ಮೊಮೋಸ್ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್. ಯಾಕಂದ್ರೆ ಕೆಲವೊಂದು ಆಹಾರಗಳು ನಮಗೆ ಆರೋಗ್ಯದ ಬದಲು ಬರೀ ರೋಗ ಕೊಡ್ತವೆ. ಇಂಥಾ (Unhealthy momos) ಆಹಾರದ ಸಾಲಿಗೆ

ಈಗ ಮೊಮೋಸ್ ಕೂಡ ಸೇರ್ತಿದೆ. ಅದು ಹೇಗೆ ಅಂತ ಒಂದೊಂದಾಗಿಯೆ (Unhealthy momos) ಹೇಳ್ತೀನಿ.
ರಿಫೈನ್ಡ್ ಹಿಟ್ಟು ಅಪಾಯಕಾರಿ
ಮೊಮೋಸಗಳನ್ನು ರಿಫೈನ್ಡ್ ಹಿಟ್ಟಿ ಅಂದ್ರೆ ಮೈದಾದಿಂದ ತಯಾರಿಸುತ್ತಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಮೈದಾದಲ್ಲಿ ಅಝೋಡಿಕಾರ್ಬೊನಾಮೈಟ್, ಕ್ಲೋರಿನಗಸ್, ಬೆಂಜೋಯ್ಲ್ ಪೆರಾಕ್ಸೈಡ್ ನಂಥಾ ಅನೇಕ
ಬ್ಲೀಚಿಂಗ್ ರಾಸಾಯನಿಕಗಳನ್ನು ಬಳಸ್ತಾರೆ. ಈ ರಾಸಾಯನಿಕಗಳು ನಮ್ಮ ಮೇದೋಜೀರಕ ಗ್ರಂಥಿಯನ್ನು ಹಾನಿಗೊಳಿಸುವುದಲ್ಲದೆ ಮಧುಮೇಹವನ್ನು ಉಂಟು ಮಾಡಬಹುದು. ಚೀಪ್ ಕ್ವಾಲಿಟಿ ಮಾಂಸ ಬಳಕೆ
ಮೊಮೋಸ್ ಕಡಿಮೆ ಬೆಲೆಗೆ ಸಿಗೋ ಖಾದ್ಯ ಅಲ್ವಾ. ಆದ್ರೆ ಒಂದು ನೆನಪಿಟ್ಟುಕೊಳ್ಳಿ ಮೊಮೋ ಮಾರುವವ ಚೀಪ್ ರೇಟ್‌ಗೆ ಅದನ್ನ ಮಾರ್ಬೇಕಾದ್ರೆ ಚೀಪ್ ಕ್ವಾಲಿಟಿ ವಸ್ತುವನ್ನೇ ಬಳಸಬೇಕು ಅಲ್ವಾ.
ಯಸ್, ಇಲ್ಲಿ ಆಗ್ತಿರೋದು ಅದೇ. ರಸ್ತೆ ಬದಿಯಲ್ಲಿ ಸಿಗೋ ಮೊಮೋಸ್‌ಗೆ ತುಂಬಾ ಕಡಿಮೆ ಬೆಲೆಗೆ ಸಿಗೋ ರೋಗಪೀಡಿತ ಅಥವಾ ಆಗ್ಲೇ ಸತ್ತಿರುವ ಕೋಳಿಯ ಮಾಂಸವನ್ನು ಬಳಸ್ತಾರೆ ಎಂದು
ಇದನ್ನು ಓದಿ: ಟೊಮೆಟೊ ಬೆಲೆ ಹೆಚ್ಚಳ ಬೆನ್ನಲ್ಲೇ, ಹೋಟೆಲ್ ಗಳ ತಿಂಡಿ ಬೆಲೆ ಶೇ. 10ರಷ್ಟು ಏರಿಕೆ
ತಿಳಿದು ಬಂದಿದೆ.ಕಳಪೆ ಗುಣಮಟ್ಟದ ತರಕಾರಿ ಬಳಕೆ ಇನ್ನು ಇದಕ್ಕೆ ಬಳಸುವಂತಹ ತರಕಾರಿ ಕೂಡ ಗುಣಮಟ್ಟದಲ್ಲಿ ಇರಲ್ಲ. ಕೊಳೆತ ಅಥವಾ ತುಂಬಾ ಕಳಪೆ
ಗುಣಮಟ್ಟದ ತರಕಾರಿ ಬಳಸ್ತಾರೆ. ಇದರಲ್ಲಿ ಇ-ಕೋಲಿಯಂತಹ ಬ್ಯಾಕ್ಟೀರಿಯಗಳು ನೆಲೆಸಿರ್ತವೆ.
