಸಂಖ್ಯೆಯ ಜನರು
ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿರುವುದು ಗೋಚರಿಸುತ್ತದೆ. ವಿಶೇಷವಾಗಿ ಯುವಜನತೆ ಮತ್ತು ಹೊಸದಾಗಿ ಪದವಿ ಪಡೆದವರಲ್ಲಿ ಉದ್ಯೋಗದ ಅನಿಶ್ಚಿತತೆ ಹೆಚ್ಚುತ್ತಿದೆ.
ಉದ್ಯೋಗ ಮಾರುಕಟ್ಟೆಯ ಮೇಲೆ ಹಲವು ಆರ್ಥಿಕ ಮತ್ತು ಋತುಮಾನಿಕ ಅಂಶಗಳು ಪರಿಣಾಮ ಬೀರಿವೆ. ದೇಶದ ಕೈಗಾರಿಕಾ ನಗರಗಳಿಂದ ಕಾರ್ಮಿಕರ ವಲಸೆ, ಅನಿಲ (LPG)
ಸಂಬಂಧಿತ ಸವಾಲುಗಳು ಹಾಗೂ ಕೆಲವು ರಾಜ್ಯಗಳ ಚುನಾವಣಾ ಚಟುವಟಿಕೆಗಳು ಉದ್ಯೋಗದ ಮೇಲೆ ಪರೋಕ್ಷ ಪರಿಣಾಮ ಬೀರಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ದೇಶದ ಪ್ರಮುಖ ಉದ್ಯೋಗ ಸೃಷ್ಟಿ ವಲಯವಾಗಿರುವ ಐಟಿ ಕ್ಷೇತ್ರದಲ್ಲಿಯೂ ಮೇ ತಿಂಗಳಲ್ಲಿ ಉದ್ಯೋಗ ಬೇಡಿಕೆ ಕುಸಿದಿದೆ. ತಿಂಗಳ ಆಧಾರದ ಮೇಲೆ ತಾಂತ್ರಿಕ ಉದ್ಯೋಗಗಳ ಬೇಡಿಕೆ ಸುಮಾರು 2 ಶೇಕಡಾ ಇಳಿಕೆಯಾಗಿರುವುದು ಗಮನಾರ್ಹ ಸಂಗತಿ.
ಆದಾಗ್ಯೂ, ವಾರ್ಷಿಕ ಮಟ್ಟದಲ್ಲಿ ಐಟಿ ಉದ್ಯೋಗ ಬೇಡಿಕೆ 5 ಶೇಕಡಾ ಏರಿಕೆಯಾಗಿದೆ ಎಂಬುದು ಸ್ವಲ್ಪ ಸಮಾಧಾನಕರ ಬೆಳವಣಿಗೆಯಾಗಿದೆ. ಆದರೂ ಹೊಸ ನೇಮಕಾತಿಗಳ ವೇಗ
ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬುದು ಉದ್ಯೋಗ ಮಾರುಕಟ್ಟೆಯ ಪ್ರಮುಖ ಸವಾಲಾಗಿ ಉಳಿದಿದೆ.ಕಾರ್ಮಿಕ ಶಕ್ತಿ ಭಾಗವಹಿಸುವಿಕೆ ದರ (LFPR) ಕೂಡ ಕುಸಿತ ಕಂಡಿದೆ.
15 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಉದ್ಯೋಗದಲ್ಲಿರುವ ಅಥವಾ ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿರುವವರ ಪ್ರಮಾಣ ಮೇ ತಿಂಗಳಲ್ಲಿ 54.4 ಶೇಕಡಾಗಿದ್ದು, ಏಪ್ರಿಲ್‌ನಲ್ಲಿ ಇದು 55 ಶೇಕಡಾ ಇತ್ತು.
ಗ್ರಾಮೀಣ ಪ್ರದೇಶಗಳಲ್ಲಿ LFPR 56.6 ಶೇಕಡಾ ಇದ್ದರೆ, ನಗರ ಪ್ರದೇಶಗಳಲ್ಲಿ ಇದು 49.8 ಶೇಕಡಾ ಆಗಿದೆ. ಇದೇ ವೇಳೆ ಉದ್ಯೋಗಿ-ಜನಸಂಖ್ಯೆ ಅನುಪಾತ (WPR) ಕೂಡ ಇಳಿಕೆಯಾಗಿದೆ.
ಮೇ ತಿಂಗಳಲ್ಲಿ ಒಟ್ಟಾರೆ WPR 51.4 ಶೇಕಡಾ ದಾಖಲಾಗಿದ್ದು, ಏಪ್ರಿಲ್‌ನಲ್ಲಿ ಇದು 52.2 ಶೇಕಡಾ ಇತ್ತು. ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಸುಮಾರು 0.3
ಶೇಕಡಾ ಅಂಕಗಳಷ್ಟು ಕುಸಿತ ದಾಖಲಾಗಿದೆ. ಇದು ಉದ್ಯೋಗಾವಕಾಶಗಳು ಜನಸಂಖ್ಯೆಯ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿ ಹೆಚ್ಚುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ ವರದಿ ಪ್ರಕಾರ, ಕಾರ್ಮಿಕ ಮಾರುಕಟ್ಟೆ ನಿಧಾನಗತಿಗೆ ಒಳಗಾಗಿರುವುದು ಸ್ಪಷ್ಟವಾಗಿದೆ. ಆರ್ಥಿಕ ಚಟುವಟಿಕೆಗಳಲ್ಲಿನ
ಋತುಮಾನಿಕ ಬದಲಾವಣೆಗಳು, ಉದ್ಯೋಗ ಸೃಷ್ಟಿಯ ಮಂದಗತಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿನ ಒತ್ತಡಗಳು ಈ ಪರಿಸ್ಥಿತಿಗೆ ಕಾರಣವಾಗಿವೆ.
ನಿರುದ್ಯೋಗದ ಪ್ರಮಾಣ ಏರಿಕೆಯಾಗುತ್ತಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಸವಾಲಾಗಬಹುದು. ಸರ್ಕಾರವು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಹೊಸ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ಸಣ್ಣ ಕೈಗಾರಿಕೆಗಳು, ಕೃಷಿ ಆಧಾರಿತ ಉದ್ಯಮಗಳು ಮತ್ತು ಹೊಸ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಹೂಡಿಕೆ ಅಗತ್ಯವಾಗಿದೆ.
ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ಮಾತ್ರ ದೇಶದ ಆರ್ಥಿಕ ಸ್ಥಿರತೆ ಮತ್ತು ಯುವಜನರ ಭವಿಷ್ಯವನ್ನು ಭದ್ರಗೊಳಿಸಲು ಸಾಧ್ಯವಾಗುತ್ತದೆ.
ಇದನ್ನು ಓದಿ : https://vijayatimes.com/doctor-prescription-for-purchasing-syrup/