ಇಂದು ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ (Union Budget 2024) ಮಂಡನೆ ಆಗ್ತಿದೆ. ಪ್ರಧಾನಿ (Union Budget 2024-Nirmala Sitaraman) ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ
ಲೋಕಸಭೆ ಚುನಾವಣೆಗೆ ಹೋಗುವುದಕ್ಕೂ ಮುನ್ನ ಮಂಡಿಸಲಿರುವ ಕೊನೆಯ ಬಜೆಟ್ ಇದಾಗಿದ್ದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ (Nirmala Sitaraman) ಇಂದು ಬೆಳಗ್ಗೆ
11 ಗಂಟೆಗೆ ಲೋಕಸಭೆಯಲ್ಲಿ (Union Budget 2024-Nirmala Sitaraman) ಮಂಡನೆ ಮಾಡಲಿದ್ದಾರೆ.

ಲೋಕಸಭೆಯಲ್ಲಿ ನಿರ್ಮಲಾ ಮಂಡಿಸಲಿರುವ ಬಜೆಟ್ ಅನ್ನು ನಂತರ ರಾಜ್ಯಸಭೆಯಲ್ಲೂ ಮಂಡಿಸಲಾಗುತ್ತದೆ. ನಂತರ ಚರ್ಚೆ ನಡೆಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆಯಲಾಗುತ್ತದೆ.
ಬಜೆಟ್ ಮುನ್ನಾದಿನ ಮಂಡಿಸಬೇಕಾದ ಹಣಕಾಸು ಸಮೀಕ್ಷಾ ವರದಿಯನ್ನು ಈ ಬಾರಿ ಕೇಂದ್ರ ಸರ್ಕಾರ ಮಂಡಿಸದಿರಲು ನಿರ್ಧರಿಸಿದೆ.ಚುನಾವಣೆಗೆ ಹೋಗುವುದಕ್ಕೂ ಮುನ್ನ ಸರ್ಕಾರಗಳು ಪೂರ್ಣ
ಪ್ರಮಾಣದ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಹೀಗಾಗಿ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ.ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಈ ವರ್ಷದ ವಾರ್ಷಿಕ
ಹಣಕಾಸು ಹೇಳಿಕೆ ಸ್ವಲ್ಪ ಭಿನ್ನವಾಗಿದೆ.
ಈ ಬಾರಿ ಯಾವೆಲ್ಲ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಸಿಗಬಹುದು?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ತೆರಿಗೆದಾರ ಸ್ನೇಹಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ ಘೋಷಣೆಗಳು ಇರುವುದಿಲ್ಲ ಎಂಬ
ಮಾತುಗಳೂ ಕೇಳಿ ಬಂದಿವೆ.
- ವಿತ್ತೀಯ ಕೊರತೆ ಗುರಿಯನ್ನು ಜಿಡಿಪಿಯ (GDP) ಶೇ.5.3ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ. ಆಗ ಸರ್ಕಾರವು ಈಗ ಮಾಡುತ್ತಿರುವುದಕ್ಕಿಂತ ಶೇ.10ರಷ್ಟು ಹೆಚ್ಚು ಖರ್ಚು ಮಾಡಲು ಸಾಧ್ಯವಾಗುತ್ತದೆ.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ನೀಡುತ್ತಿರುವ ನೆರವನ್ನು ಈಗಿರುವ 6000 ರು.ನಿಂದ 9000 ರು.ಗೆ ಏರಿಸುವ ಸಾಧ್ಯತೆಯಿದೆ.
- ಹಣದುಬ್ಬರದ ಬಿಸಿ ಕಡಿಮೆ ಮಾಡಲು ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಹೊಸ ಹಾಗೂ ಹಳೆ ಎರಡೂ ತೆರಿಗೆ ಪದ್ಧತಿಯಡಿ 50,000 ರು.ಗೆ ಏರಿಸುವ ಸಾಧ್ಯತೆಯಿದೆ.

- ಆದಾಯ ತೆರಿಗೆ ದರಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಆದರೆ, ತೆರಿಗೆ ವಿನಾಯ್ತಿ ಮಿತಿ ಮತ್ತು ತೆರಿಗೆ ಸ್ಲ್ಯಾಬ್‌ಗಳನ್ನು ಬದಲಿಸುವ ಸಾಧ್ಯತೆಯಿದೆ. ತೆರಿಗೆ ವಿನಾಯ್ತಿ ಮಿತಿಯನ್ನು ಈಗಿರುವ 5 ಲಕ್ಷ ರೂ.ಗಳಿಂದ 5.5 ಲಕ್ಷ ರು.ಗೆ ಏರಿಸುವ ಸಾಧ್ಯತೆಯಿದೆ.
- ಗ್ರಾಮೀಣ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲು ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ಅನುದಾನ ಹೆಚ್ಚಿಸಬಹುದು. ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು?
- ಎಂ.ಎಸ್.ಪಿ.ಗೆ ಕಾನೂನಾತ್ಮಕ ರೂಪ ಜಾರಿ ಮಾಡಬೇಕು.
- ಬರೀ ಘೋಷಣೆಗೆ ಮಾತ್ರ ಸೀಮಿತವಾಗಿರುವ ಗದಗ-ಯಲವಗಿ ರೈಲು ಮಾರ್ಗ ಅನುಷ್ಟಾನ ಗೊಳಿಸಲು ಅಗತ್ಯ ಅನುದಾನ.
- ಪೆಟ್ರೋಲ್-ಡೀಸೆಲ್, ಸಿಲಿಂಡರ್ (Petrol, Diesel, Cylinder) ದರ ಇಳಿಕೆ ಮಾಡಬೇಕು.
- ಕಳೆದ ವರ್ಷ ಬಜೆಟ್‌ನಲ್ಲಿಘೋಷಿಸಿರುವ ಬೇಡ್ತಿ-ವರದಾ ನದಿ ಜೋಡಣೆ ಜಾರಿಗೊಳಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು.
- ಕೃಷಿಕರ ಸಾಲ ಸೌಲಭ್ಯಕ್ಕೆ ಸಿಬಿಲ್ ವಿನಾಯಿತಿ.
- ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ10 ಲಕ್ಷ ರೂಪಾಯಿ ಸಾಲ ಸೌಲಭ್ಯ.
- ಕೃಷಿ ಉತ್ಪನ್ನಗಳನ್ನು ಜಿ.ಎಸ್.ಟಿ. (GST)ಯಿಂದ ಹೊರಗಿಡಬೇಕು.
- ಹಾವೇರಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಬೇಕು ಎನ್ನುವುದು ಕರ್ನಾಟಕ (Karnataka) ರಾಜ್ಯದ ಜನರ ಬೇಡಿಕೆಯಾಗಿದೆ.
ಇದನ್ನು ಓದಿ: ಕೇಂದ್ರ ಬಜೆಟ್ ಮಂಡನೆ: ಕರ್ನಾಟಕಕ್ಕೆ ಸಿಗುವುದೇ ಸಿಹಿ ಸುದ್ದಿ?
ಅಕ್ಷತಾ ಹೆಗ್ಡೆ