ಇಂತಹ ಮೊಮೊಸ್‌ಗಳು ನಮ್ಮ ಜೀರ್ಣಾಂಗದ ಒಳಗೆ ತೀವ್ರ ಸೋಂಕನ್ನು ಉಂಟು ಮಾಡಬಹುದು. ಖಾರದ ಚಟ್ನಿ ಅಲ್ಸರ್‌ಗೆ ಮೂಲ ಮೊಮೊಸ್ ಎಂದ ಕೂಡಲೇ ನಮಗೆ ಮೊದಲು ನೆನಪಾಗುವುದು ಖಾರ
ಖಾರ ಕೆಂಪು ಚಟ್ನಿ. ಆದ್ರೆ ಈ ಚಟ್ನಿಗೆ ಬಳಸೋ ಮೆಣಸಿನ ಕಾಯಿ ಗುಣಮಟ್ಟ ಕಳಪೆಯಾಗಿರುತ್ತೆ. ಅಲ್ಲದೆ ನಿರಂತರವಾಗಿ ಅತೀ ಖಾರದ ಚಟ್ನಿ ಸೇವಸಿದ್ರೆ ಅಲ್ಸರ್, ರಕ್ತಸ್ರಾವ ಅಥವಾ ಫೈಲ್ಸ್ ಗೆ ಬರಬಹುದು ಜೋಕೆ !
MSG ಬಳಕೆ ಅಪಾಯಕಾರಿ
ಮೊಮೊಸ್ ನಲ್ಲಿ ಮೋನೋಸೋಡಿಯಂ ಗ್ಲುಟಮೇಟ್ ಅಂದ್ರೆ MSG ಅಥವಾ ಅಜಿನಮೋಟೋ ಬಳಸ್ತಾರೆ. ಇದರ ನಿರಂತರ ಸೇವನೆಯಿಂದ ನರ ದೌರ್ಬಲ್ಯವುಂಟಾಗಬಹುದು. ಇದನ್ನು ತಿಂದ್ರೆ ಬೆವರು,

ಎದೆ ನೋವು, ವಾಕರಿಕೆ ಮತ್ತು ಹೃದಯ ಬಡಿತ ಹೆಚ್ಚಾಗುತ್ತೆ. ಅಷ್ಟೇ ಅಲ್ಲ ಮೊಮೋಸ್ ಒಳಗೆ ತುಂಬಿಸುವ ಎಲೆಕೋಸನ್ನು ಸರಿಯಾಗಿ ಬೇಯಿಸದಿದ್ದರೆ ಅದರಲ್ಲಿರುವ ಲಾಡಿ ಹುಳಗಳ ತತ್ತಿ ದೇಹದೊಳಗೆ
ಸೇರಿ ಅದು ಮೆದುಳು ಅಥವಾ ದೇಹದ ಉಳಿದ ಭಾಗದಲ್ಲಿ ಸೇರಿ ಮರಿಯಾಗಿ ಮಾರಣಾಂತಿಕ ಸ್ಥಿತಿಗೆ ತಲುಪಿಸಬಹುದು
ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಕೇಟರಿಂಗ್ ಮತ್ತು ನ್ಯೂಟ್ರಿಷನ್ ಸಂಸ್ಥೆಯು ನಡೆಸಿರುವ ಅಧ್ಯಯನದಲ್ಲಿ ಬೀದಿ ಬದಿಯಲ್ಲಿ ಸಿಗುವ ಮೊಮೋ, ಸಮೋಸಗಳು, ಗೋಲ್ಗಪ್ಪಗಳು,
ಬರ್ಗರ್ ಗಳಲ್ಲಿ ಇ-ಕೋಲಿ ಬ್ಯಾಕ್ಟೀರಿಯಾಗಳು ಅಪಾಯಕಾರಿ ಮಟ್ಟದಲ್ಲಿರುತ್ತೆ ಅನ್ನೋ ಅಂಶ ಬಯಲಾಗಿದೆ. ಹಾಗಾಗಿ ಇನ್ಮುಂದೆ ಮೋಮೋಸ್ ತಿನ್ನೋ ಮುನ್ನ ಎಚ್ಚರವಹಿಸಿ. ಹೈಜೀನ್ ಆಗಿರೋ
ಜಾಗದಲ್ಲೇ ಆಹಾರ ಸೇವಿಸಿ.
- ಭವ್ಯಶ್ರೀ ಆರ್.ಜೆ