Visit Channel

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಖಾತೆಯ ಬ್ಲ್ಯೂಟಿಕ್​ ಮಾಯ: ಸ್ಪಷ್ಟನೆ ನೀಡಿದ ಟ್ವಿಟರ್​

E5skxkfVUAIHH_D

ನವದೆಹಲಿ, ಜು. 12: ಇತ್ತೀಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರ್​ಎಸ್​ಎಸ್​ನ ಕೆಲವು ಮುಖಂಡರ ಟ್ವಿಟರ್ (Twitter) ಖಾತೆಯ ದೃಢೀಕರಣ ಬ್ಯಾಡ್ಜ್​ ಬ್ಲ್ಯೂಟಿಕ್​ನ್ನು ತೆಗೆದು ಹಾಕುವ ಮೂಲಕ ಟ್ವಿಟರ್​ ವಿವಾದ ಸೃಷ್ಟಿಸಿತ್ತು. ಇದೀಗ ನೂತನ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್ ಅವರ ಖಾತೆಯ ಬ್ಲ್ಯೂಟಿಕ್​ನ್ನು ಟ್ವಿಟರ್​ ತೆಗೆದು ಹಾಕಿದೆ. ವಿದ್ಯುತ್​ – ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್​ ಚಂದ್ರಶೇಖರ್​ ಅವರ ಟ್ವಿಟರ್​ ಅಕೌಂಟ್​ನಲ್ಲಿ ಹೆಸರು ಬದಲಾವಣೆ ಆಗಿರುವ ಕಾರಣಕ್ಕೆ ನೀಲಿ ಟಿಕ್​​ನ್ನು ತೆಗೆದಿದ್ದಾಗಿ ಟ್ವಿಟರ್​ ಸ್ಪಷ್ಟನೆ ನೀಡಿದೆ.

ಇಷ್ಟುದಿನ ರಾಜ್ಯ ಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್​ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್​​ನಲ್ಲಿ ಸ್ಥಾನ ಪಡೆದು ಕೇಂದ್ರ ಮಂತ್ರಿಯಾಗಿದ್ದಾರೆ. ಈ ಹಿಂದೆ ಅವರು Rajeev MP ಹೆಸರಿನಲ್ಲಿ ಟ್ವಿಟರ್​ ಅಕೌಂಟ್​ ಹೊಂದಿದ್ದರು. ಆದರೀಗ Rajeev_GOI ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಟ್ವಿಟರ್​ನ ದೃಢೀಕರಣ ನೀತಿ ಅನ್ವಯ ಯಾವುದೇ ಬಳಕೆದಾರ ಬ್ಲ್ಯೂಟಿಕ್​ ಪಡೆಯುವಾಗ ಇರುವ ಹೆಸರನ್ನು ಮಧ್ಯದಲ್ಲಿ ಯಾವಾಗಲಾದರೂ ಬದಲಿಸಿದರೆ ಕೂಡಲೇ ಟ್ವಿಟರ್​ ಅವರಿಗೆ ನೀಡಲಾದ ಬ್ಲ್ಯೂಟಿಕ್​ ಬ್ಯಾಡ್ಜ್​​ನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ, ಬ್ಲ್ಯೂಟಿಕ್​ ಬ್ಯಾಡ್ಜ್​ ಪಡೆದ ಬಳಕೆದಾರರ ಖಾತೆಗಳು ಸದಾ ಸಕ್ರಿಯವಾಗಿ ಇರಬೇಕಾಗುತ್ತದೆ. ಹಾಗೊಮ್ಮೆ ಆರು ತಿಂಗಳ ಕಾಲ ನಿಷ್ಕ್ರಿಯವಾದರೆ ಅವರ ಅಕೌಂಟ್​​ಗೆ ನೀಡಲಾಗಿದ್ದ ಬ್ಲ್ಯೂಟಿಕ್​​ನ್ನು ತೆಗೆದುಹಾಕುತ್ತದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.