- ಪೋಷಕರ ಸಾಲಕ್ಕೆ ಮಗುವಿಗೆ ಹಿಂಸೆ
- 30 ಸಾವಿರ ಸಾಲ ಪಡೆದಿದ್ದ ದಂಪತಿ (Unrelenting microfinance menace)
- ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಅಂದು ಬಿಡಲಿಲ್ಲ
Mysore: ಬಡ್ಡಿ ಹಣವನ್ನ ಬಲವಂತದ ವಸೂಲಿ ಮಾಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಸುಗ್ರೀವಾಜ್ಞೆ (Ordinance) ತಂದ್ರೂ ಮೈಕ್ರೋ ಫೈನಾನ್ಸ್ ಕಾಟ ಮಾತ್ರ ತಪ್ಪಿಲ್ಲ.
ಅಪ್ಪ-ಅಮ್ಮ ಮಾಡಿದ ಸಾಲಕ್ಕೆ 7 ವರ್ಷದ ಮಗಳನ್ನ ಕರೆದೊಯ್ದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಮೈಸೂರಿನ (Mysore) ಟಿ.ನರಸಿಪುರ (T.Narasipura) ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ (Jalahalli village) ನಡೆದಿದೆ.
ಮೈಕ್ರೋ ಫೈನಾನ್ಸ್ (Micro Finance) ವರ್ತನೆಗೆ ಬೇಸತ್ತ ಬಾಲಕಿ ಪೋಷಕರು (parents) ಆಕ್ರೋಶ ಹೊರಹಾಕಿದ್ದಾರೆ.
ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ.
ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಅಂತ 7 ವರ್ಷದ ಹೆಣ್ಣು ಮಗುವನ್ನು ಕರೆದೊಯಿದ್ದ ಕಿರಾತಕರು, ನಿಮ್ಮ ತಾಯಿ ಎಲ್ಲಿ ತೋರಿಸು ಎಂದು ಮಗುವಿಗೆ ಹಿಂಸೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದ ನವೀನ್ (Naveen) ಹಾಗೂ ಪ್ರಮೀಳಾ (Pramila) ಎಂಬ ದಂಪತಿ ಬಜಾಜ್ ಮೈಕ್ರೋ ಫೈನಾನ್ಸ್(Bajaj Micro Finance)ನಿಂದ 30 ಸಾವಿರ ಸಾಲ ಪಡೆದಿದ್ದರಂತೆ.
ಬಳಿಕ ಸಮಯಕ್ಕೆ ಸರಿಯಾಗಿ 13 ತಿಂಗಳು ಲೋನ್ ಕಟ್ಟಿದ್ದಾರಂತೆ.

ಈ ತಿಂಗಳು ಲೋನ್ ಕಟ್ಟೋದು 4 ದಿನ ತಡವಾಗಿದಕ್ಕೆ ಮನೆಗೆ ಹುಡುಕಿಕೊಂಡು ಬಂದಿದ್ದಾರೆ. ಮನೆಗೆ ಬಂದ ಫೈನಾನ್ಸ ಸಿಬ್ಬಂದಿ (Finance staff), ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಹಿಂಸೆ ಕೊಟ್ಟಿದ್ದಾರೆ.
ಬಳಿಕ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ (Poorigali Village) ಅಜ್ಜಿಯ ಮನೆಯಲ್ಲಿದ್ದ ಮಗುವಿಗೆ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸು ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದರು ಎನ್ನಲಾಗ್ತಿದೆ.
ಮಗುವನ್ನು ರಸ್ತೆಯಲ್ಲೇ ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪವಿದೆ.
ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಸಂಜೆ ಬನ್ನಿ ಎಂದ್ರು ಕೇಳದ ಫೈನಾನ್ಸ್ ಸಿಬ್ಬಂದಿ ಈಗಲೇ ಹಣ ಬೇಕು ಎಂದು ಪೀಡಿಸಿದ್ದರಂತೆ.
ಮಗಳ ಜೊತೆ ಫೈನಾನ್ಸ್ ಸಿಬ್ಬಂದಿ ನಡೆದುಕೊಂಡ ರೀತಿಗೆ ಪೋಷಕರು ಸಿಟ್ಟಾಗಿದ್ದಾರೆ. 4 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ (Children’s Committee Operation) ವೇಳೆ ಘಟನೆ ವಿಚಾರ ಬೆಳಕಿಗೆ ಬಂದಿದೆ.
ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಡೆದುಕೊಂಡಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ (State Govt) ಮೈಕ್ರೋ ಫೈನಾನ್ಸ್ ಟಾರ್ಚರ್ ಗೆ ಕಡಿವಾಣ ಹಾಕಲು ಕಠಿಣ ನಿಯಮ ಜಾರಿಗೆ ತಂದಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಣ ವಸೂಲಿ ವಿಚಾರದಲ್ಲಿ ಯಾರಿಗೂ ತೊಂದರೆ ನೀಡಬಾರದು.
ಒಂದು ವೇಳೆ ಅಂತಹ ಪ್ರಕರಣ ಬೆಳಕಿಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. (Unrelenting microfinance menace)
ಇದನ್ನು ಓದಿ : ಥಗ್ ಲೈಫ್ ಬಿಡುಗಡೆಗೆ ಸುಪ್ರೀಂ ಆದೇಶ: ಕರ್ನಾಟಕದಲ್ಲಿ ಕನ್ನಡಿಗರ ಕೆಣಕಿ ಪಾರಾದ ಕಮಲ್ ಹಾಸನ್
ಅವರ ಆದೇಶಕ್ಕೂ ಕ್ಯಾರೇ ಎನ್ನದ ಸಿಬ್ಬಂದಿ ಹಣ ವಸೂಲಿಗಾಗಿ ಯಾವ ಹಂತದಲ್ಲಾದರೂ ಇಳಿಯುತ್ತಿದ್ದಾರೆ ಅನ್ನೋದಕ್ಕೆ ಮೈಸೂರು ಜಿಲ್ಲೆ ಮತ್ತೆ ಸಾಕ್ಷಿಯಾಗಿದೆ.