vijaya times advertisements
Visit Channel

ವಿಶ್ವದ ಮೊದಲ ಅನಾಮಧೇಯ ಯಂತ್ರ ‘ಜೆಸಿಬಿ’ಯ ಹೆಸರು ಹಾಗೂ ಬಣ್ಣದ ಹಿಂದಿದೆ ಕುತೂಹಲಕಾರಿ ಸಂಗತಿ!

JCB

ನಿರ್ಮಾಣ ಕಾರ್ಯವಿರಲಿ, ಕಾಮಗಾರಿಯೇ ಇರಲಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ(JCB) ಯಂತ್ರಗಳನ್ನು ಬಳಸುತ್ತಾರೆ. ಜೆಸಿಬಿ ಎಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆಯೋ ಅಲ್ಲಿ ಜನಜಂಗುಳಿಯೇ ಇರುತ್ತದೆ, ಇದರ ಕಾರ್ಯ ವೈಖರಿಯನ್ನು ನೋಡುವುದೇ ಚಂದ! ಬಹುತೇಕ ಎಲ್ಲಾ ಜೆಸಿಬಿ‌ ಮಷೀನ್ ಗಳೂ ಹಳದಿ ಬಣ್ಣದ್ದೇ ಆಗಿರುತ್ತವೆ. ಜೆಸಿಬಿಯನ್ನ ನೀವು ಕೆಂಪು, ನೀಲಿ, ಹಸಿರು ಹೀಗೆ ಬೇರೆ ಯಾವ ಬಣ್ಣಗಳಲ್ಲೂ ನೋಡಿರುವುದಿಲ್ಲ. ಅಷ್ಟಕ್ಕೂ ಜೆಸಿಬಿಗೆ ಏಕೆ ಹಳದಿ ಬಣ್ಣದಲ್ಲೇ ಇರುತ್ತದೆ ಅನ್ನೋದನ್ನ ನೀವು ಯೋಚಿಸಿದ್ದೀರಾ? ಜೆಸಿಬಿ ಹಾಗೂ ಅದರ ಬಣ್ಣದ ಬಗ್ಗೆ ನಿಮಗೆ ಗೊತ್ತಿರದ ರೋಚಕ ಮಾಹಿತಿಯನ್ನು ನಾವು ತಿಳಿಸುತ್ತೇವೆ.

 buldozer

ಜೆಸಿಬಿ ಒಂದು ಯಂತ್ರ ತಯಾರಿಕಾ ಕಂಪನಿಯಾಗಿದ್ದು, ಇದರ ಹೆಡ್ ಕ್ವಾರ್ಟರ್ಸ್ ಇಂಗ್ಲೆಂಡ್‌ನ ಸ್ಟಾಫರ್ಡ್‌ಶೈರ್‌ನಲ್ಲಿದೆ. ಅಂದರೆ ಇದು ಬ್ರಿಟಿಷ್ ಯಂತ್ರ ತಯಾರಿಕಾ ಕಂಪನಿ. ಇದರ ಯಂತ್ರಗಳನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಇದು ಹೆಚ್ಚಾಗಿ ನಿರ್ಮಾಣ ಸಂಬಂಧಿತ ಕೆಲಸಗಳಲ್ಲಿ ಬಳಸುವ ಯಂತ್ರಗಳನ್ನು ತಯಾರಿಸುತ್ತದೆ. ಈ ಕಂಪನಿಯ ಯೋಜನೆಗಳು ಪ್ರಪಂಚದ 4 ಖಂಡಗಳಲ್ಲಿವೆ. ಈ ಕಂಪನಿಯ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಇದು ವಿಶ್ವದ ಮೊದಲ ಅನಾಮಧೇಯ ಯಂತ್ರವಾಗಿದೆ. ಈ ಯಂತ್ರವನ್ನು 1945 ರಲ್ಲಿ ಪ್ರಾರಂಭಿಸಲಾಯಿತು.

