Lucknow : ಉತ್ತರ ಪ್ರದೇಶದ (Uttar Pradesh) ವಾರಣಾಸಿಯಲ್ಲಿರುವ 115 ವರ್ಷಗಳಷ್ಟು ಹಳೆಯದಾದ ಉದಯ್ ಪ್ರತಾಪ್ ಕಾಲೇಜಿನ (Uday Pratap College) ಜಾಗವು ತನಗೆ ಸೇರಿದ್ದು ಎಂದು ರಾಜ್ಯ ವಕ್ಫ್ ಮಂಡಳಿಯು ಪ್ರತಿಪಾದಿಸಿದ ನಂತರ ವಿವಾದ ಭುಗಿಲೆದ್ದಿದೆ.

ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ (Sunni Waqf) ಮಂಡಳಿಯು 100 ಎಕರೆಗಳಷ್ಟು ವ್ಯಾಪಿಸಿರುವ ಕಾಲೇಜು ಭೂಮಿ (College land) ಹಾಗೂ ಕಾಲೇಜಿನ ಕ್ಯಾಂಪಸ್ನೊಳಗಿನ ಮಸೀದಿ ವಕ್ಫ್ ಆಸ್ತಿಯಾಗಿದೆ ಎಂದು ಪ್ರತಿಪಾದಿಸಿದೆ. ಆದರೆ, ಕಾಲೇಜು ಆಡಳಿತ ಮಂಡಳಿ ಇದನ್ನು ಬಲವಾಗಿ ತಳ್ಳಿಹಾಕಿದ್ದು, ಈ ಜಮೀನು ದತ್ತಿ ಸಂಸ್ಥೆಗೆ ಸೇರಿದ್ದು, ಅದನ್ನು ವರ್ಗಾಯಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಡಿಸೆಂಬರ್ 2018 ರಲ್ಲಿ, ವಕ್ಫ್ ಬೋರ್ಡ್ (Waqf Board) ಕಾಲೇಜಿಗೆ ನೋಟಿಸ್ ಕಳುಹಿಸಿತು. ಚೋಟಿ ಮಸೀದಿ (Choti Masjid) ಮತ್ತು ಕಾಲೇಜಿನಲ್ಲಿರುವ (college) ಸಂಬಂಧಿತ ಆಸ್ತಿಯನ್ನು ಟೋಂಕ್ ನವಾಬ್ ವಕ್ಫ್ಗೆ ದಯಪಾಲಿಸಿದ್ದಾರೆ ಎಂದು ವಕ್ಫ್ ಬೋರ್ಡ್ ಪ್ರತಿಪಾದಿಸಿದೆ. ಆ ಸಮಯದಲ್ಲಿ ನೋಟಿಸ್ಗೆ ಪ್ರತಿಕ್ರಿಯಿಸಿದ ಕಾಲೇಜು ಅಧಿಕಾರಿಗಳು (College authorities) , ಉದಯ್ ಪ್ರತಾಪ್ ಕಾಲೇಜನ್ನು 1909 ರಲ್ಲಿ ಚಾರಿಟಬಲ್ ಎಂಡೋಮೆಂಟ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಲಾಗಿದೆ ಎಂದಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಪ್ರಕಾರ, ನೋಟಿಸ್ಗೆ ಉತ್ತರ ನೀಡಿದ ನಂತರ ವಕ್ಫ್ ಮಂಡಳಿಯು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆದರೆ 2022 ರಲ್ಲಿ, ವಕ್ಫ್ ಮಂಡಳಿಯಿಂದ ಮಸೀದಿ ನಿರ್ಮಾಣ ಮಾಡಲು ಪ್ರಯತ್ನ ನಡೆದಿತ್ತು, ಕಾಲೇಜಿನ ದೂರಿನ ನಂತರ ಪೊಲೀಸರು ಅದನ್ನು ಸ್ಥಗಿತಗೊಳಿಸಿದರು (Suspended) ಎಂದು ಉದಯ್ ಪ್ರತಾಪ್ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಸಿಂಗ್ ಹೇಳಿದ್ದಾರೆ.
ಈ ಮಧ್ಯೆ ಸದ್ಯ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿಯೇ (Winter session) ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ಆದರೆ ವಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇನ್ನಷ್ಟು ಕಾಲ ಪರಿಶೀಲನೆ ನಡೆಸಬೇಕೆಂದು ಮನವಿ ಮಾಡಿವೆ.