ನಂತರ ಅದರ ಸೃಷ್ಟಿಕರ್ತರು ಹಲವು ದಿನಗಳವರೆಗೆ ಅದರ ಹೆಸರಿನ ಬಗ್ಗೆ ಯೋಚಿಸಿದರು, ಆದರೆ ಒಳ್ಳೆಯ ಹೆಸರು ಮಾತ್ರ ಸಿಗಲೇ ಇಲ್ಲ. ನಂತರ ಅದನ್ನು ಜೋಸೆಫ್ ಸಿರಿಲ್ ಬ್ಯಾಮ್‌ಫೋರ್ಡ್(ಜೆಸಿಬಿ) ಎಂದು ನಾಮಕರಣ ಮಾಡಲಾಯಿತು. ಜೆಸಿಬಿ ಭಾರತದಲ್ಲಿ ತನ್ನ ಕಾರ್ಖಾನೆಯನ್ನು ಆರಂಭಿಸಿದ ಮೊದಲ ಬ್ರಿಟಿಷ್ ಖಾಸಗಿ ಕಂಪನಿ ಎಂದು ನಿಮ್ಮಲ್ಲಿ ಬಹುತೇಕರಿಗೆ ತಿಳಿದಿರಬಹುದು. ಪ್ರಸ್ತುತ ಭಾರತವು ಜೆಸಿಬಿ ಯಂತ್ರಗಳ ವಿಶ್ವದ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ಜೋಸೆಫ್ ಸಿರಿಲ್ ಬ್ಯಾಮ್‌ಫೋರ್ಡ್‌ನ ಮೊದಲ ಯಂತ್ರವು ಟಿಪ್ಪಿಂಗ್ ಟ್ರೈಲರ್ ಆಗಿದ್ದು, ಇದನ್ನು 1945 ರಲ್ಲಿ ಲಾಂಚ್ ಮಾಡಲಾಯಿತು. ಆಗ ಅದರ ಮಾರುಕಟ್ಟೆ ಬೆಲೆ 45 ಪೌಂಡುಗಳು ಅಂದ್ರೆ ಸುಮಾರು 4000 ರೂಪಾಯಿಗಳು ಅಷ್ಟೇ!

JCB


ಆರಂಭದಲ್ಲಿ ಜೆಸಿಬಿ ಯಂತ್ರಗಳನ್ನು ಬಿಳಿ ಮತ್ತು ಕೆಂಪು ಬಣ್ಣಗಳಲ್ಲಿ ತಯಾರಿಸಲಾಗುತ್ತಿತ್ತು. ನಂತರ ಕಂಪನಿಯು ಜೆಸಿಬಿ ಬಣ್ಣವನ್ನು ಹಳದಿ ಬಣ್ಣಕ್ಕೆ ಬದಲಾಯಿಸಿತು. ಈಗ ಅವರು ತಮ್ಮ ಎಲ್ಲಾ ಯಂತ್ರಗಳನ್ನು ಹಳದಿ ಬಣ್ಣದಲ್ಲೇ ತಯಾರಿಸುತ್ತಾರೆ. ಇದಕ್ಕೆ ಕಾರಣವೂ ಇದೆ, ಹಳದಿ ಬಣ್ಣದ ಜೆಸಿಬಿಯನ್ನು ಉತ್ಖನನ ಸ್ಥಳದಲ್ಲಿ ದೂರದಿಂದ ಸುಲಭವಾಗಿ ನೋಡಬಹುದಾಗಿದೆ. ಇದರೊಂದಿಗೆ ಜನರು ಇಲ್ಲಿ ಜೆಸಿಬಿಯ ಉತ್ಖನನದ ಕೆಲಸ ನಡೆಯುತ್ತಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಎಂಬ ಉದ್ದೇಶದಿಂದ ಜೆಸಿಬಿಗೆ ಹಳದಿ ಬಣ್ಣವನ್ನೇ ಬಳಸುತ್ತಾರೆ.

  • ಪವಿತ್ರ

Latest News

Paneer
ಆರೋಗ್ಯ

ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ದೇಶ-ವಿದೇಶ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Mallikarjun Kharge
ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಚಿತ್ತ ಕಾಂಗ್ರೆಸ್ ಅಧ್ಯಕ್ಷ ಸ್ಥಾನದತ್ತ ; ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

ಈ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅವರು ಅಂಗೀಕರಿಸುವ ಸಾಧ್ಯತೆ ಇದ್ದು, ಹೊಸ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

PFI
ದೇಶ-ವಿದೇಶ

ಬಂಧಿತ PFI ಕಾರ್ಯಕರ್ತರನ್ನು 21 ದಿನಗಳ ಕಸ್ಟಡಿಗೆ ಕಳುಹಿಸಿದ NIA ಕೋರ್ಟ್!

ಬಂಧಿತರ ಮೇಲೆ ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿರುವ ಮತ್ತು ಹಿಂದೂ ಕಾರ್ಯಕರ್ತರನ್ನು ಹತ್ಯೆ(Murder) ಮಾಡಿರುವ ಆರೋಪವನ್ನು ಹೊರಿಸಲಾಗಿದೆ.